Wednesday, October 22, 2025

Latest Posts

ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..

- Advertisement -

Spiritual : ಹಲವರು ತಮಗೆ ತಾವೇ ಶ್ರೇಷ್ಠರು ಎಂದುಕೊಂಡಿರುತ್ತಾರೆ. ಅಂಥವರ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಎಂಥ ಕೆಲಸ ಮಾಡುವವರು, ಹೇಗೆ ಜೀವನ ಮಾಡುವವರು ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಅಂತಾ ಹೇಳಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಗರುಡ ಪುರಾಣದಲ್ಲಿ ಗರುಡ ಕೇಳುವ ಪ್ರಶ್ನೆಗಳಿಗೆಲ್ಲ, ಶ್ರೀವಿಷ್ಣು ಉತ್ತರಿಸಿದ್ದಾರೆ. ಅದೇ ರೀತಿ ಗರುಡ, ಇಲ್ಲಿ ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರ ಮಧ್ಯೆ ಏನು ವ್ಯತ್ಯಾಸ ಎಂದು ಕೇಳಿದ್ದಾನೆ. ಆಗ ಶ್ರೀವಿಷ್ಣು, ಯಾರ ಮನಸ್ಸು ಮತ್ತು ದೇಹ ಎರಡೂ ಒರಟಾಗಿರುತ್ತದೆಯೋ, ಅಂಥವರು ಶ್ರೇಷ್ಠವಲ್ಲದವರು ಅಂತಾ ಹೇಳಿದ್ದಾರೆ. ಅಂದರೆ, ಇನ್ನೊಬ್ಬರನ್ನು ಮಾತಿನಿಂದ ತಿವಿಯುವವರು. ತಮ್ಮ ಮಾತು, ಹಾವ ಭಾವದಿಂದಲೇ, ಇನ್ನೊಬ್ಬರ ಮನಸ್ಸನ್ನು ಘಾಸಿ ಗೊಳಿಸುವವರು ಅತೃಪ್ತರು, ಶ್ರೇಷ್ಠರಲ್ಲದವರು ಎಂದಿದ್ದಾರೆ.

ಇನ್ನು ಮಾತಿನಲ್ಲೂ ಮೃದು, ದೇಹದಲ್ಲೂ ಮೃದುವಾಗಿರುವವರು ಶ್ರೇಷ್ಠರು. ಇಂಥವರಿಗೆ ಸೌಂದರ್ಯವೂ ಇರುತ್ತದೆ. ಕರುಣೆಯ ಗುಣವೂ ಇರುತ್ತದೆ. ಇಂಥವರು ಜೀವನದಲ್ಲಿ ತೃಪ್ತಿಯಿಂದ ಜೀವಿಸುತ್ತಾರೆ. ಇದ್ದುದರಲ್ಲಿ ಹಂಚಿ ತಿನ್ನುವ ಮನೋಭಾವ ಇವರದ್ದಾಗಿರುತ್ತದೆ. ಇವರು ತಮ್ಮಷ್ಟಕ್ಕೆ ತಾವಿರುತ್ತಾರೆ. ಯಾರ ಮನಸ್ಸಿಗೂ ಘಾಸಿಗೊಳಿಸಲು ಇಚ್ಛಿಸುವುದಿಲ್ಲ.

ಅತ್ಯುತ್ತಮರೆಂದರೆ, ಅವರು ಆರೋಗ್ಯವಾಗಿರುತ್ತಾರೆ. ಅವರ ಪಾದವು ಆರೋಗ್ಯವಾಗಿರುತ್ತದೆ. ಮತ್ತು ಯಾರ ಪಾದ ಸ್ವಚ್ಛವಾಗಿ, ಆರೋಗ್ಯವಾಗಿ ಇರುತ್ತದೆಯೋ, ಅವರು ಉತ್ತಮ ಸ್ವಭಾವದವರೂ ಆಗಿರುತ್ತಾರೆ. ಆರೋಗ್ಯವಂತರೂ ಆಗಿರುತ್ತಾರೆ. ಹಾಗಾಗಿ ಇಂಥವರು ಅತ್ಯುತ್ತಮರೆಂದು ಹೇಳಲಾಗುತ್ತದೆ.

ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ

ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

- Advertisement -

Latest Posts

Don't Miss