Friday, December 27, 2024

Latest Posts

ಪರಶುರಾಮ ತನ್ನ ಸ್ವಂತ ತಾಯಿಯ ತಲೆಯನ್ನೇ ಕಡಿಯಲು ಕಾರಣವೇನು..?

- Advertisement -

ಸಾಧಾರಣವಾಗಿ ಹಿರಿಯರು ಮಾತನಾಡುವಾಗ, ಯಾರಿಗಾದರೂ ಕೋಪ ಬಂದರೆ, ಪರಶುರಾಮನ ಕೋಪದ ಬಗ್ಗೆ ಮಾತನಾಡುತ್ತಾರೆ. ಯಾಕಂದ್ರೆ ಪರಶುರಾಮನಿಗೆ ಅತೀ ಹೆಚ್ಚು ಕೋಪವಿತ್ತು. ಅಪ್ಪನ ಮಾತು ಕೇಳಿದ ಪರಶುರಾಮ, ಒಂದು ಕ್ಷಣವೂ ಯೋಚಿಸದೇ, ತಾಯಿಯ ತಲೆಯನ್ನೇ ಕಡಿದು ಹಾಕಿದ. ಹಾಗಾದ್ರೆ ಪರಶುರಾಮ ಹೆತ್ತ ತಾಯಿಯ ತಲೆಯನ್ನೇ ಕಡಿದು ಹಾಕುವಂಥದ್ದು ಏನಾಗಿತ್ತು..? ಇದರ ಹಿಂದಿರುವ ಕಥೆಯಾದರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಜಮದಗ್ನಿ ಮತ್ತು ಮಾತಾ ರೇಣುಕಾದೇವಿಗೆ ಐವರು ಪುತ್ರರಿದ್ದರು. ರುಕ್ಮವಾನ, ಸುಶೇಣು, ವಸು, ವಿಶ್ವವಸು ಮತ್ತು ಪರಶುರಾಮ. ಪರಶುರಾಮನಿಗೆ ಶಿವನಿಂದ ವಿಶೇಷ ಪರಶು ಅಂದ್ರೆ ಕೊಡಲಿ ಸಿಕ್ಕಿತ್ತು. ಹಾಗಾಗಿ ಈತನಿಗೆ ಪರಶುರಾಮನೆಂದು ಹೆಸರು ಬಂತು. ಒಮ್ಮೆ ರೇಣುಕಾದೇವಿ ನೀರು ತರಲು ನದಿಗೆ ಹೋಗಿದ್ದಳು. ಅಲ್ಲಿ ಓರ್ವ ಸುಂದರ ಯುವಕ ನದಿಯಲ್ಲಿ ಆಡುತ್ತಿದ್ದದ್ದನ್ನು ನೋಡುತ್ತ, ಅಲ್ಲೇ ನಿಂತುಬಿಟ್ಟಳು.

ಆಕೆ ಆ ಯುವರಾಜನನನ್ನು ಅದೆಷ್ಟರ ಮಟ್ಟಿಗೆ ಮೈಮರೆತು ನೋಡುತ್ತಿದ್ದಳೆಂದರೆ, ಜಮದಗ್ನಿ ತನ್ನ ಬರುವಿಕೆಗಾಗಿ ಕಾಯುತ್ತಿದ್ದಾರೆ ಅನ್ನೋದನ್ನೇ ಮರೆಯುವಷ್ಟು. ಇತ್ತ ಜಮದಗ್ನಿ ರೇಣುಕೆ ವಾಪಸ್ ಬರದಿದ್ದನ್ನು ಕಂಡು, ಏನಾಯಿತೆಂದು ತಮ್ಮ ದಿವ್ಯಜ್ಞಾನದಿಂದ ನೋಡಿದಾಗ, ಅಲ್ಲಿನ ದೃಶ್ಯ ಅವರ ಕಣ್ಣಿಗೆ ಬಿತ್ತು. ಈ ವೇಳೆ ಕೋಪಗೊಂಡ ಋಷಿಗಳು, ತಮ್ಮ ಐವರು ಮಕ್ಕಳನ್ನು ಕರೆದು, ತಾಯಿಯ ತಲೆ ಕಡಿಯಲು ಹೇಳಿದರು.

ರುಕ್ಮವಾನ, ಸುಶೇಣು, ವಸು, ವಿಶ್ವವಸು ಇವರ್ಯಾರು ಈ ಕೆಲಸಕ್ಕೆ ಒಪ್ಪಲಿಲ್ಲ. ಆದರೆ ಪರಶುರಾಮ ಮಾತ್ರ ಜಮದಗ್ನಿಯ ಮಾತನ್ನು ಒಪ್ಪಿ, ಮರು ಕ್ಷಣವೇ ತಾಯಿಯ ರುಂಡ ಕತ್ತರಿಸಿದ. ನಂತರ ತನ್ನ ನಾಲ್ವರು ಸಹೋದರರನ್ನೂ ಕೊಲ್ಲು ಎಂದಾಗ, ಅವರನ್ನೂ ಕೊಂದ. ಏಕೆ ಹೀಗೆ ಮಾಡಿದನೆಂದರೆ, ತಾನೇನಾದರೂ ತಂದೆಯ ಮಾತನ್ನ ನಿರಾಕರಿಸಿದರೆ, ತಂದೆ ನನ್ನನ್ನೂ ಸೇರಿಸಿ, ಸಹೋದರರು ಮತ್ತು ತಾಯಿಯನ್ನು ತಾವೇ ಕೊಲ್ಲುತ್ತಿದ್ದರು. ಆದರೆ ನಾನೇ ಹೀಗೆ ಮಾಡಿ, ನಂತರ ಅವರಿಂದ ವರ ಬೇಡಿ, ಎಲ್ಲರನ್ನೂ ಉಳಿಸಿಕೊಂಡರಾಯಿತು ಎಂದು ಯೋಚಿಸಿ, ಈ ರೀತಿ ಮಾಡಿದ.

ಪರಶುರಾಮನ ಕೆಲಸಕ್ಕೆ ಮೆಚ್ಚಿದ ಜಮದಗ್ನಿ ನಿನಗೇನು ವರ ಬೇಕು ಕೇಳು ಎಂದರು. ಆಗ ಪರಶುರಾಮ, ನನಗೆ ನನ್ನ ತಾಯಿ ಮತ್ತು ನನ್ನ ನಾಲ್ವರು ಸಹೋದರರು ಮತ್ತೆ ಬದುಕಿ ಬರಬೇಕು ಎಂದು ಕೇಳಿದ. ಅಲ್ಲದೇ, ಈಗ ಇಲ್ಲಿ ನಡೆದ ಘಟನೆಯ ಬಗ್ಗೆ ಅವರಿಗೆ ನೆನಪಿರಬಾರದು. ಮತ್ತು ನಾನು ಎಂದಿಗೂ ಅಜೇಯನಾಗಿರಬೇಕು ಎಂದು ಬೇಡಿದ. ಇದಕ್ಕೆ ಒಪ್ಪಿದ ಋಷಿಗಳು ಪರಶುರಾಮ ಕೇಳಿದ ವರ ನೀಡಿದರು. ಪರಶುರಾಮನ ತಾಯಿ ರೇಣುಕಾದೇವಿ, ಸಹೋದರರೆಲ್ಲ ಮರಳಿ ಸಿಕ್ಕರು.

- Advertisement -

Latest Posts

Don't Miss