Health Tips: ಮಕ್ಕಳು ಚಿಕ್ಕವರಿರುವಾಗಲೇ, ಪೋಷಕರು ಎಚ್ಚರಿಕೆ ವಹಿಸಿ, ಮಗುವಿನ ಆರೋಗ್ಯವನ್ನು ಕಾಪಾಡಬೇಕು. ಅದಕ್ಕೆ ಯಾವ ಮಾತ್ರೆ, ಔಷಧಿ, ಇಂಜೆಕ್ಷನ್ ಎಲ್ಲವೂ ಕೊಡಬೇಕೋ, ಅದನ್ನು ಕೊಡಬೇಕು. ಮಕ್ಕಳಿಗೆ ಏಕೆ ವ್ಯಾಕ್ಸಿನೇಷನ್ ಹಾಕಬೇಕು ಎನ್ನುವ ಬಗ್ಗೆ ಡಾ.ಸುರೇಂದ್ರ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಖಾಯಿಲೆ ಬರುವ ಮುಂಚೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಅನ್ನೋದು ವೈದ್ಯರ ಮಾತು. ಹಾಗಾಗಿ ಕಾಲ ಕಾಲಕ್ಕೆ ಯಾವ ವ್ಯಾಕ್ಸಿನೇಷನ್ ಮಕ್ಕಳಿಗೆ ಕೊಡಬೇಕೋ, ಅದನ್ನು ಪೋಷಕರು ನೆನಪಿನಿಂದ ಕೊಡಿಸಬೇಕು. ನೀವು ಮಕ್ಕಳಿಗೆ ಖಾಯಿಲೆ ಬಂದ ಬಳಿಕ ವೈದ್ಯರ ಬಳಿ ಓಡಿದರೆ, ಅಲ್ಲಿ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ. ಅಷ್ಟು ಖರ್ಚು ಮಾಡಿದರೂ, ಕೆಲವೊಮ್ಮೆ ಮಕ್ಕಳ ಆರೋಗ್ಯ ಸಂಪೂರ್ಣವಾಗಿ ಸರಿಯಾಗುವುದಿಲ್ಲ. ಇನ್ನು ಕೆಲವು ಮಕ್ಕಳ ಪ್ರಾಣದ ಬಗ್ಗೆಯೂ ಗ್ಯಾರಂಟಿ ಕೊಡಲಾಗುವುದಿಲ್ಲ. ಹಾಗಾಗಿ ಯಾವ ವಯಸ್ಸಿಗೆ, ಎಷ್ಟು ತಿಂಗಳಿಗೆ, ಯಾವ ಇಂಜೆಕ್ಷನ್, ಮಾತ್ರೆ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಬೇಕು.
ಮಕ್ಕಳಿಗೆ ಹುಟ್ಟಿದಾಗಿನಿಂದ 5 ವರ್ಷದವರೆಗೂ ಬೇರೆ ಬೇರೆ ರೋಗಕ್ಕೆ ವ್ಯಾಕ್ಸಿನ್ ಹಾಕಲಾಗುತ್ತದೆ. ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವುದು ಎಷ್ಟು ಮುಖ್ಯವೋ, ಇಂಥ ವ್ಯಾಕ್ಸಿನ್ ಕೊಡುವುದು ಕೂಡ ಅಷ್ಟೇ ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..