Health Tips: ಶ್ವಾಸ ಕೋಶದ ನಿಮೋನಿಯಾ ಯಾಕೆ ಬರುತ್ತದೆ..? ಅದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ಭೀಮ್‌ಸೇನ್ ರಾವ್, ಲಂಗ್ಸ್ ನಿಮೋನಿಯಾ ಬರಲು ಕಾರಣಗಳೇನು..? ಇದರ ಲಕ್ಷಣಗಳೇನು ಅಂತಾ ಹೇಳಿದ್ದಾರೆ. ನಾವು ಉಸಿರಾಡುವಾಗ ನಮಗೆ ಗೊತ್ತಿಲ್ಲದೇ, ಕ್ರಿಮಿ,ಕೀಟಗಳು ನಮ್ಮ ದೇಹ ಸೇರುತ್ತದೆ. ಇದರಿಂದ ಲಂಗ್ ಇನ್‌ಫೆಕ್ಷನ್ ಆಗುತ್ತದೆ. ಇದನ್ನೇ ಲಂಗ್ಸ್ ನಿಮೋನಿಯಾ ಎಂದು ಕರೆಯುತ್ತಾರೆ.
ಲಂಗ್ಸ್ ನಿಮೋನಿಯಾ ಆದಾಗ, ಜ್ವರ ಬರುತ್ತದೆ. ಕೆಮ್ಮು ಬರುತ್ತದೆ. ಗಂಟಲು ನೋವು ಬರುತ್ತದೆ. ಕಫ ಆಗುತ್ತದೆ. ಈ ವೇಳೆ ಕಫದ ಬಣ್ಣ ಬದಲಾಗಬಹುದು. ಅಥವಾ ಕಫದಲ್ಲಿ ರಕ್ತ ಕಾಣಿಸಿಕೊಳ್ಳಬಹುದು. ಇನ್ನು ಈ ರೋಗ ಯಾರಿಗೆ ಕಾಣಿಸಿಕೊಳ್ಳುತ್ತದೆ ಎಂದರೆ, ಧೂಳಿರುವ ಪ್ರದೇಶದಲ್ಲಿ ವಾಸಿಸುವರಿಗೆ ಮತ್ತು ಓಡಾಡುವರಿಗೆ ಈ ಸೋಂಕು ತಗಲುತ್ತದೆ. ಏಕೆಂದರೆ, ಧೂಳಿನಿಂದಲೇ, ಶ್ವಾಸಕೋಶಕ್ಕೆ ಕ್ರಿಮಿ ಕೀಟ ಹೋಗುತ್ತದೆ. ಆಗ ಲಂಗ್ಸ್ ನಿಮೋನಿಯಾ ಬರುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕಿದ್ದರೆ, ಈ ವೀಡಿಯೋ ನೋಡಿ..
Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?