Health tips: ಜೀರ್ಣಕ್ರಿಯೆ ಸಮಸ್ಯೆಯಿಂದಲೋ, ಫುಡ್ ಪಾಯ್ಸನ್ ಆಗಿಯೋ ಬೇಧಿ ಶುರುವಾಗುತ್ತದೆ. ಹಾಗೆ ಬೇಧಿ ಶುರುವಾದಾಗ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ವೈದ್ಯರ ಬಳಿ ಹೋಗಬೇಕೆಂದರೂ, ಹೋಗದ ಪರಿಸ್ಥಿತಿಯಾಗಬಹುದು. ಆದರೆ ಬೇಧಿಯನ್ನು ಕಂಟ್ರೋಲಿಗೆ ತಂದು ಬಳಿಕ, ವೈದ್ಯರ ಬಳಿ ಹೋಗುವ ಯೋಚನೆ ಮಾಡಬೇಕು. ಹಾಗಾಗಿ ನಾವಿಂದು ಬೇಧಿ ಶುರುವಾದಾಗ ಯಾವ ಆಹಾರ ತಿನ್ನಬೇಕು ಅಂತಾ ಹೇಳಲಿದ್ದೇವೆ.
ಬೇಧಿ ಶುರುವಾದಾಗ, ಅತೀ ತಣ್ಣಗಿನ ಮತ್ತು ಅತೀ ಬಿಸಿಯಾದ ಆಹಾರವನ್ನು, ದ್ರವ ಪದಾರ್ಥವನ್ನು ಸೇವಿಸಲೇಬಾರದು. ಬಿಸಿಯಾದ ನೀರು ಅಥವಾ ಆಹಾರವನ್ನಂತೂ ಸೇವಿಸಲೇಬಾರದು. ಇದರಿಂದ ಬೇಧಿ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಎಷ್ಟಾಗತ್ತೋ ಅಷ್ಟು ನೀರು ಕುಡಿಯಿರಿ. ಮಜ್ಜಿಗೆ, ಎಳನೀರು ಸೇವಿಸಿ. ಬೇಧಿ ಶುರುವಾದಾಗ, ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗುತ್ತದೆ. ಹಾಗಾಗಿ ನೀವು ನೀರು, ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಉತ್ತಮ.
ಹಸಿ ಖರ್ಜೂರ, ದಾಳಿಂಬೆ, ಸೇಬು ತಿನ್ನಬೇಕು. ಇದರಿಂದ ಬೇಧಿ ಕಂಟ್ರೋಲಿಗೆ ಬರುತ್ತದೆ. ಮೊಸರು ಅನ್ನ ಮತ್ತು ಮೆಂತ್ಯೆ ಹಿಟ್ಟನ್ನ ಬೆರೆಸಿ ಊಟ ಮಾಡಿ. ಇವೆಲ್ಲ ಆಹಾರವೂ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿಸುವುದಲ್ಲದೇ, ಬೇಧಿಯಾದಾಗ ನೀವು ಕಳೆದುಕೊಂಡ ಶಕ್ತಿಯನ್ನ ಕೂಡ ಮರಳಿ ನೀಡುವಲ್ಲಿ ಸಹಕಾರಿಯಾಗಿದೆ.
ಇದೆಲ್ಲ ಸೇವಿಸಿದರೂ, ಒಂದು ದಿನದಲ್ಲಿ ನಿಮ್ಮ ಬೇಧಿ ಕಂಟ್ರೋಲ್ ಆಗದಿದ್ದಲ್ಲಿ, ತಕ್ಷಣ ವೈದ್ಯರ ಬಳಿ ತೋರಿಸಿಕೊಳ್ಳಿ. ಏಕೆಂದರೆ, ನೀವು ಹೆಚ್ಚು ಲೇಟ್ ಮಾಡಿದಷ್ಟು, ಇದು ನಿಮ್ಮ ಪ್ರಾಣಕ್ಕೆ ಹಾನಿ ಮಾಡಬಹುದು. ಹಾಗಾಗಿ ಮನೆಮದ್ದಿಗಾಗಿ ಕಾಯದೇ, ತಡಮಾಡದೇ, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಿ.
ಕಾಳು ಮೆಣಸಿನಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಬಗೆಹರಿಸಬಹುದು ಗೊತ್ತಾ..?