Health Tips: ಅರಿಶಿನ ಹಾಲನ್ನು ಗೋಲ್ಡನ್ ಮಿಲ್ಕ್ ಅಂತಾ ಕರಿಯಲಾಗುತ್ತದೆ. ಯಾಕಂದ್ರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಚಿನ್ನದಂಥ ಲಾಭವಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲವರು ಅರಿಶಿನ ಹಾಲನ್ನು ಕುಡಿಯುವಂತಿಲ್ಲ. ಹಾಗಾದ್ರೆ ಯಾರು ಅರಿಶಿನ ಹಾಲನ್ನು ಸೇವಿಸುವಂತಿಲ್ಲ ಅಂತಾ ತಿಳಿಯೋಣ ಬನ್ನಿ..
ಅರಿಶಿನ ಹಾಲನ್ನು ಸೇವಿಸಿದರೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೈ ಕಾ ನೋವು ವಾಸಿಯಾಗುತ್ತದೆ. ಗಾಯವಾಗಿದ್ದರೆ, ಅರಿಶಿನ ಹಾಲು ಕುಡಿದಲ್ಲಿ ಆ ಗಾಯವೂ ಬೇಗ ಮಾಸಿಹೋಗುತ್ತದೆ. ಆದರೆ ಕೆಲವರ ಆರೋಗ್ಯಕ್ಕೆ ಅರಿಶಿನ ಹಾಲು ಉತ್ತಮವಲ್ಲ. ಲೋ ಬ್ಲಡ್ ಶುಗರ್ ಇದ್ದವರು ಅರಿಶಿನ ಹಾಲನ್ನು ಸೇವಿಸಬಾರದು. ಏಕೆಂದರೆ, ಇದರ ಸೇವನೆಯಿಂದ ದೇಹದಲ್ಲಿ ಮತ್ತಷ್ಟು ಶುಗರ ಲೆವಲ್ ಕಡಿಮೆಯಾಗುತ್ತದೆ.
ಅರಿಶಿನ ಹಾಲಿನ ಸೇವನೆಯಿಂದ ಪುರುಷರಲ್ಲಿ ಬಂಜೆತನ ಉಂಟಾಗುತ್ತದೆ. ಮಗುವನ್ನು ಹೊಂದಲು ಪ್ರಯತ್ನಿಸುತ್ತಿರುವ ಪುರುಷರು ಹೆಚ್ಚು ಅರಿಶಿನ ಹಾಲನ್ನು ಸೇವಿಸಬಾರದು. ಏಕೆಂದರೆ, ಅಂಥವರು ಅರಿಶಿನ ಹಾಲನ್ನು ಹೆಚ್ಚು ಸೇವಿಸುವುದರಿಂದ, ಸ್ಪರ್ಮ್ ಕ್ವಾಲಿಟಿ ಹಾಳಾಗುತ್ತದೆ. ಇದರಿಂದ ಬಂಜೆತನ ಉಂಟಾಗುತ್ತದೆ.
ಮೂರನೇಯದಾಗಿ ಕಿಡ್ನಿ ಸಮಸ್ಯೆ ಇದ್ದವರು ಅರಿಶಿನ ಹಾಲನ್ನು ಸೇವಿಸಬಾರದು. ಅದರಲ್ಲೂ ಕಿಡ್ನಿಯಲ್ಲಿ ಕಲ್ಲು ಹೊಂದಿರುವರು ಅರಿಶಿನ ಹಾಲನ್ನು ಕುಡಿಯಲೇಬಾರದು. ಏಕೆಂದರೆ, ಅರಿಶಿನದಲ್ಲಿ ಆಕ್ಸಲೇಟ್ ಅಂಶ ಇರುವುದರಿಂದ, ಅರಿಶಿನ ಹಾಲನ್ನು ಕಿಡ್ನಿ ಕಲ್ಲು ಇರುವವರು ಸೇವಿಸಿದರೆ, ಆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಇಂಥವರು ಅರಿಶಿನ ಹಾಲನ್ನು ಸೇವಿಸಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..