Monday, October 6, 2025

Latest Posts

ತೇಗು ಯಾಕೆ ಬರುತ್ತದೆ..? ತೇಗು ಬರದಿದ್ದಲ್ಲಿ ಏನಾಗುತ್ತದೆ..?

- Advertisement -

Health Tips: ನಾವು ಹೊಟ್ಟೆ ತುಂಬ ತಿಂದಾಗ ಅಥವಾ ನಮಗೆ ಹೊಟ್ಟೆ ಜೋರಾಗಿ ಹಸಿವಾದಾಗ ತೇಗು ಬರುತ್ತದೆ. ಅಂದ್ರೆ ದೇಹದಲ್ಲಿರುವ ಗ್ಯಾಸ್‌ ತೇಗು ಬರುವ ಮೂಲಕ ಹೊರಗೆ ಹೋಗುತ್ತದೆ. ಹಾಗಾದ್ರೆ ತೇಗು ಯಾಕೆ ಬರುತ್ತದೆ..? ತೇಗು ಬರದಿದ್ದಲ್ಲಿ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಪುಟ್ಟ ಮಕ್ಕಳಿಗೆ ತಾಯಿ ಹಾಲು ಕುಡಿಸಿದ ಬಳಿಕ, ಬೆನ್ನು ತಿಕ್ಕಿ ತೇಗು ಬರುವಂತೆ ಮಾಡುತ್ತಾರೆ. ಇಲ್ಲವಾದಲ್ಲಿ, ಮಗು ತಿಂದ ಆಹಾರವನ್ನು ವಾಂತಿ ಮಾಡುವ ಸಂಭವವಿರುತ್ತದೆ. ಏಕೆಂದರೆ ನಾವು ಆಹಾರ ಸೇವಿಸಿದಾಗ, ಆ ಆಹಾರದೊಂದಿಗೆ ಗಾಳಿ ಕೂಡ ನಮ್ಮ ದೇಹ ಸೇರುತ್ತದೆ.

ದೇಹದೊಳಗೆ ಹೋದ ಗಾಳಿ, ಹೊಟ್ಟೆ ತುಂಬಿದ ಬಳಿಕ ಹೊರಗೆ ಬರಬೇಕು. ಹಾಗಾಗಿ ತೇಗು ಬರುತ್ತದೆ. ಇನ್ನು ವೈದ್ಯರು ನಾವು ಆಹಾರವನ್ನು ಸರಿಯಾಗಿ ಅಗಿದು ನುಂಗಬೇಕೆ ಹೊರತು. ಗಬಗಬ ಎಂದು ತಿನ್ನಬಾರದು ಅಂತಾ ಹೇಳುತ್ತಾರೆ. ಏಕೆಂದರೆ, ಗಬ ಗಬ ಎಂದು ತಿನ್ನುವಾಗ, ಹೆಚ್ಚು ಗಾಳಿ ನಮ್ಮ ಜಠರ ಸೇರಿಕೊಳ್ಳುತ್ತದೆ. ಅದೇ ತೇಗಾಗಿ ಮಾರ್ಪಾಡಾಗುತ್ತದೆ. ತೇಗು ಬರುವುದು ಉತ್ತಮ. ಆದರೆ ಬೇಗ ಬೇಗ ತಿಂದಾಗ, ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇನ್ನು ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss