Sunday, September 8, 2024

Latest Posts

ಹುಟ್ಟುವ ಮಕ್ಕಳಲ್ಲಿ ಜಾಂಯ್ಡೀಸ್ ಖಾಯಿಲೆ ಯಾಕೆ ಬರುತ್ತದೆ..?

- Advertisement -

Health Tips: ಗರ್ಭಿಣಿಯಾದವಳು ತನ್ನ ಮತ್ತು ತನ್ನ ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಹಾಗೆ ಕಡಿಮೆ ಪೋಷಕಾಂಶಗಳು ಸಿಕ್ಕಾಗಲೇ, ಮಗುವಿನ ಆರೋಗ್ಯ ಹಾಳಾಗುತ್ತದೆ. ಅದರಲ್ಲಿ ಮಕ್ಕಳಿಗೆ ಜಾಂಯ್ಡೀಸ್ ಖಾಯಿಲೆ ಬರುವುದು ಕೂಡ ಒಂದು. ಹಾಗಾದ್ರೆ ಯಾವ ತಪ್ಪಿನಿಂದ ಹುಟ್ಟುವ ಮಕ್ಕಳಿಗೆ ಜಾಂಯ್ಡೀಸ್ ಖಾಯಿಲೆ ಬರುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಗರ್ಭಿಣಿಯಾಗಿದ್ದಾಗ, ವಿಟಾಮಿನ್ ಡಿ ಕೊರತೆ ಇದ್ದಲ್ಲಿ, ಆಕೆ ಸೂರ್ಯನ ತಿಳಿ ಬಿಸಿಲಿಗೆ ಮಯ್ಯೊಡ್ಡದೇ ಇದ್ದಲ್ಲಿ, ಹುಟ್ಟಿದ ಮಗುವಿನ ದೇಹ ಅರಿಶಿನ ಬಣ್ಣದಿಂದ ಕೂಡಿರುತ್ತದೆ. ಹಾಗಾಗಿಯೇ ಅದಕ್ಕಾಗಿ ಟ್ರೀಟ್ಮೆಂಟ್ ಕೂಡ ಕೊಡುತ್ತಾರೆ. ಆ ಚಿಕಿತ್ಸೆ ಪಡೆದಲ್ಲಿ, ಮಗುವಿನ ದೇಹದ ಬಣ್ಣ ಸರಿಯಾಗುತ್ತದೆ. ಹಾಗಾಗಿಯೇ ಹುಟ್ಟಿದಾಗಿನಿಂದ 6 ತಿಂಗಳು ತುಂಬುವವರೆಗೂ ಮಗುವಿಗೆ ವಿಟಾಮಿನ್ ಡಿ ಸಿರಪ್ ಕೊಡಲಾಗುತ್ತದೆ.

ಪತಿ ಆರ್‌ಹೆಚ್(Rhesus) ಪಾಸಿಟಿವ್ ಇದ್ದು ಪತ್ನಿಯ ಆರ್‌ಹೆಚ್ ನೆಗೆಟಿವ್ ಇದ್ದಲ್ಲಿ, ಮಗುವಿಗೆ ಜಾಂಯ್ಡೀಸ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊದಲ ಮಗುವಿಗೆ ಈ ಸಮಸ್ಯೆ ಬರದಿದ್ದರೂ, ಎರಡನೇಯ ಮಗುವಿಗೆ ಈ ಸಮಸ್ಯೆ ಬರಬಹುದು. ಇನ್ನು ತಾಯಿ ಓ ಪಾಸಿಟಿವ್ ಇದ್ದು, ಮಗು ಎ ಪಾಸಿಟಿವ್‌ ಇದ್ದಾಗಲೂ ಜಾಂಯ್ಡೀಸ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನೊಂದು ಕಾರಣ ಅಂದ್ರೆ, ಮಗುವಿಗೆ ಸರಿಯಾಗಿ ಹಾಲು ಕುಡಿಸದೇ, ದೇಹದಲ್ಲಿ ನಿರ್ಜಲೀಕರಣ ಉಂಟಾಗಿಯೂ, ಈ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

ನಿಮ್ಮ ದೇಹದ ತೂಕ ಬೇಗ ಕಡಿಮೆಯಾಗಬೇಕು ಎಂದಲ್ಲಿ ಈ ಪೇಯ ಕುಡಿಯಿರಿ..

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

- Advertisement -

Latest Posts

Don't Miss