Tuesday, October 22, 2024

Latest Posts

ರೋಜಾ ಮುಗಿದ ತಕ್ಷಣ ಮುಸ್ಲೀಂಮರು ಖರ್ಜೂರ ತಿನ್ನೋದ್ಯಾಕೆ..?

- Advertisement -

ಮೊನ್ನೆ ತಾನೇ ರೋಜಾ ಮುಗಿಸಿ, ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನ ಆಚರಿಸಿದ್ರು. ಹೀಗೆ ರೋಜಾ ಆಚರಿಸುವಾಗ ಅವರು ಉಪವಾಸ ಬಿಟ್ಟ ತಕ್ಷಣ ಖರ್ಜೂರವನ್ನು ಸೇವಿಸುತ್ತಾರೆ. ಹಾಗಾದ್ರೆ ಅವರು ರೋಜಾ ಬಿಟ್ಟ ತಕ್ಷಣ ಮೊದಲು ಖರ್ಜೂರವನ್ನೇ ಸೇವಿಸೋದ್ಯಾಕೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..

ರಂಜಾನ್ ಹಬ್ಬದ ರೋಜಾ ಶುರುವಾದ್ರೆ ಸಾಕು, ಮಾರ್ಕೇಟ್‌ನಲ್ಲಿ ತರಹೇವಾರಿ ಡ್ರೈಫ್ರೂಟ್ಸ್ ಜೊತೆಗೆ, ತರಹೇವಾರಿ ಖರ್ಜೂರ ಮಾರಾಟ ಮಾಡಲಾಗುತ್ತದೆ. ಯಾಕಂದ್ರೆ ರೋಜಾ ಬಿಟ್ಟ ತಕ್ಷಣ ಮುಸ್ಲೀಂ ಬಾಂಧವರು ಖರ್ಜೂರವನ್ನು ಸೇವಿಸುತ್ತಾರೆ. ಇದಕ್ಕೆ ಕಾರಣ ಏನಂದ್ರೆ ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ಉಪವಾಸ ಮಾಡಿ, ನಮ್ಮ ದೇಹದಲ್ಲಿನ ಶಕ್ತಿ ಕುಂದಿ ಹೋಗಿರುತ್ತದೆ. ಹಾಗಾಗಿ ಆ ಎನರ್ಜಿಯನ್ನು ಭರಿಸಲು ಖರ್ಜೂರ ಸಹಾಯ ಮಾಡುತ್ತದೆ.

ಉಪವಾಸ ಬಿಟ್ಟ ತಕ್ಷಣ, ಅನ್ನ, ಚಪಾತಿ, ಅಥವಾ ಯಾವುದಾದರೂ ಸ್ನ್ಯಾಕ್ಸ್ ತಿಂದ್ರೆ, ನಿಮಗೆ ಗ್ಯಾಸ್ಟ್ರಿಕ್ ಪ್ರಾಬ್ಲ್ಂ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅಂಥ ತೊಂದರೆಯಾಗಬಾರದು, ಕಳೆದುಕೊಂಡ ಶಕ್ತಿ ಮರಳಿ ಬರಲಿ ಎಂಬ ಕಾರಣಕ್ಕೆ ರೋಜಾ ಬಿಟ್ಟ ತಕ್ಷಣ ಮುಸ್ಲೀಂಮರು ಮೊದಲು ಖರ್ಜೂರವನ್ನ ಸೇವಿಸುತ್ತಾರೆ. ಖರ್ಜೂರ ತಿಂದು, ನೀರು ಕುಡಿದ ಬಳಿಕ, ಬೇರೆ ಆಹಾರವನ್ನು ಸೇವಿಸಲಾಗುತ್ತದೆ.

- Advertisement -

Latest Posts

Don't Miss