Thursday, October 16, 2025

Latest Posts

ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ..

- Advertisement -

ನಾವು ಹಲವು ಫೋಟೋಗಳಲ್ಲಿ ಲಕ್ಷ್ಮೀದೇವಿ ಶ್ರೀವಿಷ್ಣುವಿನ ಕಾಲು ಒತ್ತುತ್ತ ಸೇವೆ ಮಾಡುವುದನ್ನು ನೋಡಿದ್ದೇವೆ. ಹಲವು ಪೌರಾಣಿಕ ಧಾರಾವಾಹಿಗಳು, ಸಿನಿಮಾಗಳಲ್ಲೂ ಲಕ್ಷ್ಮೀ ದೇವಿ, ಶ್ರೀವಿಷ್ಣುವಿನ ಕಾಲು ಒತ್ತುತ್ತಿರುತ್ತಾಳೆ. ಹಾಗಾದ್ರೆ ಯಾಕೆ ಲಕ್ಷ್ಮೀದೇವಿ, ಶ್ರೀವಿಷ್ಣುವಿನ ಕಾಲು ಒತ್ತುವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಒಮ್ಮೆ ನಾರದರು ಲಕ್ಷ್ಮೀ ದೇವಿಯ ಬಳಿ ಕೇಳುತ್ತಾರಂತೆ, ನೀವು ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲನ್ನ ಒತ್ತುತ್ತಿರುತ್ತೀರಿ ಎಂದು. ಅದಕ್ಕೆ ಲಕ್ಷ್ಮೀ ದೇವಿ, ಮನುಷ್ಯನಾಗಲಿ, ದೇವ ದೇವತೆಗಳೇ ಆಗಲಿ, ಗ್ರಹಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೆಣ್ಣು ಮಕ್ಕಳ ಕೈಯಲ್ಲಿ ಬ್ರಹಸ್ಪತಿಯ ವಾಸವಿದ್ದರೆ, ಪತಿಯ ಪಾದದಲ್ಲಿ ಶುಕ್ರಾಚಾರ್ಯರ ವಾಸವಿರುತ್ತದೆ.

ಈ 5 ಮರಗಳು ನಿಮ್ಮ ಮನೆಯ ಬಳಿ ಇರದಂತೆ ನೋಡಿಕೊಳ್ಳಿ..

ಈ ವೇಳೆ ಪತ್ನಿ ಪತಿಯ ಪಾದ ಒತ್ತಿದಾಗ, ಅಲ್ಲಿ ದೇವ ದಾನವರ ಮಿಲನವಾಗುತ್ತದೆ. ಇದು ಉತ್ತಮ ಸಮಯವಾಗಿದೆ. ನನ್ನಂತೆಯೇ ಹೆಣ್ಣು ಮಕ್ಕಳು ಪತಿಯ ಕಾಲನ್ನೊತ್ತಿ ಸೇವೆ ಮಾಡುತ್ತಾರೋ, ಅಂಥವರ ಮನೆಯಲ್ಲಿ ಸದಾ ಸಂಪತ್ತು ಇರುತ್ತದೆ. ನೆಮ್ಮದಿ ಇರುತ್ತದೆ. ಅವರಿಗೆ ಒಳ್ಳೆಯದಾಗುತ್ತದೆ ಎನ್ನುತ್ತಾಳೆ. ಇನ್ನು ಲಕ್ಷ್ಮೀ ಮತ್ತು ವಿಷ್ಣು ಜೊತೆಯಲ್ಲಿದ್ದಾಗ, ಅಲ್ಲಿ ದರಿದ್ರ ಲಕ್ಷ್ಮೀ ಪ್ರವೇಶ ಮಾಡುತ್ತಿದ್ದಳಂತೆ. ಆಗ ಕೋಪಗೊಂಡ ಲಕ್ಷ್ಮೀ, ನಾನು ನನ್ನ ಪತಿ ಏಕಾಂತದಲ್ಲಿರುವಾಗ ನೀನು ಬರಬಾರದು ಎಂದು ಹೇಳುತ್ತಾಳೆ.

ಆಗ ದರಿದ್ರ ಲಕ್ಷ್ಮೀ, ನನ್ನನ್ನು ಯಾರೂ ಪ್ರೀತಿಸುವುದಿಲ್ಲ, ಪೂಜಿಸುವುದಿಲ್ಲ. ಆದ್ರೆ ನಿನ್ನನ್ನು ಎಲ್ಲರೂ ಪ್ರೀತಿಸುತ್ತಾರೆ ಮತ್ತು ಪೂಜಿಸುತ್ತಾರೆ. ಹಾಗಾಗಿ ನೀನು ಎಲ್ಲಿರುತ್ತಿಯೋ, ನಾನು ಅಲ್ಲಿರುತ್ತೇನೆಂದು ಹೇಳುತ್ತಾಳೆ. ಆಗ ಕೋಪಗೊಂಡ ಲಕ್ಷ್ಮೀ, ನೀನು ದರಿದ್ರ ಲಕ್ಷ್ಮೀ. ನಾನಿರುವ ಜಾಗದಲ್ಲಿ ನೀನಿರಲು ಸಾಧ್ಯವಿಲ್ಲ. ಒಂದು ನಾನಿರಬೇಕು ಅಥವಾ ನೀನಿರಬೇಕು.

ಕಾಳುಮೆಣಸನ್ನ ಅಡುಗೆಯಲ್ಲಿ ಸೇರಿಸಬೇಕು ಅಂತಾ ಹೇಳೋದು ಇದಕ್ಕೆ ನೋಡಿ..

ಯಾವ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲವೋ, ಯಾರು ಪತಿಯನ್ನು ಪ್ರೀತಿ, ಕಾಳಜಿಯಿಂದ ಕಾಣುವುದಿಲ್ಲವೋ, ಯಾವ ಮನೆಯಲ್ಲಿ ಹೆಣ್ಣು ಯಾವಾಗಲೂ ಕಣ್ಣೀರು ಹಾಕುತ್ತಾಳೋ ಯಾರು ಯಾವಾಗಲೂ ಕೋಪದಿಂದ ಇರುತ್ತಾರೋ, ಯಾವ ಮನೆಯಲ್ಲಿ ದೀಪ ಬೆಳುಗುವುದಿಲ್ಲವೋ, ಆ ಮನೆಯಲ್ಲಿ ನೀನು ವಾಸವಾಗುತ್ತಿ. ಯಾವ ಮನೆಯಲ್ಲಿ ತಾಳ್ಮೆಯ ಜನರಿರುತ್ತಾರೋ, ದೀಪ ಬೆಳಗುತ್ತಾರೋ, ಪತಿಯನ್ನ ಪ್ರೀತಿ, ಕಾಳಜಿಯಿಂದ ಕಾಣುತ್ತಾರೋ, ಅವರ ಮನೆಯಲ್ಲಿ ನಾನಿರುತ್ತೇನೆ ಎನ್ನುತ್ತಾಳೆ ಲಕ್ಷ್ಮೀ.

ಇದೇ ಕಾರಣಕ್ಕೆ ಮನೆಯಲ್ಲಿ ಎರಡು ಹೊತ್ತು ದೀಪ ಬೆಳಗಬೇಕು, ತಾಳ್ಮೆಯಿಂದ ಇರಬೇಕು, ಸ್ವಚ್ಛವಾಗಿರಬೇಕು, ಪತ್ನಿ ಪತಿಯ ಕಾಳಜಿ ಮಾಡಬೇಕು, ಪತಿ ಪತ್ನಿಯನ್ನ ನೆಮ್ಮದಿಯಿಂದಿಡಬೇಕು ಅಂತಾ ಹೇಳೋದು.

- Advertisement -

Latest Posts

Don't Miss