Health Tips: ನಮ್ಮ ದೇಹ ಆರೋಗ್ಯವಾಗಿರಲು, ನಾವು ಗಟ್ಟಿಮುಟ್ಟಾಗಿರಲು ಬೇಕಾಗುವ ಅಂಶವೇ ಮೂಳೆ. ನಮ್ಮ ದೇಹದಲ್ಲಿರುವ ಎಲುಬುಗಳು ಗಟ್ಟಿಯಾಗಿದ್ದರೆ, ನಾವು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತೇವೆ. ಆದರೆ ಎಲುಬಿನಲ್ಲಾಗುವ ಸಮಸ್ಯೆಗಳನ್ನು ಸರಿಯಾಗಿ ವಿವರಿಸಲು ಆಗುವುದಿಲ್ಲ. ಹೀಗೇಕೆ ಆಗುತ್ತದೆ ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದಲ್ಲಿ ವೀಕ್‌ನೆಸ್ ಆದಾಗ, ಅಶಕ್ತತೆ ಉಂಟಾಗಿ, ಎಲುಬುಗಳಲ್ಲಿ ನೋವುಂಟಾಗುತ್ತದೆ. ಆದರೆ ಅದು ಎಲುಬು ನೋವು ಅಂತಾ ನಮಗೆ ಗೊತ್ತಾಗುವುದಿಲ್ಲ. ಯಾವುದಾದರೂ ಕೆಲಸ ಮಾಡಿ ಬಂದು ಕೂತಾಗ, ಏಳಲು ಕೂಡ ಕಷ್ಟವಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕೈ ಕಾಲು, ಬೆನ್ನು ನೋವು ಉಂಟಾಗುತ್ತದೆ. ಇದು ಎಲುಬು ನೋವಿನ ಲಕ್ಷಣಗಳಾಗಿದೆ.
ಹೀಗೆ ಎಲುಬು ನೋವಿದ್ದಲ್ಲಿ, ಚಿಕ್ಕ ಪುಟ್ಟ ಕೆಲಸ ಮಾಡಿದರೂ ಸುಸ್ತಾಗುತ್ತದೆ. ಒಂದು ವಸ್ತುವನ್ನು ಎತ್ತಿಟ್ಟಲ್ಲಿ ಕೂಡ, ಕೈ ಕಾಲು ನೋವು ಬರುತ್ತದೆ. ಅಶಕ್ತತೆ ಕಾಡುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ಈ ವೀಡಿಯೋ ನೋಡಿ.