Health Tips: ಇಂದಿನ ಕಾಲದಲ್ಲಿ ಹೊಟೇಲ್‌ನಲ್ಲಿ ಸಿಗುವ ಮಾಕ್ಟೇಲ್, ಕಾಕ್ಟೇಲ್, ಮಿಲ್ಕ್ ಶೇಕ್ ಇವೆಲ್ಲವೂ ಬರೀ ರುಚಿ ಕೊಡುತ್ತದೆ ಅಷ್ಟೇ. ಏಕೆಂದರೆ, ಇದರಲ್ಲಿ ಹಾಲು, ಸಕ್ಕರೆ, ಕೆಲವು ಪ್ಲೇವರ್‌ಗಳನ್ನು ಸೇರಿಸಲಾಗುತ್ತದೆ. ಆದರೆ ಹಿಂದಿನ ಕಾಲದಿಂದಲೂ ಮನೆಯಲ್ಲಿ ಮಾಡಿಕೊಂಡು ಬರುತ್ತಿರುವ ಶರ್ಬತ್ ಸೇವನೆಯಿಂದ ಆರಾಮದಾಯಕ, ಆರೋಗ್ಯ ಎರಡೂ ಸಿಗುತ್ತದೆ. ಹಾಗಾದರೆ ಯಾವ ಶರ್ಬತ್ ಸೇವನೆ ಮಾಡಿದ್ರೆ, ಯಾವ ರೋಗದಿಂದ ಮುಕ್ತಿ ಸಿಗುತ್ತದೆ ಅಂತಾ ತಿಳಿಯೋಣ ಬನ್ನಿ..
ಗುಲಾಬಿ ಹೂವಿನ ಶರ್ಬತ್. ಫ್ರೆಶ್ ಆಗಿರುವ ಗುಲಾಬಿ ಹೂವು ಉಷ್ಣತೆಯಿಂದ ಕೂಡಿರುತ್ತದೆ. ಒಣಗಿದ ಗುಲಾಬಿ ಹೂವು ತಂಪನ್ನು ನೀಡುತ್ತದೆ. ಹಾಗಾಗಿ ನಿಮ್ಮ ದೇಹಕ್ಕೆ ಯಾವುದು ಉತ್ತಮವಾಗಿರುತ್ತದೆಯೋ, ಆ ಗುಲಾಬಿಯಿಂದ ನೀವು ಶರ್ಬತ್ ಮಾಡಬಹುದು. ಕಣ್ಣಿನ ಆರೋಗ್ಯ, ಹೃದಯದ ಆರೋಗ್ಯಕ್ಕೆ ಇದು ಉತ್ತಮವಾಗಿದೆ.
ಬೇಲದ ಹಣ್ಣಿನ ಶರ್ಬತ್. ಹೊಟ್ಟೆ ಸಮಸ್ಯೆ, ಮಲಬದ್ಧತೆ ಸಮಸ್ಯೆ ಇದ್ದವರು ಬೇಲದ ಹಣ್ಣಿನ ಶರ್ಬತ್ ಸೇವನೆ ಮಾಡಬೇಕು. ಇದು ಹೊಟ್ಟೆಯನ್ನ ಕ್ಲೀನ್ ಮಾಡುವುದರಲ್ಲಿ ಸಹಕಾರಿಯಾಗಿದೆ. ಸಂಧಿವಾತ ಇದ್ದವರು ಈ ಶರ್ಬತ್‌ನ್ನು ಮಿತವಾಗಿ ಸೇವಿಸಬಹುದು.
ಆಮ್ ಪನ್ನಾ. ಮಾವಿನ ಕಾಯಿಯನ್ನು ಬೇಯಿಸಿ, ಈ ಶರ್ಬತ್ ಮಾಡಲಾಗುತ್ತದೆ. ಉತ್ತರ ಭಾರತದವರು ಆಮ್ ಪನ್ನಾವನ್ನ ಹೆಚ್ಚಾಗಿ ತಯಾರಿಸಿ, ಸೇವಿಸುತ್ತಾರೆ. ಸರಿ ಮಾಡಲು ಇದು ಸಹಕಾರಿಯಾಗಿದೆ. ಮಾವಿನ ಹಣ್ಣಿನಿಂದ ಮಾಡುವ ಆಮ್ ಪನ್ನಾ ದೇಹವನ್ನು ತಂಪು ಮಾಡಿದ್ರೆ, ಮಾವಿನ ಕಾಯಿಯಿಂದ ಮಾಡಿದ ಆಮ್ ಪನ್ನಾ ದೇಹದ ಉಷ್ಣತೆ ಹೆಚ್ಚಿಸುತ್ತದೆ.
ಕಪ್ಪು ದ್ರಾಕ್ಷಿ ಶರ್ಬತ್. ಕೆಮ್ಮು, ಕಫ ಇದ್ದವರು ಕೂಡ ಈ ಶರ್ಬತನ್ನು ಮಿತವಾಗಿ ಕುಡಿಯಬಹುದು. ಇದರ ಸೇವನೆಯಿಂದ ಸಂಧಿವಾತಕ್ಕೂ ಪರಿಹಾರ ಸಿಗುತ್ತದೆ. ತ್ವಚೆಯ ಬಣ್ಣ ತಿಳಿಗೊಳಿಸಲು ಇದು ಸಹಕಾರಿಯಾಗಿದೆ. ದೇಹಕ್ಕೆ ಶಕ್ತಿ ನೀಡುವಲ್ಲಿ ಕಪ್ಪು ದ್ರಾಕ್ಷಿ ರಸ ಅನುಕೂಲಕರವಾಗಿದೆ.
ಇನ್ನು ಕೊನೆಯದಾಗಿ, ಯಾರಿಗೆ ಸೈನಸ್, ಸಂಧಿವಾತ, ತಲೆನೋವು, ಪದೇ ಪದೇ ಶೀತವಾಗುವ ಸಮಸ್ಯೆ ಇರುತ್ತದೆಯೋ, ಅಂಥವರು ವೈದ್ಯರ ಸಲಹೆ ಮೇರೆಗೆ, ಶರ್ಬತ್ ಸೇವನೆ ಮಾಡಬೇಕು. ಮತ್ತು ಯಾವುದೇ ಶರ್ಬತ್ ಮಾಡುವಾಗಲೂ, ಐಸ್ ವಾಟರ್ ಬಳಸದೇ ಶರ್ಬತ್ ಮಾಡಿದಾಗಲಷ್ಟೇ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?