ದಕ್ಷಿಣ ಕನ್ನಡದ ವಿವಾಹಿತೆಯರು ವಂಕಿ ಉಂಗುರ ಏಕೆ ಧರಿಸುತ್ತಾರೆ..?

Spiritual: ದಕ್ಷಿಣ ಕನ್ನಡಿಗರಲ್ಲಿ ಹಲವರು ವಂಕಿ ರಿಂಗನ್ನು ಹಾಕುತ್ತಾರೆ. ಆದರೆ ಆ ರಿಂಗ್ ಯಾಕೆ ಹಾಕಲಾಗತ್‌ತೆ. ಅದರ ಪ್ರಾಮುಖ್ಯತೆ ಏನು ಅನ್ನೋದೇ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ವಂಕಿ ರಿಂಗ್ ಪ್ರಾಮುಖ್ಯತೆ ಏನು ಎಂದು ಹೇಳಲಿದ್ದೇವೆ.

ವಂಕಿ ಉಂಗುರವನ್ನು ನೋಡಿದ ಈಗಿನ ಹೆಣ್ಣು ಮಕ್ಕಳು ಇದು ಐಶ್ವರ್ಯಾ ರೈ ಹಾಕಿಕೊಳ್ಳುವ ಉಂಗುರವೆನ್ನುತ್ತಾರೆ. ಕೆಲವರು ಇದು ಸ್ಟೈಲಿಗೆಂದು ಹಾಕುತ್ತಾರೆ. ಆದರೆ ಇದು ಬಂಟರ ಸಾಂಪ್ರದಾಯಿಕ ಆಭರಣ. ಬಂಟರ ವಿವಾಹದ ವೇಳೆ ವಧುವಿಗೆ ತೊಡಿಸಲೇಬೇಕಾದ ಉಂಗುರವಿದು.

ವಂಕಿ ಉಂಗುರವನ್ನು ವಿವಾಹಿತ ಹೆಣ್ಣು ಮಕ್ಕಳಷ್ಟೇ ಧರಿಸಬೇಕು. ಅದರಲ್ಲೂ ಬಂಟ ಸಮುದಾಯದವರು ಧರಿಸುವ ರಿಂಗ್ ಇದು. ಇದರಲ್ಲಿ ಚಿನ್ನದ ಜೊತೆ ವಜ್ರವನ್ನು ಸೇರಿಸಲಾಗುತ್ತದೆ. ಸರ್ಪ ದೋಷವಾಗದಿರಲಿ, ಅದರಿಂದ ಏನೂ ತೊಂದರೆಯಾಗದಿರಲಿ ಎಂದು ವಂಕಿ ಉಂಗುರವನ್ನು ತೊಡಿಸಲಾಗುತ್ತದೆ. ಹಾಗಾಗಿ ಹಾವಿನ ರೂಪದಲ್ಲೇ ಈ ಉಂಗುವಿದ್ದು, ವಿ ಶೇಪ್‌ನಲ್ಲಿರುತ್ತದೆ. ವಂಕಿ ಉಂಗುರ ನಾಗಾರಾಧನೆಯ ಪ್ರತೀಕವಾಗಿದೆ.

ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?

ಶ್ರಾವಣದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳುವುದೇಕೆ..?

ಬಿಲ್ವಪತ್ರೆ ಗಿಡವನ್ನು ಮನೆಯ ಬಳಿ ನೆಡಬಹುದೇ..?

About The Author