Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರಾದ ಡಾ.ಆಂಜೀನಪ್ಪ ಅವರು, ಸರ್ಪ ಸುತ್ತಿಗೆ ಯಾವ ಔಷಧಿ ಬಳಸಬೇಕು..? ನಾಟಿ ಔಷಧಿನಾ..? ಅಥವಾ ಇಂಗ್ಲೀಷ್ ಔಷಧಿನಾ ಅಂತಾ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಸರ್ಪಸುತ್ತಿಗೆ ನಾಟಿ ಔಷಧಿ ಜೊತೆ, ಇಂಗ್ಲೀಷ್ ಮದ್ದಿನ ಅವಶ್ಯಕತೆ ಕೂಡ ಇದೆ. ನಾಟಿ ಮದ್ದು ಮಾಡಿಕೊಳ್ಳುವುದು ಅವರವರರ ನಂಬೆಕೆಗೆ ಬಿಟ್ಟಿದ್ದು. ಆದರೆ ಇಂಗ್ಲೀಷ್ ಮೆಡಿಸಿನ್ ತೆಗೆದುಕೊಂಡರೆ, ಅದರ ಎಫೆಕ್ಟ್‌ನಿಂದ ರೋಗ ಬೇಗ ವಾಸಿಯಾಗುತ್ತದೆ. ನಾಟಿ ಔಷಧಿಯೊಂದನ್ನೇ ನಂಬಿದರೆ, ಆರೋಗ್ಯ ಸಂಪೂರ್ಣವಾಗಿ ಗುಣವಾಗುವುದಿಲ್ಲ.
ಹಳ್ಳಿ ಕಡೆಗಳಲ್ಲಿ ಸರ್ಪ ಸುತ್ತು ಆದಾಗ, ಆ ಸ್ಥಳದಲ್ಲಿ ಕೆಮ್ಮಣ್ಣು ಮೆತ್ತಲಾಗುತ್ತದೆ. ಇದರಿಂದ ಸರ್ಪಸುತ್ತು ಮಾಯವಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ಇದರೊಂದಿಗೆ, ವೈದ್ಯರು ನೀಡುವ ಮಾತ್ರೆ ಸೇವಿಸುವುದು ಕೂಡ ಮುಖ್ಯ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.