Health Tips: ಕೆಲವರಿಗೆ ತಲೆಗೆ ಪ್ರತಿದಿನ ಎಣ್ಣೆ ಹಚ್ಚುತ್ತಾರೆ. ಏಕೆಂದರೆ, ಅವರಿಗೆ ತಲೆಗೆ ಎಣ್ಣೆ ಹಚ್ಚದಿದ್ದಲ್ಲಿ, ನನಗೆ ತಲೆನೋವು ಬರುತ್ತದೆ ಎಂಬ ಭ್ರಮೆ ಇರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ಹೆಚ್ಚು ಹೊತ್ತು ತಲೆಗೆ ಎಣ್ಣೆ ಹಚ್ಚಬಾರದು. ಅದರಲ್ಲೂ ಡ್ಯಾಂಡ್ರಫ್ ಇರುವವರು ತೆಲಗೂದಲಿಗೆ ಎಣ್ಣೆ ಹಚ್ಚಬಾರದು. ಯಾಕೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ ನೋಡಿ..
ತಲೆಗೆ ಎಣ್ಣೆ ಹಾಕುವುದಿದ್ದರೂ, ಸ್ನಾನ ಮಾಡುವ ಒಂದು ಗಂಟೆ ಮುಂಚೆ ಎಣ್ಣೆ ಮಸಾಜ್ ಮಾಡಿ, ಬಳಿಕ ತಲೆಸ್ನಾನ ಮಾಡಬೇಕು. ಅಲ್ಲದೇ, ಹೆಚ್ಚು ಹೊತ್ತು ತಲೆಯಲ್ಲಿ ಎಣ್ಣೆ ಇದ್ದರೆ ಡ್ಯಾಂಡ್ರಫ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಡ್ಯಾಂಡ್ರಫ್ ಇದ್ದವರು ಹೆಚ್ಚು ಹೊತ್ತು ತಲೆಗೆ ಎಣ್ಣೆ ಹಾಕಿದ್ರೆ, ಡ್ಯಾಂಡ್ರಫ್ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.
ಡ್ಯಾಂಡ್ರಫ್ ಹೆಚ್ಚಾದಾಗಲೇ, ತಲೆಗೂದಲು ಉದುರುವ ಸಮಸ್ಯೆ ಪ್ರಾರಂಭವಾಗುವುದು. ಹಾಗಾಗಿ ಸ್ನಾನಕ್ಕೂ ಒಂದು ಗಂಟೆ ಮುನ್ನ ಹೇರ್ ಮಸಾಜ್ ಮಾಡಬೇಕು. ಮತ್ತು ಹೆಣ್ಣು ಮಕ್ಕಳು ವಾರದಲ್ಲಿ ಮೂರು ದಿನ ತಲೆಸ್ನಾನ ಮಾಡಬೇಕು. ವೈದ್ಯರ ಸಲಹೆ ಪಡೆದು ಶ್ಯಾಂಪೂ, ಎಣ್ಣೆ, ಸೇರಮ್ ಬಳಸಿದರೆ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..