ಹಲವರು ಗರ್ಭಿಣಿಯರು ಸರ್ಪಕ್ಕೆ ಸಂಬಂಧಿಸಿದ ದೇವಸ್ಥಾನಕ್ಕೆ ಹೋಗಬಾರದು. ಹಾಗೆ ಹೋಗಬೇಕೆಂದಿದ್ದರೆ, ಗರ್ಭಿಣಿಯಾಗುವ ಮುನ್ನ ಅಥವಾ ಮಗು ಹುಟ್ಟಿದ ಬಳಿಕ ಹೋಗಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ, ಗರ್ಭಿಣಿಯರಿಗೆ ಸರ್ಪ ಕಚ್ಚುವುದಿಲ್ಲ ಅನ್ನೋ ಮಾತೂ ಇದೆ. ಹಾಗಾದ್ರೆ ಯಾಕೆ ಸರ್ಪ ಗರ್ಭಿಣಿಯರಿಗೆ ಕಚ್ಚುವುದಿಲ್ಲ ಅಂತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಒಬ್ಬ ಗರ್ಭಿಣಿ ಶಿವನ ದರ್‌ಶನ ಮಾಡಲೆಂದು ಶಿವಾಲಯಕ್ಕೆ ಹೋಗುತ್ತಾಳೆ. ಅಲ್ಲಿ ಶಿವನನ್ನು ಜಪಿಸುತ್ತ ಕೂರುತ್ತಾಳೆ. ಅಲ್ಲಿ ಬಂದ ಎರಡು ನಾಗಗಳು ಆಕೆಗೆ ತೊಂದರೆ ಕೊಡಲಾರಂಭಿಸುತ್ತದೆ. ಈ ಕಾರಣಕ್ಕೆ ಆಕೆ ಸರಿಯಾಗಿ ಶಿವನ ಜಪ ಮಾಡಲು ಸಾಧ್ಯವಾಗುವುದಿಲ್ಲ. ಆಗ ಆ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು, ಇನ್ನು ಮುಂದೆ ಗರ್ಭಿಣಿಯನ್ನ ಕಂಡಾಗ ಸರ್ಪಗಳ ಕಣ್ಣು ಕುರುಡಾಗಲಿ ಎಂದು ಶಾಪ ಕೊಟ್ಟಿತಂತೆ.
ಈ ಕಾರಣಕ್ಕೆ, ಗರ್ಭಿಣಿಯರು ಹಾವನ್ನು ನೋಡಬಾರದು. ಮತ್ತು ಹಾವುಗಳು ಗರ್ಭಿಣಿಯರನ್ನ ನೋಡಿದ್ರೆ, ಅದರ ಕಣ್ಣು ಕುರುಡಾಗುತ್ತದೆ ಅಂತಾ ಹೇಳಲಾಗುತ್ತದೆ. ಇದೇ ಕಾರಣಕ್ಕೆ ಸರ್ಪ ಗರ್ಭಿಣಿ ಸ್ತ್ರೀಯನ್ನು ಕಚ್ಚುವುದಿಲ್ಲ ಅಂತಲೂ ಹೇಳಲಾಗುತ್ತದೆ. ಅಲ್ಲದೇ ಗರ್ಭವತಿಯಾದವಳಿಗೆ ಕನಸ್ಸಿನಲ್ಲೂ ಕೂಡ ಸರ್ಪ ಕಾಣಿಸುವುದಿಲ್ಲ ಅಂತಾ ಹೇಳಲಾಗುತ್ತದೆ. ಇದನ್ನ ಹಲವರು ಮೂಢನಂಬಿಕೆ ಅಂದರೂ ಕೂಡ, ಇನ್ನು ಕೆಲವರು ನಾವೆಲ್ಲೂ ಗರ್ಭಿಣಿಗೆ ಸರ್ಪ ಕಚ್ಚಿದ್ದನ್ನ ಕಂಡಿಲ್ಲ ಅಂತಾರೆ.