ಹುಟ್ಟಿದ ಮಕ್ಕಳಲ್ಲಿ ದೃಷ್ಟಿ ದೋಷ ಯಾಕೆ ಕಾಣಿಸಿಕೊಳ್ಳುತ್ತದೆ..?

Health Tips: ಇಂದಿನ ಕಾಲದಲ್ಲಿ ಪುಟ್ಟ ಪುಟ್ಟ ಮಕ್ಕಳು ಕೂಡ ಕನ್ನಡಕ ಹಾಕಿಕೊಂಡು ತಿರುಗಾಡುವುದನ್ನು ನೀವು ನೋಡಿರುತ್ತೀರಿ. ಅದಕ್ಕೆ ಕಾರಣವೇನೆಂದು ಪೋಷಕರಿಗೂ ಗೊತ್ತಿರುವುದಿಲ್ಲ. ಹಾಗಾದ್ರೆ ಇದು ಯಾರ ತಪ್ಪಿನಿಂದಾದ ತೊಂದರೆ..? ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮಕ್ಕಳಿಗೆ ಚಿಕ್ಕಂದಿನಲ್ಲೇ ಕನ್ನಡಕ ಬಂದರೆ, ಅದು ಪೋಷಕರ ತಪ್ಪಿನಿಂದಾದ ತೊಂದರೆಯಾಗಿರುತ್ತದೆ. ಏಕೆಂದರೆ, ಮಗು ಗರ್ಭದಲ್ಲಿರುವಾಗ, ತಾಯಿ ಆರೋಗ್ಯಕರ ಆಹಾರಗಳ ಸೇವನೆ ಮಾಡಬೇಕು. ಆಗ ಮಗುವಿನ ಆರೋಗ್ಯ, ಅಂಗಾಗಳೆಲ್ಲ ಸರಿಯಾಗಿ ಇರುತ್ತದೆ. ತಾಯಿ ಆರೋಗ್ಯಕರ  ಆಹಾರ ತಿನ್ನದೇ, ನಿರ್ಲಕ್ಷ್ಯ ವಹಿಸಿದರೆ, ಮಗುವಿಗೆ ದೃಷ್ಟಿ ದೋಷದ ಸಮಸ್ಯೆ ಬರುತ್ತದೆ.

ಎರಡನೇಯದಾಗಿ, ಚಿಕ್ಕವರಿರುವಾಗಲೇ, ಮಗು ಕಿರಿ ಕಿರಿ ಮಾಡುತ್ತದೆ ಎಂದು, ಅದಕ್ಕೆ ಮೊಬೈಲ್ ಹಾಕಿ ಕೊಟ್ಟು ಬಿಡುತ್ತಾರೆ. ಅಥವಾ ವೀಡಿಯೋ ಗೇಮ್ ಆಡುವುದನ್ನು ಕಲಿಸುತ್ತಾರೆ. ಮುಂದೆ ಕುಳಿತು, ಕಣ್ಣಿಗೆ ಬೆಳಕು ಬಡಿಯುವ ರೀತಿ, ಟಿವಿ ನೋಡಲು ಅವಕಾಶ ಮಾಡಿಕೊಡುತ್ತಾರೆ. ಇಂಥದ್ದೆಲ್ಲ ಮಾಡುವುದರಿಂದಲೇ, ಮಕ್ಕಳಿಗೆ ಚಿಕ್ಕಂದಿನಲ್ಲೇ ದೃಷ್ಟಿ ದೋಷ ಬರುತ್ತದೆ.

ಮೊದಲೆಲ್ಲ ಮಕ್ಕಳು ಊಟ ಮಾಡದಿದ್ದಾಗ, ಗುಮ್ಮ ಬರುತ್ತಾನೆ ಊಟ ಮಾಡೆಂದು ಹೇಳುತ್ತಿದ್ದರು. ಚಂದ ಮಾಮನನ್ನು ತೋರಿಸಿ, ಊಟ ಮಾಡಿಸುತ್ತಿದ್ದರು. ಆದರೆ ಈಗಿನ ಕಾಲದ ಬುದ್ಧಿವಂತ ಮಕ್ಕಳಿಗೆ, ಅದೆಲ್ಲ ಸಾಕಾಗುವುದಿಲ್ಲ. ಹಾಗಾಗಿ ಕೆಲವರು ಮಕ್ಕಳು ಊಟ ಮಾಡುತ್ತಿಲ್ಲವೆಂದು, ಮೊಬೈಲ್ ತೋರಿಸುತ್ತ ಊಟ ಮಾಡಿಸುತ್ತಾರೆ. ಇದೇ ತಪ್ಪಿನಿಂದಾಗಿ, ಮಕ್ಕಳಿಗೆ ದೃಷ್ಟಿ ದೋಷ ಬರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

ನಿಮ್ಮ ದೇಹದ ತೂಕ ಬೇಗ ಕಡಿಮೆಯಾಗಬೇಕು ಎಂದಲ್ಲಿ ಈ ಪೇಯ ಕುಡಿಯಿರಿ..

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

About The Author