ಕನಸು ಹೇಳಿ ಕೇಳಿ ಬರೋದಿಲ್ಲಾ. ಒಮ್ಮೊಮ್ಮೆ ಯಾರ್ಯಾರೋ ಕನಸಲ್ಲಿ ಬರ್ತಾರೆ..? ಹುಚ್ಚುಚ್ಚಾಗಿ ಕನಸು ಬೀಳತ್ತೆ. ಆದ್ರೆ ಕೆಲವು ಬಾರಿ ಕೆಲವು ಕನಸು ಲಾಭ ತಂದುಕೊಟ್ರೆ, ಇನ್ನು ಕೆಲವು ಕನಸು ನಷ್ಟವನ್ನುಂಟು ಮಾಡತ್ತೆ. ಅದೇ ರೀತಿ ಕನಸಿನಲ್ಲಿ ನಮ್ಮ ಪೂರ್ವಜರು, ತೀರಿಹೋದವರು ಕೂಡ ಬರ್ತಾರೆ. ಹಾಗಾದ್ರೆ ತೀರಿಹೋದವರು ಕನಸಿನಲ್ಲಿ ಯಾಕೆ ಬರ್ತಾರೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿಮಗೆ ಮದುವೆ ಬೇಗ ಆಗ್ತಿಲ್ವ ಹೀಗೆ ಮಾಡಿ ಖಂಡಿತ ಮದುವೆ ಯೋಗ ಕೂಡಿಬರುತ್ತದೆ
ಗರುಡ ಪುರಾಣದ ಪ್ರಕಾರ, ನಿಮ್ಮ ಮನೆಯಲ್ಲಿ ಯಾರಾದರೂ ತೀರಿ ಹೋದಾಗ, ಅವರ ಅಂತ್ಯ ಸಂಸ್ಕಾರವನ್ನ ಸರಿಯಾಗಿ ಮಾಡದಿದ್ದಲ್ಲಿ. ಅವರ ಹೆಸರಿನಲ್ಲಿ ದಾನ ಧರ್ಮ ಮಾಡದಿದ್ದಲ್ಲಿ, ಬಡವರಿಗೆ ಊಟ ಹಾಕಿಸದಿದ್ದಲ್ಲಿ, ತಿಥಿ ಇತ್ಯಾದಿ ಸರಿಯಾಗಿ ಮಾಡದಿದ್ದಲ್ಲಿ, ಮತ್ತು ಪ್ರತೀ ವರ್ಷ ಶ್ರಾದ್ಧ ಮಾಡುವುದನ್ನು ಮರೆತಲ್ಲಿ, ನಿಮ್ಮ ಕನಸಿನಲ್ಲಿ ಪೂರ್ವಜರು, ದುಃಖತಪ್ತರಾಗಿ ಬರುತ್ತಾರೆ.
ಜನರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳದಿರಲು ಹೀಗೆ ಮಾಡಿ …!
ಇನ್ನು ನೀವು ಸರಿಯಾದ ರೀತಿಯಲ್ಲಿ ಅಂತ್ಯಸಂಸ್ಕಾರ, ತಿಥಿ, ಶ್ರಾದ್ಧ ಕಾರ್ಯ ಮಾಡಿದ್ದಲ್ಲಿ, ನಿಮ್ಮ ಹಿರಿಯರು ನಿಮ್ಮನ್ನು ಆಶೀರ್ವದಿಸುವ ರೀತಿ, ನಿಮ್ಮ ನೋಡಿ ಮುಗುಳ್ನಗೆ ಬೀರುವ ರೀತಿ ಕನಸಿನಲ್ಲಿ ಬರುತ್ತಾರೆ. ಇದು ಒಳ್ಳೆಯ ಸಂಕೇತ. ನೀವಂದುಕೊಂಡ ಕೆಲಸ ನೇರವೇರಲಿದೆ. ನಿಮಗೆ ಲಾಭದ ದಿನಗಳು ಸಮೀಪಿಸಿವೆ ಎಂದರ್ಥ.
ಆದ್ರೆ ನಿಮ್ಮ ಕನಸ್ಸಿನಲ್ಲಿ ತೀರಿಹೋದವರು ದುಃಖ ತಪ್ತರಾಗಿದ್ದರೆ, ಅವರಿಗೇನೋ ಬೇಕು ಎಂದು ಅರ್ಥ. ಹಾಗಾಗಿ ಇಂಥ ಕನಸು ಬಿದ್ದಾಗ, ಮನೆಯವರ ಬಳಿ ಈ ಬಗ್ಗೆ ಮಾತನಾಡಿ, ಅದಕ್ಕೆ ಬೇಕಾದ ಪರಿಹಾರ ಮಾಡಿಕೊಳ್ಳಿ.