Monday, December 23, 2024

Latest Posts

ಒದ್ದೆಯಾದ ವಸ್ತ್ರದಲ್ಲೇ ಯಾಕೆ ಪ್ರದಕ್ಷಿಣೆ ಹಾಕಬೇಕು..?

- Advertisement -

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಹಲವರು ಇಂದಿಗೂ ಆ ಎಲ್ಲ ಪದ್ಧತಿಗಳನ್ನ ಆಚರಿಸುತ್ತಿದ್ದಾರೆ. ಅದರಲ್ಲೂ ಪೂಜೆಯ ವಿಷಯ ಬಂದ್ರೆ ಪದ್ಧತಿ ಪಾಲನೆ ಮಾಡುವಲ್ಲಿ ಹಿಂದೂಗಳು ಜಾಗೃತರಾಗಿರ್ತಾರೆ. ಆ ಪದ್ಧತಿಯಲ್ಲಿ ಒದ್ದೆ ವಸ್ತ್ರದಲ್ಲಿ ಪ್ರದಕ್ಷಿಣೆ ಹಾಕೋದು. ಇಂದು ನಾವು ಯಾಕೆ ಒದ್ದೆಯಾದ ವಸ್ತ್ರದಲ್ಲೇ ಪ್ರದಕ್ಷಿಣೆ ಹಾಕಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..

ಹಿಂದೂ ಧರ್ಮದಲ್ಲಿ ಬರೀ ದೇವಸ್ಥಾನದಲ್ಲಿ ದೇವರಿಗಷ್ಟೇ ಅಲ್ಲ, ಬದಲಾಗಿ ತುಳಸಿ, ಅರಳಿ ಮರಕ್ಕೂ ಪ್ರದಕ್ಷಿಣೆ ಹಾಕಲಾಗತ್ತೆ. ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ, ಹೆಣ್ಣು ಮಕ್ಕಳಿಗೆ ಗರ್ಭ ಧರಿಸಲು ಬೇಕಾದ, ಅವಶ್ಯಕ ಆಕ್ಸಿಜನ್ ಸಿಗತ್ತೆ ಎಂದು ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಅದೇ ರೀತಿ ನಾವು ದೇವಸ್ಥಾನದಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದರಿಂದ, ನಮಗೆ ಪ್ರಾಕೃತಿಕ ಶಕ್ತಿ ಪ್ರಾಪ್ತಿಯಾಗುತ್ತದೆ.

ಆ ಶಕ್ತಿ ಇನ್ನೂ ಹೆಚ್ಚಾಗಿ ದೊರೆಯಬೇಕು ಎಂದಲ್ಲಿ, ನಾವು ನಮ್ಮ ತಲೆಯನ್ನು ಒದ್ದೆ ಮಾಡಿಕೊಳ್ಳಬೇಕು. ಹಾಗಾಗಿಯೇ ತಲೆಸ್ನಾನ ಮಾಡಿ, ದೇವರ ದರ್ಶನಕ್ಕೆ ಹೋಗುತ್ತಾರೆ. ಇನ್ನೂ ಹೆಚ್ಚಿನ ಶಕ್ತಿ ಪ್ರಾಪ್ತಿಗಾಗಿ ಬಟ್ಟೆ ಒದ್ದೆ ಮಾಡಿಕೊಂಡು, ಅಂದರೆ ನದಿಯಲ್ಲಿ ಮಿಂದು, ದೇವರ ದರ್ಶನಕ್ಕೆ ಹೋಗಲಾಗುತ್ತದೆ. ಈ ಪ್ರಾಕೃತಿಕ ಶಕ್ತಿಯಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

- Advertisement -

Latest Posts

Don't Miss