Spiritual: ಹಿಂದೂ ಶ್ಲೋಕ್ಗಳಲ್ಲಿ ಹನುಮಾನ್ ಚಾಲೀಸಾ ಕೂಡಾ ಒಂದು. ಅಷ್ಟೇನೂ ಕಷ್ಟವಾಗದ ಈ ಚಾಲೀಸಾವನ್ನ ಸಂತ ತುಳಿಸದಾಸರು ರಚಿಸಿದ್ದಾರೆ. ಹಾಗಾದರೆ ಹನುಮಾನ್ ಚಾಲೀಸಾ ಏಕೆ ಪಠಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹನುಮಾನ್ ಚಾಲೀಸಾ ಎಂಥ ಶಕ್ತಿಯುತವಾದ ದೇವರ ನಾಮವೆಂದರೆ, ಇದರ ಪಠಣೆಯಿಂದ ನಿಮ್ಮ ಬಳಿ ನಕಾರಾತ್ಮಕ ಶಕ್ತಿಗಳು ಸುಳಿಯಲು ಕೂಡ ಸಾಧ್ಯವಿಲ್ಲ. ನಿಮಗೆ ಕೆಟ್ಟ ಕನಸು ಬೀಳುತ್ತಿದ್ದರೆ, ಭೂತ ಪ್ರೇತಗಳ ಕಾಟವಿದೆ ಅಂತಾದಲ್ಲಿ, ಪ್ರತಿದಿನ ಸ್ನಾನ ಮಾಡಿ, ದೇವರ ಮುಂದೆ ಕುಳಿತು ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸಿ. ನಕಾರಾತ್ಮಕ ಶಕ್ತಿಯಿಂದ ನಿಮಗೆ ಮುಕ್ತಿ ಸಿಗುತ್ತದೆ.
ಇನ್ನು ಶನಿಕಾಟವಿದ್ದವರು ಪ್ರತೀದಿನ ಹನುಮಾನ್ ಚಾಲೀಸಾ ಪಠಿಸಿ, ಪ್ರತೀ ಶನಿವಾರ ಮತ್ತು ಮಂಗಳವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ, ದರ್ಶನ ಮಾಡಿ ಬನ್ನಿ. ಇದರಿಂದ ಶನಿ ನಿಮಗೆ ಯಾವುದೇ ಹಾನಿ ಮಾಡುವುದಿಲ್ಲ. ಇಷ್ಟೇ ಅಲ್ಲದೇ, ನೀವು ಪ್ರತಿದಿನ ಕೆಲಸಕ್ಕೆ ಹೋಗುವವರಾಗಿದ್ದಲ್ಲಿ, ಹನುಮಾನ್ ಚಾಲೀಸಾ ಪಠಿಸಿ ಹೋಗಿ. ಇದರಿಂದ ಅಪಘಾತ ಸಂಭವವೂ ಕಡಿಮೆಯಾಗುತ್ತದೆ. ಏಕೆಂದರೆ ಶನಿದೇವರ ಅವಕೃಪೆಯಿಂದಲೇ ಅಪಘಾತವಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಹನುಮಾನ್ ಚಾಲೀಸಾ ಪಠಣೆ ಮಾಡಬೇಕು.
ಮನೆಯಲ್ಲಿ ಸದಾ ಜಗಳವಾಗುತ್ತದೆ. ಮನಶಾಂತಿಯೇ ಇರುವುದಿಲ್ಲವೆಂದಾದಲ್ಲಿ, ಪ್ರತಿದಿನ ಹನುಮಾನ್ ಚಾಲೀಸಾ ಮತ್ತು ರಾಮನಾಮ ಪಠಣವನ್ನು ಮಾಡಿ. ಇದರಿಂದ ನಿಮಗೆ ತಾಳ್ಮೆ ಬರುತ್ತದೆ. ತಾಳ್ಮೆ ಇದ್ದವರಿಗೆ ನೆಮ್ಮದಿ ತಾನಾಗಿಯೇ ಬರುತ್ತದೆ. ಇನ್ನು ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ. ಓದಿದ್ದು ನೆನಪಿರುವುದಿಲ್ಲ. ದಡ್ಡತನ ನಿಮ್ಮನ್ನು ಆವರಿಸಿರುತ್ತದೆ ಎಂದಾದಲ್ಲಿ ಹನುಮಾನ್ ಚಾಲೀಸಾ ಪಠಿಸಿ.
ಇನ್ನು ನಿಮಗೆ ಯಾವುದೇ ಕಾಟವಿಲ್ಲದಿದ್ದರೂ, ನೀವು ಹನುಮಾನ್ ಚಾಲೀಸಾ ಪಠಿಸಬಹುದು. ಇದರಿಂದ ನಿಮಗೆ ಯಶಸ್ಸು, ಆರೋಗ್ಯ, ನೆಮ್ಮದಿ ಎಲ್ಲವೂ ಸಿಗುತ್ತದೆ. ಹನುಮಂತನ ಕೃಪೆ ನಿಮ್ಮ ಮೇಲಿರುತ್ತದೆ.




