- Advertisement -
ಎಲ್ಲರಿಗೂ ಸಾಮಾನ್ಯವಾಗಿ ಒಂದು ಕೈಗೆ 5 ಬೆರಳುಗಳಿರುತ್ತದೆ. ಆದ್ರೆ ಕೆಲವರಿಗೆ ಮಾತ್ರ ಒಂದು ಕೈಗೆ 6 ಬೆರಳುಗಳಿರುತ್ತದೆ. ಕೆಲವರು ಇದು ಅದೃಷ್ಟದ ಸಂಕೇತ. ಇದರಿಂದ ಅಪ್ಪ ಅಮ್ಮನಿಗೆ ಆರ್ಥಿಕ ಲಾಭವಾಗುತ್ತದೆ ಎಂದು ಹೇಳುತ್ತಾರೆ. ಆದ್ರೆ ಇದರ ಹಿಂದೆ ಇರುವ ಸತ್ಯವೇ ಬೇರೆ. ಹಾಗಾದ್ರೆ ಯಾಕೆ ಕೆಲವರಿಗೆ 6 ಬೆರಳುಗಳಿರತ್ತೆ ಅಂತಾ ತಿಳಿಯೋಣ ಬನ್ನಿ..
ಪಾಲಿಡೆಕ್ಟಲಿ ಎಂಬ ಅಂಶ ಯಾರ ದೇಹದಲ್ಲಿರುತ್ತದೆಯೋ, ಅವರಿಗೆ 6 ಬೆರಳುಗಳಿರುತ್ತದೆ. ಇದೊಂದು ಅನುವಂಶಿಕ ಅಸ್ವಸ್ಥತೆಯಾಗಿದೆ. ಇದು ಯಾರಲ್ಲಿರುತ್ತದೆಯೋ, ಅವರಿಗೆ ಕೈಗಳಿಗೆ ಅಥವಾ ಕಾಲುಗಳಲ್ಲಿ ಆರು ಬೆರಳುಗಳಿರುತ್ತದೆ. ಆರು ಬೆರಳುಗಳಿರುವವರು ತುಂಬಾ ಟ್ಯಾಲೆಂಟೆಡ್ ಇರುತ್ತಾರೆ. ಜಾಣರಿರುತ್ತಾರೆ ಅನ್ನೋದು ಸುಳ್ಳು. ಅಪ್ಪಿ ತಪ್ಪಿ ಅವರು ಅಥವಾ ಅವರ ಅಪ್ಪ ಅಮ್ಮ ಅದೃಷ್ಟವಂತರಿದ್ದರೆ, ಅದು ಅವರ ಲಕ್ ಅಷ್ಟೇ. ಅದಕ್ಕೂ ಬೆರಳಿಗೂ ಸಂಬಂಧವಿಲ್ಲ.
- Advertisement -

