Spiritual Stories:ನೀವು ಹೆಚ್ಚಾಗಿ ಸೆಲೆಬ್ರಿಟಿಗಳನ್ನು ದುಃಖದ ಸಮಯದಲ್ಲಿ ಬಿಳಿ ಬಟ್ಟೆಯಲ್ಲಿ ನೋಡಿರುತ್ತೀರಿ. ಅವರು ಸಾವಿನ ಮನೆಗೆ ಹೋಗುವಾಗ, ಬಿಳಿ ಬಟ್ಟೆಯಲ್ಲೇ ಹೋಗುತ್ತಾರೆ. ಹಾಗಾದ್ರೆ ಯಾಕೆ ಸ್ಮಶಾನಕ್ಕೆ ಅಥವಾ ಸಾವಿನ ಮನೆಗೆ ಹೋಗುವಾಗ ಬಿಳಿ ಬಟ್ಟೆಯನ್ನೇ ಧರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನುಷ್ಯ ಸಾವಾದ 13 ದಿನಗಳವರೆಗೆ ಆತ್ಮದ ರೂಪದಲ್ಲಿ ತನ್ನವರೊಂದಿಗೆ ಇರುತ್ತಾನೆ ಅನ್ನೋ ನಂಬಿಕೆ ಇದೆ. ಹಾಗಾಗಿ 13 ದಿನಗಳ ಕಾಲ ಕಾರ್ಯ ಹಿಡಿದು, ಆಯಾ ದಿನಗಳಲ್ಲಿ ಹಲವು ಪದ್ಧತಿಗಳನ್ನು ಅನುಸರಿಸಿ, ಶುದ್ಧ ಕಾರ್ಯಗಳನ್ನೆಲ್ಲ ಮಾಡಿ, ಆತ್ಮಕ್ಕೆ ಶಕ್ತಿ ತುಂಬಿ ಕಳಿಸಿಕೊಡಲಾಗುತ್ತದೆ. ಹಾಗಾಗಿ ಸಾವಾದ ಕ್ಷಣದಲ್ಲಿ ಆ ಆತ್ಮ ತನ್ನವರ ಸುತ್ತಮುತ್ತಲು ತಿರುಗಾಡುತ್ತಿರುತ್ತದೆ. ದೇಹದೊಳಗೆ ಸೇರಿ, ಮತ್ತೆ ಜೀವಿಸಲು ಪ್ರಯತ್ನಿಸುತ್ತಿರುತ್ತದೆ ಅನ್ನೋ ನಂಬಿಕೆ ಇದೆ.
ಇನ್ನು ಕಪ್ಪು ಅಥವಾ ಗಾಢವಾದ ಬಣ್ಣದ ಬಟ್ಟೆ ನಕಾರಾತ್ಮಕ ಶಕ್ತಿಯನ್ನು ಸೆಳೆಯುವ ಗುಣ ಹೊಂದಿದೆ. ಹಾಗಾಗಿ ಅಮವಾಸ್ಯೆಯ ದಿನ ಕಪ್ಪು ಬಟ್ಟೆ ಧರಿಸಬಾರದು ಎಂದು ಹೇಳಲಾಗುತ್ತದೆ. ಇನ್ನು ಸಾವಿನ ಮನೆಯಲ್ಲಿ ಆತ್ಮವಿರುವ ಕಾರಣ, ಅದರ ಪ್ರಭಾವ ಬೀಳಬಾರದು ಎಂದರೆ, ನೀವು ತಿಳಿ ಅಥವಾ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸಬೇಕು.
ಇನ್ನು ಮರಣ ಹೊಂದಿದ ವ್ಯಕ್ತಿಗೆ ತುಂಬಾ ಇಷ್ಟವಾಗುವ ಬಟ್ಟೆಯನ್ನು ಎಂದಿಗೂ ದಾನ ಮಾಡುವುದಿಲ್ಲ. ಹಾಗೆ ದಾನ ತೆಗೆದುಕೊಂಡರೆ, ಆ ವ್ಯಕ್ತಿಯ ಆತ್ಮ ಚಡಪಡಿಸುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಅಂಥ ಬಟ್ಟೆಯನ್ನು ಒಂದು ವರ್ಷದ ಬಳಿಕ ದಾನ ಮಾಡಲಾಗುತ್ತದೆ. ಎಷ್ಟೋ ಕಡೆ ಮೃತರ ಇಷ್ಟದ ಬಟ್ಟೆ ದಾನ ಮಾಡಿದಾಗ, ಆ ಬಟ್ಟೆ ಹರಿದು ಹೋದ, ಸುಟ್ಟು ಹೋದ ಅಥವಾ ಅದು ಧರಿಸಲು ಯೋಗ್ಯವಾಗದ ರೀತಿ ಆಗಿದೆ. ಹಾಗಾಗಿ ಮೃತರ ಬಟ್ಟೆಯನ್ನು ಸತ್ತ ಒಂದು ವರ್ಷದ ಬಳಿಕ ದಾನ ಮಾಡಲಾಗುತ್ತದೆ.