ಸಿದ್ದರಾಮಯ್ಯನವರೇ ನಿಮಗೆ ಯಾರ ಭಯ ? ಹೈಕಮಾಂಡ್‌ನದ್ದೋ, ಡಿ.ಕೆ.ಶಿವಕುಮಾರ್ ಅವರದ್ದೋ ?: ಸುನೀಲ್ ಕುಮಾರ್

Political News: ಬಿಜೆಪಿ ನಾಯಕ ಸುನೀಲ್ ಕುಮಾರ್, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರನ್ನು ಕುರಿತು ಟ್ವೀಟ್ ಮಾಡಿದ್ದು, ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಅರವತ್ತು ಸಾವಿರ ಮತ ಲೀಡ್ ನೀಡದೇ ಇದ್ದರೆ ತಾವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಮತದಾರರ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೊಂಡಿದ್ದಾರೆ. ಸ್ವಕ್ಷೇತ್ರದ ಜನರ ಮುಂದೆ ಜನಪ್ರತಿನಿಧಿ ಹೆಚ್ಚಿನ ಮತ ಕೊಡಿ ಎನ್ನುವುದು ತಪ್ಪಲ್ಲ. ಆದರೆ ಸಿದ್ದರಾಮಯ್ಯ ಅಧಿಕಾರ ಕೈ ತಪ್ಪು ವ ಭೀತಿಯನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ. ಬಹುಮತದ ಸರ್ಕಾರದ ಮುಖ್ಯಮಂತ್ರಿ ಯಾರ ಭಯಕ್ಕೆ ಈ ಮಾತು ಹೇಳಿದ್ದಾರೆಂಬುದು ಕರ್ನಾಟಕದ ಜನತೆ ಗೊತ್ತಾಗಬೇಕು. ಸಿದ್ದರಾಮಯ್ಯ ನವರೇ ನಿಮಗೆ ಯಾರ ಭಯ ? ಹೈಕಮಾಂಡ್ ನದೋ, ಡಿ.ಕೆ.ಶಿವಕುಮಾರ್ ಅವರದ್ದೋ ? ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

ಅಥವಾ ಶಾಸಕರದ್ದೋ ? ನಿಮಗೆ ನಿಮ್ಮ ಅಧಿಕಾರದ ಬಗ್ಗೆಯೇ ಗ್ಯಾರಂಟಿ ಇಲ್ಲ, ಇನ್ನು ಜನತೆಗೆ ಯಾವ ಗ್ಯಾರಂಟಿ‌ ಕೊಡುತ್ತೀರಿ ? ನಾಡಿಗೆ ಸ್ಪಷ್ಟಪಡಿಸಿ ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಸುರೇಶಾ, ಸಿಮೆಂಟ್ ಮಂಜಾ ನಿನ್ನ ಬಿಡೋದಿಲ್ಲಾ, ಪ್ರೀತಂಗೌಡ ನಿನ್ನ ಸಮಾಧಿ ಮಾಡಿ ಬಿಡುತ್ತಾರೆ: ಜೆಡಿಎಸ್ ವಿರುದ್ಧ ಡಿಕೆಶಿ ವ್ಯಂಗ್ಯ

ವೀಣಾ ಕಾಶಪ್ಪನವರ್ ಕುರಿತು ಶಾಕಿಂಗ್ ಹೇಳಿಕೆ‌ ನೀಡಿದ ಸಚಿವ ಆರ್.ಬಿ.ತಿಮ್ಮಾಪೂರ್

ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್: ಮಗನಿಗೆ ಸಾಥ್ ಕೊಟ್ಟ ರಾಜಮಾತೆ ಪ್ರಮೋದಾದೇವಿ

About The Author