Healthy tips: ಹಲವರು ಪ್ರಯಾಣ ಮಾಡುವಾಗ, ನೀರಿನ ಬಾಟಲಿಯಲ್ಲಿ ನೀರು ಹಿಡಿದುಕೊಳ್ಳಲು ಉದಾಸೀನ ಮಾಡುತ್ತಾರೆ. ಹೋಗುವಾಗ, ಯಾವುದಾದರೂ ಅಂಗಡಿಯಲ್ಲಿ ನೀರನ್ನು ಖರೀದಿ ಮಾಡಿದರಾಯಿತು. ಬರೀ 20 ರೂಪಾಯಿಗೆ ನೀರು ಸಿಗುತ್ತದೆ ಎಂದು ನಿರ್ಲಕ್ಷ್ಯ ಮಾಡಿ ಹೊರಡುತ್ತಾರೆ. ಆದರೆ ನೀವು 20 ರೂಪಾಯಿ ಕೊಟ್ಟು ಬರೀ ನೀರನ್ನು ಖರೀದಿಸುವುದಿಲ್ಲ. ಬದಲಾಗಿ, ರೋಗವನ್ನು ಖರೀದಿಸುತ್ತೀರಿ. ಈ ಮಾತಿನ ಅರ್ಥವೇನು ಅಂತಾ ತಿಳಿಯೋಣ ಬನ್ನಿ..
ಈ ಮಾತಿನ ಅರ್ಥವೇನೆಂದರೆ, ನಾವು ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರನ್ನು ಖರೀದಿಸಿ ಕುಡಿದಲ್ಲಿ, ಅದರಿಂದ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಬಾಟಲಿಯ ನೀರಿಗಿಂತ, ಮನೆಯಿಂದಲೇ ಸ್ಟೀಲ್ ಅಥವಾ ಕಾಪರ್ ಬಾಟಲಿಯಲ್ಲಿ, ಕಾಯಿಸಿ, ತಣಿಸಿದ ನೀರು ತೆಗೆದುಕೊಂಡು ಹೋಗುವುದು ತುಂಬಾ ಉತ್ತಮ.
ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ತುಂಬಾ ದಿನದ ಹಿಂದೆ ತುಂಬಿಸಿಟ್ಟು, ಪ್ಯಾಕ್ ಮಾಡಿ ಇಡಲಾಗುತ್ತದೆ. ಹಾಗಾಗಿ ಆ ನೀರು ಫ್ರೆಶ್ ಆಗಿ ಇರುವುದಿಲ್ಲ. ಮತ್ತು ಆ ನೀರಿನಲ್ಲಿ ಕಣ್ಣಿಗೆ ಕಾಣದ ಮಲೀನವಿರುತ್ತದೆ. ಅಂಥ ನೀರನ್ನು ಕುಡಿದರೆ, ರೋಗ ಬರದೇ ಇನ್ನೇನಾಗುತ್ತದೆ..? ಇಂಥ ನೀರನ್ನು ಸತ್ತ ನೀರು ಎನ್ನುತ್ತಾರೆ. ಏಕೆಂದರೆ, ಅದರಲ್ಲಿ ಆರೋಗ್ಯಕ್ಕೆ ಬೇಕಾದ ಯಾವುದೇ ಉತ್ತಮ ಸತ್ವವಿರುವುದಿಲ್ಲ.
ಇಷ್ಟೇ ಅಲ್ಲದೇ, ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಮೈಕ್ರೋ ಫೈಬರ್ ನೀರಿನಲ್ಲಿ ಸೇರಿಕೊಳ್ಳುತ್ತದೆ. ಆಗ ಆ ನೀರು ವಿಷಕಾರಿಯಾಗುತ್ತದೆ. ಆ ನೀರು ಕುಡಿದಾಗ, ನಮ್ಮ ದೇಹಕ್ಕೆ ಮೈಕ್ರೋ ಪ್ಲಾಸ್ಟಿಕ್‌ಗಳು ಕೂಡ ಸೇರಿಕೊಳ್ಳುತ್ತದೆ. ಇದೇ ಮನುಷ್ಯನಿಗೆ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯಬಾರದು ಅಂತಾ ಹೇಳುವುದು.




