Sunday, April 6, 2025

Latest Posts

ರಾಮಕೋಟಿಯನ್ನು ಯಾಕೆ ಬರಿಯಬೇಕು..? ಇದರ ನಿಯಮಗಳೇನು..?

- Advertisement -

Spiritual News: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಬಳಿಕ, ಅಲ್ಲಿ ನಡೆಯುವ ಹೋಮ ಹವನಕ್ಕೆ ರಾಮಕೋಟಿಯನ್ನು ಹಾಕುತ್ತಾರೆ. ಅಂದರೆ, ಭಕ್ತರು ಕೋಟಿ ಬಾರಿ ಬರೆದ ರಾಮನಾಮ ಜಪದ ಪುಸ್ತಕವನ್ನು ಹೋಮಕ್ಕೆ ಹಾಕುತ್ತಾರೆ. ಹಾಗಾದರೆ ರಾಮಕೋಟಿಯನ್ನು ಯಾಕೆ ಬರೆಯಬೇಕು..? ಇದನ್ನು ಬರೆಯಲು ಇರುವ ನಿಯಮವೇನು ಅಂತಾ ತಿಳಿಯೋಣ ಬನ್ನಿ..

ಶ್ರೀರಾಮ ಜಯರಾಮ, ಜಯ ಜಯರಾಮ ಇದನ್ನೇ ಕೋಟಿ ಬಾರಿ ಬರೆಯುವುದನ್ನು ರಾಮಕೋಟಿ ಎಂದು ಕೆರಯುತ್ತಾರೆ. ರಾಮಕೋಟಿ ಬರೆಯುವ ಮುನ್ನ, ನಾವು ಮನಸ್ಸಿನಲ್ಲಿ ಕೆಲವು ಸಂಕಲ್ಪ ಮಾಡಿಕೊಳ್ಳಬೇಕು. ನಮಗೆ ಯಾವುದೋ ಒಂದು ಆಸೆ ಈಡೇರಬೇಕಿದ್ದರೆ, ಅದು ಈಡೇರಲಿ ಎಂಬ ಸಂಕಲ್ಪ ಮಾಡಿ, ನಿಯಮಗಳನ್ನು ಪಾಲಿಸಿ, ಭಕ್ತಿಯಿಂದ ರಾಮಕೋಟಿ ಬರೆದರೆ, ಆ ಆಸೆ ಈಡೇರುತ್ತದೆ.

ಇನ್ನು ರಾಮಕೋಟಿ ಬರೆಯುವಾಗ, ದಿನಕ್ಕೆ ಇಷ್ಟು ಗಂಟೆ ಅಂತಾ ಮೀಸಲಿಡಿ. ರಾಮಕೋಟಿ ಬರೆಯಲು ಸಪರೇಟ್ ಆದ ಪೆನ್ನು ಪಸ್ತಕವನ್ನು ಖರೀದಿಸಿ ಬರೆಯಿರಿ. ಇನ್ನು ನೀವು ರಾಮಕೋಟಿಯನ್ನು ದೇವರಕೋಣೆಯಲ್ಲಿ ಕುಳಿತು ಬರೆಯುವುದು ಉತ್ತಮ. ಅಲ್ಲದೇ, ರಾಮಕೋಟಿ ಬರೆದ ಪುಸ್ತಕವನ್ನು ದೇವರಕೋಣೆಯಲ್ಲೇ ಇಡುವುದು ಉತ್ತಮ, ಇದರಿಂದ ರಾಮಕೋಟಿ ಬರೆದ ಪುಸ್ತಕ ಮೈಲಿಗೆಯಾಗುವುದಿಲ್ಲ.

ಇನ್ನು ರಾಮಕೋಟಿ ಬರೆಯುವಾಗ ಉತ್ತಮ ಮುಹೂರ್ತ ಕಂಡು ರಾಮಕೋಟಿ ಬರೆಯಿರಿ. ಹೆಣ್ಣು ಮಕ್ಕಳು ಮುಟ್ಟಾದ ದಿನಗಳಲ್ಲಿ, ಮನೆಯಲ್ಲಿ ಸೂತಕ, ಅಮೆ ಇರುವ ದಿನಗಳಲ್ಲಿ ರಾಮಕೋಟಿ ಬರೆಯಬಾರದು. ಇದನ್ನು ಬರೆಯುವಾಗ ಸ್ನಾನ ಮಾಡಿ, ಮಡಿಯಲ್ಲಿ ರಾಮಕೋಟಿ ಬರೆಯಬೇಕು. ಇನ್ನು ಇದನ್ನು ಬರೆಯುವಾಗ ಅರ್ಜೆಂಟ್‌ ಆಗಿ ಬರೆಯಬಾರದು. ಭಕ್ತಿಯಿಂದ ಸಮಯ ಮಾಡಿಕೊಂಡು ಬರೆಯಬೇಕು.

ಇನ್ನು ರಾಮಕೋಟಿಯನ್ನು ಬರೆಯುವ ಪುಸ್ತಕದಲ್ಲಿ ರಾಮನಾಮ ಮಾತ್ರ ಇರಬೇಕು. ಬೇರೆ ಏನೂ ಬರೆದಿರಬಾರದು. ಮುಖ್ಯವಾದ ವಿಚಾರವೆಂದರೆ, ಪುನರ್ವಸು ನಕ್ಷತ್ರದಂದು ರಾಮಕೋಟಿ ಬರೆಯಲು ಶುರುಮಾಡಿ, ಪುನರ್ವಸು ನಕ್ಷತ್ರದಂದೇ ಇದನ್ನು ಪೂರ್ಣಮಾಡಿದರೆ, ಉತ್ತಮವೆನ್ನಲಾಗಿದೆ. ಅಲ್ಲದೇ ನೀಲಿ ಬಣ್ಣದ ಪೆನ್ನಿಗಿಂತಲೂ ಹಸಿರು ಬಣ್ಣದ ಪೆನ್ನು ಬಳಸುವುದು ಒಳ್ಳೆಯದು.

ರಾಮನಾಮ ಬರೆದ ಬಳಿಕ ಆ ಪುಸ್ತಕಕ್ಕೆ ಪೂಜೆ ಮಾಡಿ, ನೈವೇದ್ಯ ಮಾಡಿ, ಆ ಪ್ರಸಾದವನ್ನು ಹಂಚಬೇಕು. ಬಳಿಕ, ಈ ರಾಮಕೋಟಿ ಬರೆದ ಪುಸ್ತಕವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ, ರಾಮನ ದೇವಸ್ಥಾನಕ್ಕೆ ಕೊಡಬೇಕು. ಅಲ್ಲಿ ಅವರು ಹೋಮ ಹವನದ ಸಂದರ್ಭದಲ್ಲಿ ರಾಮಕೋಟಿಯನ್ನು ಬಳಸುತ್ತಾರೆ.

ಈ ವಿಷಯಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ ಅಂತಾರೆ ಚಾಣಕ್ಯರು..

ದೇವರ ಪೂಜೆಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ..?

ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..

- Advertisement -

Latest Posts

Don't Miss