Health Tips: ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯೆಯಾದ ಚಂದ್ರಿಕಾ ಆನಂದ ನಿಮಗೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು, ವೈಟ್ ಡಿಸ್ಚಾರ್ಜ್ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಹೆಣ್ಣು ಮಕ್ಕಳಿಗೆ ಮುಟ್ಟು ಸಮೀಪಿಸುವ ದಿನಗಳಲ್ಲಿ ವೈಟ್ ಡಿಸ್ಚಾರ್ಜ್ ಹೋಗುವುದು ಕಾಮನ್. ಆದರೆ ಕೆಲವೊಮ್ಮೆ ವೈಟ್ ಡಿಸ್ಚಾರ್ಜ್ ಅನ್ನುವುದು ಕಾಮನ್ ಆಗಿರುವುದಿಲ್ಲ. ನಾರ್ಮಲ್ ವೈಟ್ ಡಿಸ್ಚಾರ್ಜ್ ಲಿಕ್ವಿಡ್ ಆಗಿರುತ್ತದೆ. ಬಿಳಿ ಬಣ್ಣದಲ್ಲಿರುತ್ತದೆ. ಕೆಟ್ಟ ವಾಸನೆ ಬರುವುದಿಲ್ಲ. ವೈಟ್ ಡಿಸ್ಚಾರ್ಜ್ ಹೋಗುವ ವೇಳೆ, ಹೊಟ್ಟೆ ನೋವಾಗುವುದಿಲ್ಲ.
ಆದರೆ ಕೆಲವರಿಗೆ ವೈಟ್ ಡಿಸ್ಚಾರ್ಜ್ ಆದಾಗ, ಹೆಚ್ಚು ವಾಸನೆ ಬರುತ್ತದೆ. ಆ ಡಿಸ್ಚಾರ್ಜ್ ಹಳದಿ ಬಣ್ಣ, ಗುಲಾಬಿ ಬಣ್ಣ, ಹಸಿರು ಬಣ್ಣದಲ್ಲಿರುತ್ತದೆ. ಒಳ ಉಡುಪು ಒದ್ದೆಯಾಗುವಷ್ಟು ವೈಟ್ ಡಿಸ್ಚಾರ್ಜ್ ಆಗುತ್ತದೆ. ಇದು ನಾರ್ಮಲ್ ವೈಟ್ ಡಿಸ್ಚಾರ್ಜ್ ಅಲ್ಲ. ಬದಲಾಗಿ ಇಂಥ ಸಮಸ್ಯೆ ಇದ್ದವರು. ವೈದ್ಯರ ಬಳಿ, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ಏಕೆಂದರೆ, ಇದು ಮೂತ್ರನಾಳದಲ್ಲಿ ಸೋಂಕು ಕಾಣಿಸಿಕೊಂಡಿರುವ ಲಕ್ಷಣವಾಗಿರುತ್ತದೆ. ಇದು ಹೀಗೆ ಬಿಟ್ಟರೆ, ಅತೀಯಾಗಿ ನೋವು ಕೊಡುವ ಸಾಧ್ಯತೆ ಇರುತ್ತದೆ. ಹಲವು ತಿಂಗಳುಗಳ ಕಾಲ ನೀವು ಈ ಸಮಸ್ಯೆಯಿಂದ ಬಳಲಬಹುದು. ಹಾಗಾಗಿ ವೈಟ್ ಡಿಸ್ಚಾರ್ಜ್ ನಾರ್ಮಲ್ ಇಲ್ಲದಿದ್ದಾಗ, ಖಂಡಿತವಾಗಿಯೂ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




