Thursday, December 12, 2024

Latest Posts

ಮಕ್ಕಳಿಗೆ ಐಸ್‌ಕ್ರೀಮ್ ಕೊಡೋದು ಬೇಡ ಯಾಕೆ?

- Advertisement -

Health Tips: ಪುಟ್ಟ ಮಕ್ಕಳಿಗೆ ಆರೋಗ್ಯಕ್ಕೆ ಯಾವನುದು ಉತ್ತಮವಲ್ಲವೋ, ಅದೇ ಬೇಕಾಗಿರುತ್ತದೆ. ಸಿಹಿ ತಿಂಡಿ, ಚಾಕೋಲೇಟ್ಸ್, ಕೇಕ್, ಕುಕೀಸ್, ಐಸ್‌ಕ್ರೀಮ್ ಇಂಥದ್ದೆಲ್ಲ ತಿಂದರೆ, ಮಕ್ಕಳ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಆದರೆ ಮಕ್ಕಳಿಗೆ ಅದೇ ತಿಂಡಿ ಬೇಕು. ಆದರೆ ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಐಸ್‌ಕ್ರೀಮ್ ಕೊಡಬಾರದು. ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರಾದ ಡಾ.ಸುರೇಂದ್ರ ಈ ಬಗ್ಗೆ ಮಾತನಾಡಿದ್ದು, ಮಕ್ಕಳಿಗೆ ತಣ್ಣಗಿನ ಪಾನೀಯ, ಐಸ್‌ಕ್ರೀಮ್ ಕೊಡುವುದನ್ನು ಕಡಿಮೆ ಮಾಡಬೇಕು. ಅದರಲ್ಲೂ ಚಳಿಗಾಲದಲ್ಲಿ ಇವುಗಳನ್ನು ನೀಡಲೇಬಾರದು. ಮಕ್ಕಳಿಗೆ ಬಿಸಿಬಿಸಿಯಾದ ಆಹಾರ, ಉಗುರು ಬೆಚ್ಚಗಿನ ನೀರು, ಹಾಲು ಕೊಡಬೇಕು. ಇದರಿಂದ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳಿಗೆ ತಣ್ಣಗಿನ ಆಹಾರ ಕೊಟ್ಟಾಗ, ಅವರಿಗೆ ಜ್ವರ, ನೆಗಡಿ, ಕೆಮ್ಮು ಬರುತ್ತದೆ. ಅವರ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಮಕ್ಕಳಿಗೆ ಐಸ್‌ಕ್ರೀಮ್, ತಂಪು ಪಾನೀಯ ಕೊಡಬಾರದು.

ಏಕೆಂದರೆ, ಫ್ರಿಜ್‌ನಲ್ಲಿ ಇರಿಸಿದ ತಿಂಡಿ, ಪಾನೀಯಗಳಲ್ಲಿ ಕೆಮಿಕಲ್, ಬ್ಯಾಕ್ಟಿರಿಯಾ ಸೇರಿ, ಅವುಗಳ ಸೇವನೆಯಿಂದ ಫುಡ್ ಪಾಯ್ಸನ್ ಆಗುತ್ತದೆ. ಹಾಗಾಗಿ ಮಕ್ಕಳಿಗೆ ಐಸ್‌ಕ್ರೀಮ್, ತಂಪು ಆಹಾರ, ತಂಪು ಪಾನೀಯ ಕೊಡಬಾರದು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss