Monday, October 6, 2025

Latest Posts

ಸತ್ತ ವ್ಯಕ್ತಿಗೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸೋದ್ಯಾಕೆ..?

- Advertisement -

ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಹಲವು ನೀತಿ, ನಿಯಮಗಳನ್ನು, ಪದ್ಧತಿಗಳನ್ನು ಮಾಡಬೇಕಾಗುತ್ತದೆ. ಹುಟ್ಟಿದಾಗ ಜಾತಕ ಮಾಡಿಸುವುದರಿಂದ ಹಿಡಿದು, ಮರಣ ಹೊಂದಿದಾಗ, ಶುದ್ಧವಾಗುವವರೆಗೂ ಹಲವು ಪದ್ಧತಿಗಳಿದೆ. ಅಂತೆಯೇ ತೀರಿಹೋದಾಗ, ಶವಕ್ಕೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸಲಾಗುತ್ತದೆ. ಹಾಗಾದ್ರೆ ಇನ್ನು ಕೆಲವೇ ನಿಮಿಷಗಳಲ್ಲಿ ಮಣ್ಣಾಗಿ ಹೋಗುವ, ಚಿತೆ ಸೇರುವ ಶವಕ್ಕೆ ಯಾಕೆ ಸ್ನಾನ..? ಹೊಸ ವಸ್ತ್ರ ಅನ್ನೋ ಪ್ರಶ್ನೆಗೆ ಉತ್ತರ ತಿಳಿಯೋಣ ಬನ್ನಿ..

ಹಿಂದೂ ಧರ್ಮದ ಪ್ರಕಾರ, ಮೃತ ವ್ಯಕ್ತಿಗೆ ಗರುಡ ಪುರಾಣದಲ್ಲಿ ಬರುವ ಶ್ಲೋಕವನ್ನು ಹೇಳಿ ಸ್ನಾನ ಮಾಡಿಸಲಾಗುತ್ತದೆ. ಜೊತೆಗೆ ಮಂತ್ರೋಚ್ಛಾರಣೆ ಮಾಡುತ್ತ, ಗಂಗಾ ಜಲವನ್ನ ನೀರಿಗೆ ಸೇರಿಸಿ, ಸ್ನಾನ ಮಾಡಿಸಲಾಗುತ್ತದೆ. ಹೀಗೆ ಯಾಕೆ ಮಾಡೋದಂದ್ರೆ, ಇದರಿಂದ ವಾತಾವರಣ ಶುದ್ಧವಾಗುತ್ತದೆ. ಮೃತ ವ್ಯಕ್ತಿಯ ದೇಹದಿಂದ ಕೀಟಾಣುಗಳು, ಸೂಕ್ಷ್ಮಾಣುಗಳು ಹೊರ ಬರುತ್ತಿರುತ್ತದೆ. ಅವು ಎಷ್ಟು ಸೂಕ್ಷ್ಮವಾಗಿರುತ್ತದೆ ಎಂದರೆ, ಕಣ್ಣಿಗೆ ಕಾಣದಷ್ಟು.

ಅಂಥ ಸೂಕ್ಷಾಣುಗಳು ಎಲ್ಲೆಡೆ ಹರಡಬಾರದು ಎಂಬ ಕಾರಣಕ್ಕೆ, ಶವಕ್ಕೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸಲಾಗುತ್ತದೆ. ಶವ ಸಂಸ್ಕಾರಕ್ಕೆ ಬಂದವರು ಕೂಡ,ಸಂಸ್ಕಾರದ ಬಳಿಕ, ಮನೆಗೆ ಹೋಗಿ ಶುದ್ಧವಾಗಬೇಕು ಅನ್ನೋದು ಕೂಡಾ ಇದೇ ಕಾರಣಕ್ಕೆ. ಇನ್ನು ಸ್ನಾನ ಮಾಡಿಸಿದ ಬಳಿಕ ಮತ್ತು ವಸ್ತ್ರ ಹೊದಿಸುವ ಮುನ್ನ, ಗರುಡ ಪುರಾಣದ ಪ್ರಕಾರ, ಮೃತ ವ್ಯಕ್ತಿಯ ದೇಹಕ್ಕೆ ಚಂದನವನ್ನು ಲೇಪಿಸಬೇಕೆಂಬ ನಿಯಮವಿದೆ. ಹಲವರು ಇದನ್ನ ಪಾಲಿಸುತ್ತಾರೆ.

ಇನ್ನು ಶವಕ್ಕೆ ಹೊಸತಾದ ಬಿಳಿ ವಸ್ತ್ರವನ್ನೇ ಹೊದಿಸಬೇಕು. ಯಾಕಂದ್ರೆ ಹಿಂದೂ ಧರ್ಮದಲ್ಲಿ ಬಿಳಿ ಅನ್ನೋದು ಶೋಕ, ಮೃತ್ಯು, ಮೋಕ್ಷದ ಸಂಕೇತವಾಗಿದೆ. ಹಾಗಾಗಿ ಹೊಸದಾದ ಬಿಳಿ ವಸ್ತ್ರವನ್ನೇ ಶವಕ್ಕೆ ಹೊದಿಸಬೇಕಾಗುತ್ತದೆ. ನಂತರ ಚಿತೆಯ ಮೇಲೆ ಹೂವು, ಸೇರಿ 5 ತರಹದ ಕಟ್ಟಿಯನ್ನಿರಿಸಿ, ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

- Advertisement -

Latest Posts

Don't Miss