ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ದೇವಿಯ ರೂಪವೆಂದು ಪೂಜಿಸಲಾಗುತ್ತದೆ. ಹಾಗಾಗಿ ಮುಟ್ಟಾದ ಹೆಣ್ಣು ಮಕ್ಕಳು ತುಳಸಿ ಗಿಡವನ್ನು ಮುಟ್ಟಬಾರದು ಅಂತಾ ಹಿರಿಯರು ಹೇಳ್ತಾರೆ. ಆದ್ರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಆ ವೈಜ್ಞಾನಿಕ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮೊದಲೆಲ್ಲ ಕೆಲವರ ಮನೆಯಲ್ಲಿ ಮುಟ್ಟಾದ ಹೆಣ್ಣು ಮಕ್ಕಳನ್ನು 4 ದಿನ ದೂರ ಕೂರಿಸುತ್ತಿದ್ದರು. ಆ 4 ದಿನ ಅವರು ಮನೆ ಗೆಲಸ ಮಾಡುವಂತಿರಲಿಲ್ಲ. ಹೋಮ ಹವನ ಪೂಜೆಯಲ್ಲಿ ಭಾಗವಹಿಸುವಂತಿರಲಿಲ್ಲ. ದೇವಸ್ಥಾನಕ್ಕೆ ಹೋಗುವಂತಿರಲಿಲ್ಲ. ಯಾರನ್ನೂ ಮುಟ್ಟುವಂತಿರಲಿಲ್ಲ. ಕೆಲವರ ಪ್ರಕಾರ, ಮುಟ್ಟಾದ ಹೆಣ್ಣು ಮಕ್ಕಳು ಅಪವಿತ್ರರಾಗಿರುತ್ತಾರೆ. ಹಾಗಾಗಿ ಈ ಕೆಲಸವೆಲ್ಲ ಮಾಡುವಂತಿಲ್ಲ ಅಂತಾ ಹೇಳ್ತಾರೆ.
ಈ 5 ಜನರನ್ನು ಎಂದಿಗೂ ದ್ವೇಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..
ಆದ್ರೆ ಇದಕ್ಕಿರುವ ಕಾರಣವೇ ಬೇರೆ. ಮುಟ್ಟಾದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಹೊಟ್ಟೆ ನೋವು, ಬೆನ್ನು ನೋವು, ಕೈಕಾಲು ನೋವಿರುತ್ತದೆ. ದೇಹದಲ್ಲಿ ಸರಿಯಾಗಿ ಶಕ್ತಿ ಇರುವುದಿಲ್ಲ. ಹಾಗಾಗಿ 4 ದಿನ ಹೆಣ್ಣು ಮಕ್ಕಳು ಆರಾಮವಾಗಿರಲಿ ಎಂಬ ಕಾರಣಕ್ಕೆ ಎಲ್ಲ ಕೆಲಗಳಿಂದ ಆಕೆಗೆ ಮುಕ್ತಿ ಕೊಡಿಸಿ, ದೂರ ಕೂರಿಸಲಾಗುತ್ತಿತ್ತು.
ಇನ್ನು ತುಳಸಿ ಗಿಡವನ್ನು ಮುಟ್‌ಟಾದವರು ಮುಟ್ಟಿದ್ದಲಿ ಅದು ಒಣಗುತ್ತದೆ. ಇದಕ್ಕೆ ಕಾರಣ ಅಂದ್ರೆ ಮುಟಟ್ಟಾದಾಗ ಹೆಣ್ಣು ಮಕ್ಕಳ ದೇಹದಲ್ಲಿ ಉಷ್ಣತೆ ಹೆಚ್ಚಿಸುತ್ತದೆ. ಮತ್ತು ತುಳಸಿಯಲ್ಲಿಯೂ ಉಷ್ಣತೆ ಹೆಚ್ಚಿರುತ್ತದೆ. ಹಾಗಾಗಿ ಮುಟ್ಟಾದವರು ತುಳಸಿ ಮುಟ್ಟಿದಾಗ ಅದು ಒಣಗುತ್ತದೆ. ಇನ್ನು ರವಿವಾರದ ದಿನ ಸೂರ್ಯನ ದಿನವಾಗಿರುವ ಕಾರಣಕ್ಕೆ, ಆ ದಿನವೂ ಸೂರ್ಯನ ಶಾಖ ಹೆಚ್ಚಿರುತ್ತದೆ. ಆ ದಿನ ಮನುಷ್ಯನ ದೇಹದಲ್ಲಿ ಎಲ್ಲ ದಿನಕ್ಕಿಂತ ಹೆಚ್ಚು ಉಷ್ಣವಿರುತ್ತದೆ. ಇದೇ ಕಾರಣಕ್ಕೆ ರವಿವಾರದ ದಿನ ತುಳಸಿ ಗಿಡ ಮುಟ್ಟಬಾರದು ಅಂತಾ ಹೇಳಲಾಗಿದೆ.