Health Tips: ವೈದ್ಯೆಯಾದ ಡಾ.ರಕ್ಷಿತಾ ನಾಯ್ಕ್, ಹಣ್ಣಿನ ಸೇವನೆಯ ಲಾಭವೇನು ಅನ್ನೋ ಬಗ್ಗೆ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ಇಂದು ಅವರು ಯಾಕೆ ಚಾಕೋಲೇಟ್ಸ್ ಸೇವನೆ ಮಾಡಬಾರದು..? ಅಥವಾ ಚಾಕೋಲೇಟ್ಸ್ ಸೇವನೆ ಮಿತವಾಗಿರಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಸಿಗುವುದು ತುಂಬಾ ಮುಖ್ಯ. ಹಾಗಂತ, ನಾವು ಬರಿ ಸಿರಿಧಾನ್ಯ, ಬೇಳೆಕಾಳುಗಳನ್ನಷ್ಟೇ ತಿನ್ನುವುದಲ್ಲ. ಜೊತೆಗೆ ಹಸಿ ತರಕಾರಿ, ಹಣ್ಣುಗಳ ಸೇವನೆ ಕೂಡ ಮಾಡಬೇಕಾಗುತ್ತದೆ. ವೈದ್ಯರು ಹೇಳುವ ಪ್ರಕಾರ, ದಿನಕ್ಕೆ ಒಂದು ಸೇಬು ಹಣ್ಣನ್ನು ತಿನ್ನಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಆ್ಯಪಲ್‌ಗೆ ಮೇಣ ಹಚ್ಚುವುದರಿಂದ, ಅದನ್ನು ಚೆನ್ನಾಗಿ ತೊಳೆದು ತಿನ್ನುವುದು ಉತ್ತಮ. ಬರೀ ಸೇಬು ಮಾತ್ರವಲ್ಲ. ಎಲ್ಲ ಹಣ್ಣು, ತರಕಾರಿ, ಸೊಪ್ಪುಗಳನ್ನು ತೊಳೆದೇ ಬಳಸಬೇಕು.
ಇನ್ನು ಇದರ ಜೊತೆಗೆ ದೇಹಕ್ಕೆ ಸಕ್ಕರೆ ಅಂಶ ಸಿಗುವುದು ಮುಖ್ಯ. ಹಾಗಂತ ನಾವು ಚಾಕೋಲೇಟ್ಸ್, ಕುಕೀಸ್ ತಿನ್ನಬೇಕು ಅಂತಿಲ್ಲ. ಬದಲಾಗಿ ಹಣ್ಣಿನ ಸೇವನೆ ಮಾಡಬಹುದು. ಏಕೆಂದರೆ, ಹಣ್ಣುಗಳಲ್ಲೂ ಸಕ್ಕರೆ ಅಂಶವಿರುತ್ತದೆ. ಹಾಗಾಗಿ ನೀವು ಕೂಕಿಸ್, ಚಾಕೋಲೇಟ್ಸ್ ಸೇವನೆ ಮಾಡುವ ಬದಲು, ಹಣ್ಣು ತಿನ್ನಿ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

