Friday, June 20, 2025

Latest Posts

ಪತಿ-ಪತ್ನಿ ಜಗಳವಾಡುವಾಗ ಮಧ್ಯೆ ಹೋಗಬಾರದು ಅಂತಾ ಹೇಳುವುದ್ಯಾಕೆ..?

- Advertisement -

Spiritual: ಪತಿ-ಪತ್ನಿ ಅಂದಮೇಲೆ ಜಗಳ ಮಾಮೂಲಿಯಾಗಿರುತ್ತದೆ. ಯಾಕಂದ್ರೆ ಪತಿ-ಪತ್ನಿಯಾದವರು ಜಗಳವೇ ಆಡಿಲ್ಲವೆಂದಲ್ಲಿ, ಆ ಸಂಸಾರ ವ್ಯರ್ಥ. ಅಲ್ಲಿ ನಿಜವಾದ ಪ್ರೀತಿ ಇಲ್ಲವೆಂದರ್ಥ. ಹಾಗಾಗಿ ಪತಿ- ಪತ್ನಿ ಅಂದ ಮೇಲೆ ಜಗಳ, ಪ್ರೀತಿ, ಕಾಳಜಿ, ಎಲ್ಲವೂ ಸಹಜ. ಆದರೆ ಪತಿ-ಪತ್ನಿ ಜಗಳವಾಡುವ ವೇಳೆ, ಮತ್ತು ಕೆಲ ಕೆಲಸಗಳನ್ನು ಮಾಡುವ ವೇಳೆ, ಯಾರೂ ಮಧ್ಯ ಹೋಗಬಾರದಂತೆ. ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಪತಿ- ಪತ್ನಿ ಜಗಳವಾಡುವಾಗ, ಮಾತನಾಡುವಾಗ, ಏಕಾಂತದಲ್ಲಿರುವಾಗ, ಎಲ್ಲಾದರೂ ತಿರುಗಾಡಲು ಹೋಗುವಾಗ, ಈ ಸಂದರ್ಭದಲ್ಲೆಲ್ಲಾ, ಅವರ ಮಧ್ಯೆ ಯಾರೂ ಹೋಗಬಾರದು. ಮೊದಲನೇಯದಾಗಿ ಪತಿ-ಪತ್ನಿ ಜಗಳವಾಡುವಾಗ, ಪತಿಯ ತಂದೆ-ತಾಯಿ ಪತಿಯನ್ನು ಬೆಂಬಲಿಸಿ, ಹೋಗಬಾರದು. ಇದರಿಂದ ಸೊಸೆಗೆ ತನ್ನ ಅತ್ತೆ- ಮಾವನ ಮೇಲೆ ಇಟ್ಟಿರುವ, ಗೌರವ ಕಡಿಮೆಯಾಗುತ್ತದೆ. ಹಾಗಾಗಿ ನೀವು ಪತಿ-ಪತ್ನಿ ಮಧ್ಯೆ ಜಗಳ ನಿಲ್ಲಿಸಲು ಹೋದರೂ ಕೂಡ, ಇಬ್ಬರಿಗೂ ಸಮಾಧಾನ ಮಾಡಿ, ಯಾರ ಪರವೂ ವಹಿಸದೇ, ಜಗಳ ನಿಲ್ಲಿಸಲಬೇಕು. ಇಲ್ಲವಾದಲ್ಲಿ ಜಗಳ ನಡೆಯಲಿ ಎಂದು ಸುಮ್ಮನಿರಬೇಕು.

ಎರಡನೇಯದಾಗಿ ಪತಿ-ಪತ್ನಿ ಇಬ್ಬರೂ ಏಕಾಂತವಾಗಿರುವಾಗ, ಅಡ್ಡಿಪಡಿಸಬಾರದು. ಕೆಲವರು ಪತಿ-ಪತ್ನಿ ಇಬ್ಬರೂ ಏಕಾಂತದಲ್ಲಿರುವಾಗ, ತಾವೂ ಅವರೊಟ್ಚಿಗೆ ಹೋಗಿ, ಮಾತನಾಡುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಇದರಿಂದ ಅವರಿಗೆ ನಿಮ್ಮ ಮೇಲಿರುವ ಪ್ರೀತಿ, ಕಾಳಜಿ ಅಥವಾ ಸ್ನೇಹ ಕಡಿಮೆಯಾಗುತ್ತದೆ. ಹೀಗೆ ಮಾಡುವುದು ದಡ್ಡರ ಲಕ್ಷಣ. ಬುದ್ಧಿವಂತರಾದವರು ಯಾರೂ ಪತಿ- ಪತ್ನಿ ಏಕಾಂತದಲ್ಲಿರುವಾಗ, ಮಧ್ಯೆ ಹೋಗುವುದಿಲ್ಲ.

ಮೂರನೇಯದಾಗಿ ತಮ್ಮ ಜೀವನಕ್ಕೆ ಅಥವಾ ಕೆಲಸಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಪತಿ-ಪತ್ನಿ ಚರ್ಚಿಸುತ್ತಿರುವಾಗ, ನನಗೂ ಈ ವಿಷಯ ಗೊತ್ತು ಎಂದು, ಅಥವಾ ನಾನು ಈ ಘಟನೆ ನಡೆಯುವಾಗ ಎದುರಿಗೆ ಇದ್ದೆ. ಅಲ್ಲಿ ಹೀಗಾಗಿತ್ತು ಎಂದು ಸಮಜಾಯಿಷಿ ಕೊಡಲು ಹೋಗಬಾರದು. ಪತಿ-ಪತ್ನಿ ಯಾವುದೇ ವಿಷಯದ ಬಗ್ಗೆ ಚರ್ಚಿಸುವಾಗ, ಅವರನ್ನು ಚರ್ಚಿಸಲು ಬಿಡಬೇಕು. ಮಧ್ಯೆ ಮಾತನಾಡಬಾರದು.

ನಾಲ್ಕನೇಯದಾಗಿ ಪತಿ-ಪತ್ನಿ ಇಬ್ಬರೂ ತಿರುಗಾಡಲು ಹೋಗಬೇಕಾದರೆ, ನಾನೂ ಬರುತ್ತೇನೆ ಎಂದು ಅವರೊಂದಿಗೆ ಹೋಗಬಾರದು. ಕೆಲ ಮಕ್ಕಳು ಹೀಗೆ ಮಾಡುತ್ತಾರೆ. ಅವರನ್ನು ಹಿರಿಯರಾದವರು ತಡೆಯಬೇಕು. ಪತಿ-ಪತ್ನಿ ಮದುವೆಯಾಗಿ ಎಷ್ಟೇ ವರ್ಷ ಕಳೆದರೂ, ಅವರಿಗೆ ಕೊಂಚ ಸಮಯ ಏಕಾಂತವಾಗಿ ಕಳೆಯಬೇಕು. ತಿರುಗಾಡಬೇಕು, ಲೈಫ್ ಎಂಜಾಯ್ ಮಾಡಬೇಕು ಎನ್ನುವ ಮನಸ್ಸಿರುತ್ತದೆ. ಹಾಗಾಗಿ ಪತಿ-ಪತ್ನಿ ತಿರುಗಾಡಲು ಹೋಗುವಾಗ, ಅವರ ಮಧ್ಯೆ ಹೋಗಬೇಡಿ.

ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..

ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

- Advertisement -

Latest Posts

Don't Miss