Thursday, November 21, 2024

Latest Posts

ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

- Advertisement -

Spiritual: ಈ ಸೃಷ್ಟಿಗೆ ಶಿವ ಕಾರಣನಾದರೂ, ತಾನಿಲ್ಲದೇ, ಎಲ್ಲವೂ ಅಪೂರ್ಣ ಎಂಬುದನ್ನು ತೋರಿಸಿಕೊಟ್ಟಿದ್ದು, ಪಾರ್ವತಿ ದೇವಿ. ಆಕೆಯ ಸ್ವರೂಪವಾಗಿದ್ದ ದುರ್ಗಾ ದೇವಿ, ಲೋಕ ರಕ್ಷಣೆಗಾಗಿ, ದುಷ್ಟ ಸಂಹಾರಕ್ಕಾಗಿಯೇ ಇದ್ದವಳು. ಇಂದು ನಾವು ದುರ್ಗಾದೇವಿ ಹೇಗೆ ದೇವತೆಗಳ ಅಹಂಕಾರವನ್ನು ಇಳಿಸುತ್ತಾಳೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ದಾನವರು ಮತ್ತು ದೇವತೆಗಳ ಮಧ್ಯೆ ಘೋರ ಯುದ್ಧ ನಡೆಯಿತು. ದುರ್ಗಾದೇವಿಯ ಕೃಪೆಯಿಂದ, ದೇವತೆಗಳು ವಿಜಯ ಸಾಧಿಸಿದರು. ಆದರೆ ದೇವತೆಗಳು ತಮ್ಮ ಶಕ್ತಿಯಿಂದಲೇ ತಾವು ಜಯ ಗಳಿಸಿದ್ದು, ಅನ್ನೋ ಅಹಂನಲ್ಲಿದ್ದರು. ಇವರ ದುರಹಂಕಾರವನ್ನು ಮುರಿಯಬೇಕು ಎಂದು ದುರ್ಗಾದೇವಿ, ದೀಪದ ಪುಂಜವಾಗಿ ರೂಪ ತಾಳಿ, ದೇವತೆಗಳ ಎದುರು ಹೋದಳು.

ಅದನ್ನು ಕಂಡ ಇಂದ್ರ, ವಾಯು ದೇವನನ್ನು ಆ ಬೆಳಕಿನ ಪೂಂಜದ ಬಳಿ ಕಳಿಸಿದ. ಬೆಳಕಿನ ಪೂಂಜ, ವಾಯುವನ್ನು ನೀನು ಯಾರು ಎಂದು ಕೇಳಿತು. ಅದಕ್ಕೆ ವಾಯುದೇವ, ನಾನು ದೇವತೆಗಳಲ್ಲೇ ಅತೀ ಶಕ್ತಿಶಾಲಿ ದೇವ, ವಾಯುದೇವನೆಂದು ಹೇಳಿದ. ಅದಕ್ಕೆ ಒಂದು ಹುಲ್ಲು ಕಡ್ಡಿಯನ್ನು ಬಿಸಾಕಿದ ಬೆಳಕಿನ ಪೂಂಜ, ನೀನು ಶಕ್ತಿಶಾಲಿಯಾಗಿದ್ದರೆ, ಈ ಹುಲ್ಲಿನ ಕಡ್ಡಿಯನ್ನು ಹಾರುವಂತೆ ಮಾಡು ಎಂದಿತು.

ವಾಯುದೇವ ತನ್ನೆಲ್ಲ ಶಕ್ತಿಯನ್ನು ಹಾಕಿದರೂ, ಆ ಹುಲ್ಲುಕಡ್ಡಿ ಅಲ್ಲಾಡಿಸಲಾಗಲಿಲ್ಲ. ಆಗ ಇಂದ್ರ, ಅಗ್ನಿಯನ್ನು ಕಳಿಸಿ, ಆ ಹುಲ್ಲುಕಡ್ಡಿಯನ್ನು ಸುಟ್ಟು ಹಾಕು ಎಂದ. ಅಗ್ನಿ ದೇವನ ಪ್ರಯತ್ನ ವಿಫಲವಾಯಿತು. ಹುಲ್ಲುಕಡ್ಡಿ ಹೇಗಿತ್ತೋ, ಹಾಗೇ ಇತ್ತು. ಬಳಿಕ ತಾನೇ ಬೆಳಕಿನ ಪುಂಜದ ಬಳಿ ಬಂದ ಇಂದ್ರದೇವ, ನೀನು ಯಾರು..? ಯಾವುದೇ ಅದ್ಭುತವಾದ ಶಕ್ತಿಯಾಗಿರುವ ನಿನ್ನ ಮುಂದೆ ನಾವು ಅಂಹಕಾರ ತೋರಿಸಿದೆವು. ನಮ್ಮನ್ನು ಕ್ಷಮಿಸಿ, ನಿನ್ನ ನಿಜ ರೂಪ ತೋರಿಸು ಎಂದು ಕೇಳುತ್ತಾನೆ.

ಅದಕ್ಕೆ ಬೆಳಕಿನ ಪುಂಜದಿಂದ ದುರ್ಗಾದೇವಿ ತನ್ನ ನಿಜರೂಪಕ್ಕೆ ಬರುತ್ತಾಳೆ. ಮತ್ತು ನನ್ನ ಕೃಪೆಯಿಂದಲೇ ನೀವು ದಾನವರ ವಿರುದ್ಧ ವಿಜಯ ಸಾಧಿಸಿದ್ದೀರಿ. ಇದನ್ನು ನಿಮ್ಮ ಶಕ್ತಿ ಎಂದು ತಿಳಿದು ಅಂಹಕಾರ ಪಟ್ಟಿರಿ. ನನ್ನ ದಯೆ ಇಲ್ಲದೇ, ನೀವು ಒಂದು ಹುಲ್ಲುಕಡ್ಡಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಿ ಎನ್ನುತ್ತಾಳೆ. ಆಗ ದೇವತೆಗಳೆಲ್ಲ ತಮ್ಮ ತಪ್ಪನ್ನು ಮನ್ನಿಸೆಂದು ಕ್ಷಮೆ ಕೇಳುತ್ತಾರೆ.

ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ಹೇಳಲು ಕಾರಣವೇನು..?

ಇದು ಶ್ರೀವಿಷ್ಣು ಪಾರ್ವತಿಯ ಅಣ್ಣನಾದ ಕಥೆ..

ಪ್ರತೀ ವರ್ಷ ಪುರಿ ಜಗನ್ನಾಥನಿಗೆ ಅನಾರೋಗ್ಯವಾಗುತ್ತದೆ.. ಇದರ ಹಿಂದಿನ ಕಥೆ ಇಲ್ಲಿದೆ ನೋಡಿ..

- Advertisement -

Latest Posts

Don't Miss