Mahabharat: ಭಾಗ 1ರಲ್ಲಿ ನಾವು ದುರ್ಯೋಧನನ ಜಾತಕದ ಸ್ಥಿತಿ ಬದಲಾಗಲು ಕಾರಣವೇನು..? ಅನ್ನೋ ಬಗ್ಗೆ ತಿಳಿದಿದ್ದೆವು. ಇದೀಗ ಧೃತರಾಷ್ಟ್ರನಿಗೆ ತನ್ನ 100 ಮಕ್ಕಳ ಸಾವನ್ನು ಕಾಣುವ ಸ್ಥಿತಿ ಬಂದಿದ್ದೇಕೆ..? ಎನ್ನುವ ಬಗ್ಗೆ ತಿಳಿಯೋಣ.
ಮಕ್ಕಳ ಮುಂದೆ ತಂದೆಯ ಸಾವಾದರೆ ಅದು ಸಾಮಾನ್ಯ ಎನ್ನಬಹುದು. ಆದರೆ ತಂದೆಯ ಮುಂದೆ ಮಕ್ಕಳ ಸಾವಾದರೆ..?.. ಅಂಥ ಸ್ಥಿತಿಯನ್ನು ಯಾರೂ ಬಯಸುವುದಿಲ್ಲ. ಏಕೆಂದರೆ, ಪುತ್ರ ವಿಯೋಗ ಸಾಯುವವರೆಗೂ ಕಾಡುತ್ತದೆ. ಹಾಗಾಗಿ ಅಪ್ಪ- ಅಮ್ಮ ಮಕ್ಕಳ ಆರೋಗ್ಯ, ಆಯಸ್ಸಿಗಾಗಿ ಸದಾ ಪ್ರಾರ್ಥಿಸುತ್ತಾರೆ.
ಆದರೆ ಮಹಾಭಾರತದ ಧೃತರಾಷ್ಟ್ರನಿಗೆ ತನ್ನ 100 ಮಕ್ಕಳ ಸಾವಿನ ನೋವನ್ನು ಅನುಭವಿಸುವ ಸ್ಥಿತಿ ಬಂದಿತ್ತು. ಮಹಾಭಾರತ ಯುದ್ಧದಲ್ಲಿ ತನ್ನ 100 ಮಕ್ಕಳನ್ನೂ ಕಳೆದುಕ“ಂಡಿದ್ದ ಧೃತರಾಷ್ಟ್ರ, ಶ್ರೀಕೃಷ್ಣನ ಬಳಿ ಬಂದು, ನನಗೆ ಈ ಪರಿಸ್ಥಿತಿ ಬಂದಿದೆ ಎಂದರೆ, ನಾನು ಕಳೆದ ಜನ್ಮದಲ್ಲಿ ಏನೋ ಬೃಹತ್ ಅಪರಾಧವನ್ನೇ ಮಾಡಿದ್ದಿರಬಹುದು. ಅದೇನೆಂದು ಹೇಳು ಎಂದು ಕೇಳುತ್ತಾನೆ.
ಆಗ ಉತ್ತರಿಸಿದ ಶ್ರೀಕೃಷ್ಣ, ಹೌದು ಧೃತರಾಷ್ಟ್ರ, ನೀನು ಸರಿಯಾಗಿಯೇ ಊಹಿಸಿದ್ದೀಯ. ನಿನ್ನ ಹಲವು ಜನ್ಮಗಳ ಹಿಂದಿನ ಪಾಪದ ಫಲವೇ, ನಿನ್ನ 100 ಮಕ್ಕಳ ಸಾವು. ಯಾರಿಗೂ ಸಿಗದ 100 ಮಕ್ಕಳ ಸೌಭಾಗ್ಯ ನಿನಗೆ ಸಿಕ್ಕಿತ್ತು. ಕುರುವಂಶದಲ್ಲಿ ಜನಿಸಿದ್ದ ನಿನ್ನ ಮಕ್ಕಳು, ಅತ್ಯುತ್ತಮವಾಗಿಯೇ ಇದ್ದರು.
ದುರ್ಯೋಧನ, ದುಶ್ಶಾಸನ ಸೇರಿ ನಿನ್ನೆಲ್ಲ ಮಕ್ಕಳೂ ಮುಂಚೆ ಎಷ್ಟು ಉತ್ತಮ ಸಂಸ್ಕಾರ ಉಳ್ಳವರಾಗಿದ್ದರು. ಹಾಗಾಗಿಯೇ ಅವರನ್ನು ಸುಶ್ಶಾಶನ, ಸುಯೋಧನ ಎಂದು ಕರೆಯಲಾಗಿತ್ತು. ಆದರೆ ವಿನಾಶ ಕಾಲಕ್ಕೆ ಅಣಿಯಾಗುವಂತೆ ಅವರ ಸಂಸ್ಕಾರ ದುರ್ವರ್ತನೆಯಾಗಿ ಪರಿವರ್ತನೆಯಾಯಿತು.
ಹಲವು ಜನ್ಮಗಳ ಹಿಂದೆ ನೀನು ಬೇಟೇಗಾರನಾಗಿದ್ದಿ. ಆಗ ನೀನು 100 ಪಕ್ಷಿಯ ಮೊಟ್ಟೆಯನ್ನು ಹಾಳು ಮಾಡಿದ್ದಿ. ಅದರಲ್ಲಿದ್ದ ಮರಿಗಳು ಸತ್ತು ಹೋಗಿದ್ದವು. ಹಾಗಾಗಿಯೇ ಆ ತಾಯಿ ಪಕ್ಷಿಗೆ ಬೇಸರವಾಗಿ, ಅದು ನಿನಗೂ ಇದೇ ಪರಿಸ್ಥಿತಿ ಬರಲಿ ಎಂದು ಶಾಪ ನೀಡಿತ್ತು. ಸಾವಿರ ಜನ್ಮಗಳ ಹಿಂದಿನ ಶಾಪಕ್ಕೆ ನೀನು ಈ ಜನ್ಮದಲ್ಲಿ ಈ ರೀತಿಯಾಗಿ ಗುರಿಯಾಗಿದ್ದಿ ಎಂದು ಶ್ರೀಕೃಷ್ಣ ಹೇಳುತ್ತಾನೆ. ಹಾಾಗಾಗಿಯೇ ನಾವು ಮಾಡಿದ ಕರ್ಮಗಳು ಉತ್ತಮವೇ ಆಗಿರಲಿ, ಕೆಟ್ಟದ್ದೇ ಆಗಿರಲಿ ಫಲ ನೀಡೇ ನೀಡುತ್ತದೆ.

