ದೀಪಾವಳಿಯ ದಿನ ಲಕ್ಷ್ಮೀಯ ಜೊತೆ ವಿಷ್ಣುವಿನ ಪೂಜೆ ಯಾಕೆ ಮಾಡಲಾಗುವುದಿಲ್ಲ..?

ಮೊನ್ನೆ ಮೊನ್ನೆ ತಾನೇ ದೀಪಾವಳಿ ಹಬ್ಬ ಮುಗಿದಿದೆ. ಈ ದಿನ ಹಿಂದೂಗಳು ವಿಜೃಂಭಣೆಯಿಂದ ಲಕ್ಷ್ಮೀ ಪೂಜೆಯನ್ನ ಮಾಡುತ್ತಾರೆ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿರಲಿ ಎಂದು ತರಹೇವಾರಿ ಹಣ್ಣು ಹಂಪಲು, ಹೂವು, ನೈವೇದ್ಯಗಳನ್ನೆಲ್ಲ ಇಟ್ಟು ದೇವಿಯನ್ನ ಆರಾಧಿಸುತ್ತಾರೆ. ಆದ್ರೆ ಲಕ್ಷ್ಮೀಯ ಜೊತೆ ಆಕೆಯ ಪತಿಯಾದ ವಿಷ್ಣುವನ್ನು ಯಾಕೆ ಪೂಜಿಸುವುದಿಲ್ಲ..? ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಒಮ್ಮೆ ಓರ್ವ ಸಾಧುವಿಗೆ ಸುಖ ಭೋಗಗಳನ್ನು ಅನುಭವಿಸಬೇಕೆಂದು ಮನಸ್ಸಾಯಿತು. ಅವನು ಲಕ್ಷ್ಮೀ ದೇವಿಯನ್ನು ಆರಾಧಿಸಿ, ತಪಸ್ಸು ಮಾಡಿದ. ಲಕ್ಷ್ಮೀ ದೇವಿ ಪ್ರತ್ಯಕ್ಷಳಾಗಿ ವರ ನೀಡಿದಳು. ಅವನು ರಾಜನೊಬ್ಬನ ಅರಮನೆಗೆ ಹೋಗಿ, ರಾಜನನ್ನು ಸಿಂಹಾಸನದಿಂದ ಬೀಳಿಸಿ, ತಾನು ಸಿಂಹಾಸನದ ಮೇಲೆ ಕುಳಿತ. ಆಗ ರಾಜನ ಕಿರೀಟದಲ್ಲಿದ್ದ ಕಾಳಸರ್ಪ ಕೆಳಗೆ ಬಿದ್ದು, ಓಡಿ ಹೋಯಿತು.

ಮಹಾದೇವ ತನ್ನ ತ್ರಿಶೂಲವನ್ನೇ ಮುರಿಯಲು ಕಾರಣವೇನು..?

ಇದನ್ನು ಕಂಡು ರಾಜನಿಗೆ ಸಂತೋಷವಾಯಿತು. ಇಂದು ನೀವು ಬಂದು, ನನ್ನನ್ನು ಸಿಂಹಾಸನದಿಂದ ಕೆಳಗಿಳಿಸಿದ ಕಾರಣ, ಆ ಕಾಳ ಸರ್ಪ ನನ್ನನ್ನು ಕಚ್ಚದೇ, ಹಾಗೇ ಹೋಯಿತು. ನಿಮ್ಮಿಂದ ನನ್ನ ಜೀವ ಉಳಿಯಿತು ಎಂದು ಹೇಳಿದ. ಅಲ್ಲದೇ, ತನ್ನ ಮಂತ್ರಿ ಪಟ್ಟ ಕೊಟ್ಟು, ಉಳಿಯಲು ಹೊಸ ಮಹಲನ್ನೂ ಕೊಟ್ಟ. ಕೆಲ ದಿನಗಳ ಬಳಿಕ, ಸಾಧು ಮಹಾರಾಜನನ್ನು ಎಳೆದು ಅರಮನೆಯಿಂದ ಹೊರಕರೆತಂದ. ಅವರೊಂದಿಗೆ ಅರಮನೆಯಲ್ಲಿ ಇದ್ದವರೆಲ್ಲ ಹೊರಬಂದರು.

ಆಗ ಅಲ್ಲಿದ್ದ ಅರಮನೆ ಕುಸಿದು ಬಿದ್ದಿತು. ಆದರೆ ಯಾರಿಗೂ ಪ್ರಾಣಾಪಾಯವಾಗಲಿಲ್ಲ. ಮತ್ತೊಮ್ಮೆ ರಾಜ ಸಾಧುವನ್ನು ಮೆಚ್ಚಿದ. ಇನ್ನು ತನಗೆ ಇಷ್ಟೊಳ್ಳೆ ಮಂತ್ರಿ ಸಿಕ್ಕಿದ್ದಾನೆಂದು ರಾಜನ ಅಹಂಕಾರ ಹೆಚ್ಚಿತು. ಒಮ್ಮೆ ರಾಜನ ಕೋಣೆಯಲ್ಲಿದ್ದ ಗಣೇಶ ಮೂರ್ತಿ ನೋಡಲು ಚೆನ್ನಾಗಿಲ್ಲವೆಂದು ಹೇಳಿ, ಆ ಸಾಧು ಅದನ್ನು ತೆಗೆದು ಹೊರಗೆಸೆದ. ಇದರಿಂದ ಕೋಪಗೊಂಡ ಗಣಪತಿ, ಸಾಧುವಿನ ಬುದ್ಧಿಭ್ರಮಣೆ ಮಾಡಿದ.

ಪತ್ನಿ, ಮಿತ್ರ ಮತ್ತು ಕೆಲಸಗಾರನ ನಿಯತ್ತು ತಿಳಿಯುವುದು ಹೇಗೆ..?

ದಿನಗಳೆದಂತೆ ಸಾಧು ದಡ್ಡನಂತೆ ವರ್ತಿಸುತ್ತಿದ್ದ. ರಾಜನಿಗೆ ಒಮ್ಮೆ ಕೋಪ ಬಂದು, ಸಾಧುವನ್ನು ಜೈಲಿಗೆ ಹಾಕಿದ. ಆಗ ಮತ್ತೆ ಸಾಧು, ಲಕ್ಷ್ಮೀಯನ್ನು ಕುರಿತು ತಪಸ್ಸು ಮಾಡಿದ. ಆಗ ಲಕ್ಷ್ಮೀ ದೇವಿ ಸಾಧು ಗಣೇಶನ ವಿಷಯದಲ್ಲಿ ಮಾಡಿದ ತಪ್ಪನ್ನು ಹೇಳಿದಳು. ಆಗ ಸಾಧು ಗಣಪತಿಯಲ್ಲಿ ಕ್ಷಮೆ ಕೇಳಿದ. ಸಾಧುವಿನ ಬುದ್ಧಿಶಕ್ತಿ ಹೆಚ್ಚಿತು. ರಾಜ ಮತ್ತೆ ಸಾಧುವನ್ನು ಮಂತ್ರಪಟ್ಟಕ್ಕೇರಿಸಿದ.

ಈ ರೀತಿ ಲಕ್ಷ್ಮೀ ದೇವಿ ಮತ್ತು ಗಣೇಶನನ್ನು ಆರಾಧಿಸಿದ ಸಾಧುವಿಗೆ ಸಕಲ ಸಂಪತ್ತು, ಬುದ್ಧಿವಂತಿಕೆ ಸಿಕ್ಕ ಕಾರಣ, ದೀಪಾವಳಿಯಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಲಾಗತ್ತೆ ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಸುಖ ಸಂಪತ್ತು ಕೊಟ್ಟರೆ, ಗಣೇಶ ಬುದ್ಧಿವಂತಿಕೆ, ಸದ್ಭುದ್ಧಿ ಕೊಡುತ್ತಾನೆಂದು ಹೇಳಲಾಗಿದೆ.

About The Author