Tuesday, October 7, 2025

Latest Posts

ಕೂದಲಿಗೆ ಮೊಸರು ಹಚ್ಚಬಾರದು ಯಾಕೆ..?

- Advertisement -

Health Tips: ಕೂದಲು ಉದುರಲು ಶುರುವಾದಾಗ, ಅಥವಾ ಕೂದಲಿನ ಯಾವುದೇ ಸಮಸ್ಯೆ ಶುರುವಾದಾಗ, ಕೂದಲಿಗೆ ಮನೆಯಲ್ಲೇ ಕೆಲವು ಮದ್ದು ತಯಾರಿಸಿ ಬಳಸಲಾಗುತ್ತದೆ. ಈ ವೇಳೆ ಕೂದಲಿಗೆ ಮೊಸರು ಹಚ್ಚಲಾಗುತ್ತದೆ. ಆದರೆ ವೈದ್ಯರ ಪ್ರಕಾರ, ಕೂದಲಿಗೆ ಮೊಸರು ಹಚ್ಚಬಾರದು. ಹಾಗಾದ್ರೆ ಯಾಕೆ ಕೂದಲಿಗೆ ಮೊಸರು ಹಚ್ಚಬಾರದು ಅಂತಾ ತಿಳಿಯೋಣ ಬನ್ನಿ..

ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ನಾವು ತಲೆಗೂದಲ ಆರೈಕೆ ಮಾಡುವಾಗ, ತಲೆಗೆ ಏನನ್ನು ಹಚ್ಚುತ್ತೇವೆ ಎನ್ನುವುದರ ಜೊತೆಗೆ, ಏನು ಆಹಾರ ತೆಗೆದುಕೊಳ್ಳುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ಹಣ್ಣು, ಹಸಿ ತರಕಾರಿ, ಜ್ಯೂಸ್, ಎಳನೀರು, ಮೊಳಕೆ ಕಾಳು, ಡ್ರೈಫ್ರೂಟ್ಸ್ ಹೀಗೆ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಚೆನ್ನಾಗಿ ನೀರು ಕುಡಿಯಬೇಕು.

ವಿಟಾಮಿನ್ ಸಿ ಇರುವ ಹಣ್ಣು, ತರಕಾರಿ ಸೇವನೆ ಮಾಡುವುದರಿಂದ ತ್ವಚೆಯ ಆರೋಗ್ಯ ಮತ್ತು ಕೂದಲ ಸೌಂದರ್ಯ ವೃದ್ಧಿಸುತ್ತದೆ. ಆ್ಯಪಲ್, ಆರೇಂಜ್, ನಟ್ಸ್, ನೆನೆಸಿ, ಮೊಳಕೆ ಬರಿಸಿದ ಕಾಳು ಸೇರಿ ಪೋಷಕಾಂಶ ಯುಕ್ತವಾದ ಆಹಾರ ಸೇವನೆ ಮಾಡಬೇಕು. ಇನ್ನು ಡ್ಯಾಂಡ್ರಫ್ ಇರುವವರು ತಲೆಗೂದಲಿಗೆ ಮೊಸರು ಹಚ್ಚಬಾರದು. ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿಯಿಡೀ ಇಡಬಾರದು. ಎಣ್ಣೆ ಮಸಾಜ್ ಮಾಡಿದ ಬಳಿಕ, ತಲೆಸ್ನಾನ ಮಾಡಬೇಕು.

ಇನ್ನು ವೈದ್ಯರ ಬಳಿ ನೀವು ಹೇರ್‌ಫಾಲ್ ಪ್ರಾಬ್ಲಂಗಾಗಿ ಸಲಹೆ ಕೇಳಿದಾಗ, ಅವರು ಸೇರಮ್, ಶ್ಯಾಂಪೂ ಕೂಡ ಸಜೆಸ್ಟ್ ಮಾಡುತ್ತಾರೆ. ಇನ್ನು ಡ್ಯಾಂಡ್ರಫ್ ಇರುವವರು ಮೊಸರನ್ನು ಏಕೆ ಕೂದಲಿಗೆ ಹಚ್ಚಬಾರದು ಅಂದ್ರೆ, ಇದು ಡ್ಯಾಂಡ್ರಫ್ ಹೆಚ್ಚು ಮಾಡುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss