Sunday, September 8, 2024

Latest Posts

ಸಕ್ಕರೆ ಮತ್ತು ಬೆಲ್ಲದಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು..?

- Advertisement -

Health Tips: ಸಕ್ಕರೆ ಮತ್ತು ಬೆಲ್ಲ ನಮ್ಮ ದೈನಂದಿನ ಜೀವನಕ್ಕೆ ಬೇಕೇ ಬೇಕು ಎನ್ನುವ ಪದಾರ್ಥಗಳು. ಕೆಲವರು ಸಕ್ಕರೆ ಬಳಸಿದರೆ, ಇನ್ನು ಕೆಲವರು ಬೆಲ್ಲವನ್ನು ಬಳಸುತ್ತಾರೆ. ಶುಗರ್ ಇದ್ದವರು ಮಾತ್ರ, ಇವೆರಡನ್ನು ಬಳಸಬಾರದು. ಹಾಗಾದ್ರೆ ಸಕ್ಕರೆ ಮತ್ತು ಬೆಲ್ಲದಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು ಅಂತಾ ತಿಳಿಯೋಣ ಬನ್ನಿ..

ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಈ ಬಗ್ಗೆ ಮಾತನಾಡಿದ್ದಾರೆ. ಸಕ್ಕರೆ ಮತ್ತು ಬೆಲ್ಲದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಅಂದ್ರೆ, ಬೆಲ್ಲ ತುಂಬಾ ಒಳ್ಳೆಯದು ಎಂದಿದ್ದಾರೆ. ಏಕೆಂದರೆ, ಕೆಲವರು ಬೆಲ್ಲ ತಯಾರಿಸುವಾಗ ಅದನ್ನು ಕ್ಲೀನ್ ಮಾಡಲು, ಕಡಿಮೆ ಕೆಮಿಕಲ್ ಬಳಸುತ್ತಾರೆ. ಹಾಗಾಗಿ ಬೆಲ್ಲ ಉತ್ತಮ. ಆದರೆ ಸಕ್ಕರೆ ಮಾಡುವಾಗ, ಹೆಚ್ಚು ಕೆಮಿಕಲ್ ಬಳಸುತ್ತಾರೆ. ಹಾಗಾಗಿ ಸಕ್ಕರೆ ಬೆಲ್ಲದಲ್ಲಿ ಬೆಲ್ಲವೇ ಉತ್ತಮ ಅಂತಾರೆ ವೈದ್ಯರು.

ಇನ್ನು ಆಲೆಮನೆ ಬಗ್ಗೆ ತಮ್ಮ ಅಭಿಪ್ರಾಯ ಹೇಳಿರುವ ವೈದ್ಯರು, ಮೊದಲೆಲ್ಲ ಬೆಲ್ಲ ಮಾಡುವಾಗ ನ್ಯಾಚುರಲ್ ಆಗಿರುವ ರಸವನ್ನು ಚೆನ್ನಾಗಿ ಕುದಿಸಿ, ಬೆಲ್ಲ ಮಾಡುತ್ತಿದ್ದರು. ಆದರೆ ಈಗ ಹಲವು ಕೆಮಿಕಲ್‌ಗಳನ್ನು ಕೂಡ ಉಪಯೋಗಿಸಿ, ಬೆಲ್ಲವನ್ನು ತಯಾರಿಸಲಾಗುತ್ತಿದೆ. ಆದರೆ ಸಕ್ಕರೆಗೆ ಹೋಲಿಸಿದರೆ, ಬೆಲ್ಲದಲ್ಲಿ ಕೆಮಿಕಲ್ ಬೆರಕೆ ಕಡಿಮೆ. ಹಾಗಾಗಿ ಬೆಲ್ಲ ಉತ್ತಮ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss