Health tips: ಬೇಂಡೆಕಾಯಿ ಎಂದರೆ ಹಲವರಿಗೆ ಇಷ್ಟ, ಕೆಲವರಿಗೆ ಇಷ್ಟವಿರಲ್ಲ. ಏಕೆಂದರೆ, ಇದು ಲೋಳೆ ಲೋಳೆಯಾಗಿರುವ ಕಾರಣಕ್ಕೆ, ಇದನ್ನು ಹಲವರು ತಿನ್ನಲು ಬಯಸುವುದಿಲ್ಲ. ಎಷ್ಟೋ ಹೆಣ್ಣು ಮಕ್ಕಳಿಗೆ ಬಂಡೇಕಾಯಿಯ ಪದಾರ್ಥ ಮಾಡಲು ಕೂಡ ಬರುವುದಿಲ್ಲ. ಹಾಗಾಗಿ ಅಂಥವರು ಬೆಂಡೇಕಾಯಿ ತಿನ್ನುವುದನ್ನೇ ಹೇಟ್ ಮಾಡ್ತಾರೆ. ಆದರೆ ಬೆಂಡೇಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಬೆಂಡೇಕಾಯಿಯನ್ನು ಯಾರು ಸೇವಿಸಬೇಕು..? ಯಾರು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಸ್ಕಿನ್ ಪ್ರಾಬ್ಲಮ್ ಇದ್ದವರು ಬೆಂಡೇಕಾಯಿ ಸೇವನೆ ಮಾಡಬಾರದು. ಇದರಿಂದ ಸ್ಕಿನ್ ಪ್ರಾಬ್ಲಮ್ ಇನ್ನಷ್ಟು ಹೆಚ್ಚುತ್ತದೆ. ಇನ್ನು ಯಾರಿಗೆ ಹೆಚ್ಚು ಕೆಮ್ಮು ಮತ್ತು ಕಫದ ಸಮಸ್ಯೆ ಇರುತ್ತದೆಯೋ, ಅಂಥವರು ಕೂಡ ಬೆಂಡೇಕಾಯಿ ಸೇವನೆ ಮಾಡಬಾರದು. ವಾಯು ಸಮಸ್ಯೆ ಇದ್ದವರು ಬೆಂಡೇಕಾಯಿಯನ್ನು ಹೆಚ್ಚು ಸೇವಿಸಬಾರದು. ಅಲ್ಲದೇ ವಾಯು ಹೆಚ್ಚಾಗಿ ಮೂಳೆ ನೋವು, ಸಂಧಿವಾತವಾಗುತ್ತಿದೆ ಎಂದಲ್ಲಿ, ಬೆಂಡೇಕಾಯಿಯನ್ನು ಸಂಪೂರ್ಣ ತ್ಯಜಿಸಬೇಕು.
ಯಾರು ಬೆಂಡೇಕಾಯಿ ಪದಾರ್ಥ ತಿನ್ನಬೇಕು ಅಂದ್ರೆ, ಯಾರಿಗೆ ಲೂಸ್ ಮೋಷನ್‌ನಂಥ ಸಮಸ್ಯೆ ಇರುತ್ತದೆಯೋ, ಅಂಥವರು ಬೆಂಡೇಕಾಯಿ ಸೇವಿಸಬೇಕು. ಯಾಕಂದ್ರೆ ಇದರ ಸೇವನೆಯಿಂದ ಶಕ್ತಿ ಬರುತ್ತದೆ. ಹಾಗಾಗಿ ಶಕ್ತಿ ಬೇಕು, ನೀವು ಚೈತನ್ಯದಾಯಕರಾಗಿರಬೇಕು ಅಂದ್ರೆ ಬೆಂಡೇಕಾಯಿ ಸೇವನೆ ಮಾಡಬೇಕು. ಸರಿಯಾಗಿ ಹಸಿವಾಗುವುದಿಲ್ಲವೆಂದಲ್ಲಿ, ಬೆಂಡೇಕಾಯಿ ಪದಾರ್ಥ ಸೇವಿಸದ್ದಲ್ಲಿ, ಹೊಟ್ಟೆ ಹಸಿವು ಹೆಚ್ಚಾಗುತ್ತದೆ.
ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?