ಕೆಲವರು ಪ್ರತಿದಿನ ದೇವರಿಗೆ ಅನ್ನವನ್ನ ಅರ್ಪಿಸಿದ ನಂತರವೇ ಊಟ ಮಾಡುವುದು. ಇನ್ನು ಕೆಲವರು ಊಟಕ್ಕೆ ಕುಳಿತಾಗ, ಮೊದಲು ದೇವರನ್ನು ನೆನಪಿಸಿಕೊಂಡು, ನಂತರ ಊಟ ಮಾಡುತ್ತಾರೆ. ಕೆಲವರು ಊಟ ಮಾಡುವುದಕ್ಕೂ ಮುನ್ನ ಕೃಷ್ಣಾರ್ಪಣಮಸ್ತು, ಶಿವಾರ್ಪಣ ಮಸ್ತು ಎಂದು ಹೇಳಿ ಊಟ ಮಾಡುವುದುಂಟು. ಹಾಗಾದ್ರೆ ಇದಕ್ಕೆ ಕಾರಣವೇನು..? ಯಾಕೆ ನಾವು ಊಟಕ್ಕೂ ಮುನ್ನ ದೇವರಿಗೆ ಅನ್ನವನ್ನ ನೇವೈದ್ಯ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಈ ರೀತಿ ಮಾಡುವುದರಿಂದ ನಿಮ್ಮ ನಾಶ ನೀವೇ ಮಾಡಿಕೊಳ್ಳುತ್ತೀರಿ..
ಭಗವದ್ಗೀತೆಯ ಪ್ರಕಾರ, ಅನ್ನವನ್ನು ದೇವರಿಗೆ ನೈವೇದ್ಯ ಮಾಡಿ ತಿನ್ನುವುದು ಪುಣ್ಯ ಕಾರ್ಯವಾಗಿದೆ. ಹಾಗಾಗಿಯೇ ಕೆಲವರು ಅನ್ನವನ್ನ ದೇವರಿಗೆ ನೈವೇದ್ಯ ಮಾಡಿ, ಗೋವಿಗೆ, ನಾಯಿಗೆ, ಹಕ್ಕಿಗಳಿಗೆ ನೀಡಿ, ನಂತರ ತಾವು ಉಣ್ಣುತ್ತಾರೆ. ಊಟಕ್ಕೂ ಮುನ್ನ ದೇವರಿಗೆ ನೆನಪಿಸಿಕೊಳ್ಳುವುದರಿಂದ, ದೇವರಿಗೆ ಧನ್ಯವಾದ ಹೇಳಿದಂತಾಗುತ್ತದೆ. ಅಲ್ಲದೇ, ನಮ್ಮ ಊಟದಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇದ್ದರೆ ಅದು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಊಟಕ್ಕೂ ಮುನ್ನ ದೇವರಿಗೆ ನೈವೇದ್ಯ ಮಾಡಬೇಕು.
ಯಾವ ಹೋಮದಿಂದ ಯಾವ ಫಲಿತಾಂಶ ಸಿಗುತ್ತದೆ ಗೊತ್ತೇ..?
ನೈವೇದ್ಯವಾದ ಆಹಾರ ಶುದ್ಧ, ಆರೋಗ್ಯಕರ ಆಹಾರವಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಹೊಟ್ಟೆ ತುಂಬ ಅನ್ನ ಉಣ್ಣುವುದಕ್ಕೂ ದೇವರ ದಯೆ ಇರಬೇಕು. ಬರೀ ದುಡ್ಡಿದ್ದರೆ, ನಾನೇನು ಬೇಕಾದರೂ ಕೊಂಡುಕೊಳ್ಳಬಲ್ಲೆ ಎಂಬ ಅಹಂಕಾರವಿರುವವರಿಗೆ, ಜೇಬಲ್ಲಿ ರಾಶಿ ರಾಶಿ ದುಡ್ಡಿದ್ದರೂ, ಒಂದಗಳು ಅನ್ನ ಸಿಗದ ಉದಾಹರಣೆಗಳಿದೆ. ಹಾಗಾಗಿ ನಮಗೆ ಹೊಟ್ಟೆ ತುಂಬ ಅನ್ನ ಸಿಗುತ್ತಿದ್ದರೆ, ಆ ದೇವರಿಗೆ ಧನ್ಯಾವದ ಸಲ್ಲಿಸಿಯೇ ನಾವು ಅನ್ನ ಸೇವಿಸಬೇಕು. ಹಾಗಾಗಿ ಊಟಕ್ಕೂ ಮುನ್ನ ದೇವರಿಗೆ ಧನ್ಯವಾದ ಹೇಳೋದನ್ನ ಮರೀಬೇಡಿ.