Thursday, October 16, 2025

Latest Posts

ಶಿವನ ಭಕ್ತರು ಅಘೋರಿಗಳಾಗುವುದಕ್ಕೆ ಯಾರ ಶಾಪ ಕಾರಣ..?

- Advertisement -

ಶಿವನಂತೆ ಸ್ಮಶಾನವಾಸಿಗಳಾಗಿರುವ ಅಘೋರಿಗಳನ್ನು ಕಂಡರೆ, ಹಲವರು ಭಯ ಪಡುತ್ತಾರೆ. ಹಾಗಂತ ಅವರು ಕೆಟ್ಟವರಲ್ಲ. ಆದರೆ, ಅವರ ರೂಪ ಭಯಂಕರವಾಗಿರುತ್ತದೆ. ಅಘೋರಿ ಅನ್ನೋದರ ಅರ್ಥವೇ ಘೋರವಲ್ಲದ ಎಂದರ್ಥ. ಹಾಗಾಗಿ ಅವರು ಕೆಟ್ಟ ಸ್ವಭಾವ ಉಳ್ಳವರೋ, ಅಥವಾ ಕೆಟ್ಟವರೋ ಅಲ್ಲ. ಬದಲಾಗಿ, ಈ ಲೋಕದ ಎಲ್ಲ ಆಸೆ , ಆಕಾಂಕ್ಷೆ, ಅಸಹ್ಯ, ಎಲ್ಲವೂ ಮೆಟ್ಟಿ ನಿಂತು, ಶಿವನೇ ಎಲ್ಲ ಎಂದು ನಂಬಿದವರು.

ಹಾಗಾಗಿಯೇ ಅಘೋರಿಗಳಿಗೆ ಹೇಸಿಗೆ ಅನ್ನೋದಿಲ್ಲಾ. ಅವರು ಎಂಥ ಜಾಗದಲ್ಲಿ ಬೇಕಾದರೂ ವಾಸಿಸಲು ತಯಾರಿದ್ದಾರೆ. ಎಲ್ಲರೂ ಹೆದರುವ ಸ್ಮಶಾನವೇ ಅವರಿಗೆ ಮನೆ ಇದ್ದಂತೆ. ಅವರು ಹಸಿ ಮಾಂಸವನ್ನು ಆರಾಮವಾಗಿ ತಿನ್ನುತ್ತಾರೆ. ಅವರಿಗೆ ಕೋಪ ಬರುವುದಿಲ್ಲ, ಪ್ರೀತಿ, ದುಃಖ, ಸಂಬಂಧ ಇವೆಲ್ಲವನ್ನೂ ಬಿಟ್ಟು, ಶಿವನ ಸ್ಮರಣೆಯಲ್ಲಿ ಲೀನವಾದವರೇ, ಅಘೋರಿಗಳು. ಇಂಥ ಶಿವನ ಪರಮ ಭಕ್ತರು, ಅಘೋರಿಗಳಾಗಿದ್ದು ಹೇಗೆ..? ಇವರಿಗೆ ಯಾರು ಶಾಪ ನೀಡಿದರು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಶಿವನ ಮಾವನಾದ ಪ್ರಜಾಪತಿ ದಕ್ಷ, ಒಂದು ಸಭೆಗೆ ಹೋದ. ಅಲ್ಲಿ ಒಂದು ಯಜ್ಞ ನಡೆಯುತ್ತಿತ್ತು. ದಕ್ಷ ಅಲ್ಲಿ ಹೋಗುತ್ತಿದ್ದಂತೆ, ಅಲ್ಲಿರುವ ಎಲ್ಲರೂ ಎದ್ದು ನಿಂತಕು ದಕ್ಷ ರಾಜನಿಗೆ ಗೌರವ ನೀಡಿದರು. ಆದರೆ ಬ್ರಹ್ಮ ಮತ್ತು ಶಿವ ಎದ್ದು ನಿಲ್ಲಲಿಲ್ಲ. ಹಾಗಾಗಿ ದಕ್ಷ ರಾಜನಿಗೆ ಕೋಪ ಬಂತು. ಬ್ರಹ್ಮ ನನ್ನ ತಂದೆ, ಹಾಗಾಗಿ ಅವರು ನನಗೆ ಗೌರವ ನೀಡುವ ಅಗತ್ಯವಿಲ್ಲ. ಆದರೆ, ಶಿವ ನನ್ನ ಪುತ್ರಿಯನ್ನು ವಿವಾಹವಾಗಿದ್ದಾನೆ. ಅಂದ್ರೆ ನಾನು ಅವನಿಗೆ ಮಾವ. ಅದಕ್ಕಾದರೂ ಅವನು ಗೌರವ ನೀಡಬೇಕಿತ್ತು ಎಂದು ದಕ್ಷ ಕ್ರೋಧಿತನಾದ.

ತಮ್ಮ ಕಮಂಡಲದಲ್ಲಿದ್ದ ಜಲವನ್ನು ಶಿವನ ಮೇಲೆ ಪ್ರೋಕ್ಷಿಸಿ, ಶಿವನಿಗೆ ಶಾಪ ನೀಡಿದರು. ಇಂದಿನಿಂದ ಶಿವ ಯಾವ ಯಜ್ಞದಲ್ಲೂ ಭಾಗಿಯಾಗುವಂತಿಲ್ಲ ಎಂದು ಹೇಳಿ ದಕ್ಷ ಅಲ್ಲಿಂದ ಹೊರಟು ಹೋದ. ಇದನ್ನು ಕೇಳಿದ ಶಿವ ಸುಮ್ಮನಿದ್ದನಾದರೂ, ನಂದಿಗೆ ಕೋಪ ಬಂತು. ಅವನು ದಕ್ಷನ ಮಾತು ಕೇಳಿದ ಬ್ರಾಹ್ಮಣರಿಗೆ , ನಿಮ್ಮ ಜ್ಞಾನ ಸಂಪೂರ್ಣ ನಾಶವಾಗಲಿ, ನೀವು ಮನೆ ಮನೆಗೆ ಹೋಗಿ, ದಾನ ಪಡೆಯುವಂತಾಗಲಿ ಎಂದು ಶಾಪ ನೀಡಿದ.

ಆಗ ಅಲ್ಲಿದ್ದ ಭೃಗು ಋಷಿಗೆ ಕೋಪ ಬಂತು. ಅವರು ಕೂಡ ಶಿವನಿಗೆ ಶಾಪ ನೀಡಿದರು. ನಿನ್ನನ್ನು ಪೂಜಿಸುವ ನಿನ್ನ ಪರಮ ಭಕ್ತರು, ಸಂಸಾರದ ಎಲ್ಲ ಆಸೆಗಳನ್ನು ತ್ಯಾಗ ಮಾಡುವರು. ಜಟಾಧಾರಿಯಾಗಿ, ಯಾವುದೇ ಸುಖ ಅನುಭವಿಸದೇ, ಶರೀರಕ್ಕೆ ಭಸ್ಮ ಬಳಿದುಕೊಂಡು, ಮಾಂಸ ಮದಿರೆಯ ಸೇವನೆ ಮಾಡುವರು. ಇವರು ಸ್ಮಶಾನದಲ್ಲೇ ವಾಸಿಸುವರು ಎಂದು ಶಾಪ ನೀಡಿದರು.

ಹೀಗೆ ಭೃಗುವಿನ ಶಾಪಕ್ಕೆ ಗುರಿಯಾದ ಶಿವನ ಪರಮ ಭಕ್ತರೇ ಅಘೋರಿಗಳು. ಭೃಗು ಋಷಿ ಶಾಪ ನೀಡಿದ ಮರುಕ್ಷಣವೇ, ಶಿವ ಅಘೋರಿಯ ರೂಪ ತಾಳಿದ. ಹಾಗಾಗಿ ಅಘೋರಿಗಳು ಕೂಡ ಶಿವನ ಈ ರೂಪದಲ್ಲೇ ಇರುತ್ತಾರೆ. ಇವರು ಮಾಂಸ ಮದಿರೆ ಸೇವಿಸಿಕೊಂಡು, ಸ್ಮಶಾನದಲ್ಲಿ ಶಿವನಾಮಸ್ಮರಣೆ ಮಾಡುತ್ತ, ಯಾವುದೇ ಭಯವಿಲ್ಲದೇ, ಜೀವಿಸುತ್ತಾರೆ.

- Advertisement -

Latest Posts

Don't Miss