Spiritual Story: ರಾಮಾಯಣದಲ್ಲಿ ಬರುವ ಕುಂಭಕರಣನ ಪಾತ್ರ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಈತ 6 ತಿಂಗಳು ನಿದ್ರಿಸುತ್ತಿದ್ದ. ಬಳಿಕ ಎದ್ದು 6 ತಿಂಗಳು ತಿನ್ನುತ್ತಿದ್ದ. ತಿಂದ ಬಳಿಕ ಮತ್ತೆ ಮಲಗುತ್ತಿದ್ದ. ಹಾಗಾಗಿಯೇ ಇಂದಿನ ತಾಯಂದಿರು ತಮ್ಮ ಮಕ್ಕಳನ್ನು ಕುಂಭಕರಣನ ರೀತಿ ಯಾಕೆ ನಿದ್ರಿಸುತ್ತೀ ಎಂದು ಬಯ್ಯುತ್ತಾರೆ. ಹಾಗಾದ್ರೆ ಯಾಕೆ ಕುಂಭಕರಣ ಹೀಗೆ ಮಾಡುತ್ತಿದ್ದನೆಂದು ತಿಳಿಯೋಣ ಬನ್ನಿ..
ಕುಂಭಕರಣ 6 ತಿಂಗಳು ಮಲಗಲು ಮತ್ತು 6 ತಿಂಗಳು ತಿನ್ನಲು ಕಾರಣವೇನೆಂದರೆ ಇವನಿಗಿದ್ದ ಶಾಪ. ವಾಲ್ಮೀಕಿ ರಾಮಾಯಣದ ಯುದ್ಧಕಾಂಡದ ಅನುಸಾರ, ರಾವಣನ ದ್ವಿತೀಯ ಸಹೋದರ ಕುಂಭಕರಣ, ಹುಟ್ಟುತ್ತಲೇ ಲೋಕದಲ್ಲಿ ಸದ್ದುಗದ್ದಲವೆಬ್ಬಿಸಿಬಿಟ್ಟಿದ್ದ. ಪ್ರತಿದಿನ ಸಾವಿರಕ್ಕೂ ಹೆಚ್ಚು ಜೀವ ಜಂತುಗಳನ್ನು ತಿನ್ನಲು ಶುರು ಮಾಡಿದ. ಈ ಮೂಲಕ ತನ್ನ ದೇಹದಲ್ಲಿದ್ದ ಶಕ್ತಿಯ ದುರುಪಯೋಗ ಮಾಡಿಕೊಂಡಿದ್ದ.
ಆಗ ಬ್ರಹ್ಮ ದೇವರು ಕುಂಭಕರಣನಿಗೆ ನೀನು ಸದಾ ನಿದ್ರಿಸುವಂತಾಗಲಿ ಎಂದು ಶಾಪವಿಟ್ಟರು. ವಿಷಯ ತಿಳಿದ ರಾವಣ, ಬ್ರಹ್ಮನಿಗಾಗಿ ತಪಸ್ಸು ಮಾಡಿ, ಬ್ರಹ್ಮ ದೇವರನ್ನು ಒಲಿಸಿಕೊಂಡು, ತನ್ನ ತಮ್ಮನಿಗಿರುವ ಶಾಪವನ್ನು ಕಡಿಮೆ ಮಾಡಿ ಎಂದು ಬೇಡಿಕೊಂಡ. ಆಗ ಬ್ರಹ್ಮ ದೇವರು 6 ತಿಂಗಳವರೆಗೂ ಕುಂಭಕರಣ ಸತತವಾಗಿ ನಿದ್ರಿಸಲಿ ಎಂದು ಶಾಪ ಕಡಿಮೆ ಮಾಡಿದರು. ಈ ಕಾರಣಕ್ಕೆ ಕುಂಭಕರ್ಣ 6 ತಿಂಗಳು ನಿದ್ರಿಸುತ್ತಿದ್ದ ಮತ್ತು 6 ತಿಂಗಳು ಸತತವಾಗಿ ಆಹಾರ ಸೇವಿಸುತ್ತಿದ್ದ ಹೇಳಲಾಗಿದೆ.
ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು