ವಾಲ್ಮಿಕಿಯೇ ಯಾಕೆ ರಾಮಾಯಣವನ್ನು ಬರೆದರು..?

Spiritual: ನಮ್ಮ ದೇಶದ ಮಹಾಕಾವ್ಯಗಳು ಎಂದರೆ ರಾಮಾಯಣ ಮತ್ತು ಮಹಾಭಾರತ. ಮಹಾಭಾರತವನ್ನು ವ್ಯಾಸರು ಬರೆದರೆ, ರಾಮಾಯಣವನ್ನು ವಾಲ್ಮೀಕಿ ಬರೆದರಂತೆ. ಹಾಗಾದರೆ ವಾಲ್ಮೀಕಿ ಯಾಕೆ ರಾಮಾಯಣ ಬರೆದಿದ್ದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ವಾಲ್ಮೀಕಿ ಮಹರ್ಷಿ ರಾಮಾಯಣ ನಡೆದ ಬಳಿಕ, ರಾಮಾಯಣವನ್ನು ಬರೆದಿದ್ದಾರೆ. ಅಲ್ಲದೇ, ವಾಲ್ಮೀಕಿ ರಾಮನನ್ನು ಭೇಟಿಯಾಗಿದ್ದರು ಎಂದು ಕೂಡ ಹೇಳಲಾಗುತ್ತದೆ. ರಾಮ ಸೀತೆಯನ್ನು ಕರೆತಂದು ರಾಜ್ಯಭಾರ ಶುರು ಮಾಡಿದಾಗ, ನಾರದರ ಎದುರು ಪ್ರತ್ಯಕ್ಷರಾದ ಬ್ರಹ್ಮ, ಈಗ ರಾಮಾಯಣ ಬರೆಯುವ ಕಾಲ ಬಂದಿದೆ ಎನ್ನುತ್ತಾರೆ. ಅದಕ್ಕೆ ನಾರದರು ಹಾಗಾದರೆ, ಯಾರು ರಾಮಾಯಣವನ್ನು ಬರೆಯುತ್ತಾರೆಂದು ಕೇಳುತ್ತಾರೆ. ಅದಕ್ಕೆ ಬ್ರಹ್ಮ, ರಾಮಾಯಣವನ್ನು ಬರುವವರು ಈಗಾಗಲೇ ಭೂಮಿಯ ಮೇಲೆ ಜನ್ಮ ತಾಳಿದ್ದಾರೆ. ಅವರೇ ಸರಸ್ವತಿ ಪುತ್ರ ವಾಲ್ಮೀಕಿ ಎಂದು ಹೇಳುತ್ತಾರೆ.

ಅಲ್ಲದೇ, ನಾರದರು ಈ ಕ್ಷಣವೇ ಹೋಗಿ ವಾಲ್ಮೀಕಿಯ ಬಳಿ ರಾಮಾಯಣ ಬರೆಯುವ ಕಾಲ ಬಂದಿದೆ ಎಂದು ವಾಲ್ಮೀಕಿಯ ಬಳಿ ಹೇಳೆಂದು ಹೇಳುತ್ತಾರೆ. ನಾರದರು ವಾಲ್ಮೀಕಿಯ ಬಳಿ ಹೋಗಿ, ಬ್ರಹ್ಮದೇವರು ನಿಮಗೊಂದು ಆಜ್ಞೆ ಮಾಡಿದ್ದಾರೆ. ನೀವು ರಾಜ ಶ್ರೀರಾಮನ ಮಹಾಕಾವ್ಯವಾದ ರಾಮಾಯಣವನ್ನು ಬರೆಯಬೇಕು. ಇದರಿಂದ ನಿಮ್ಮನ್ನು ಸದಾ ಎಲ್ಲರೂ ನೆನೆಯುತ್ತಾರೆಂದು ಹೇಳುತ್ತಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ವಾಲ್ಮಿಕಿ, ಇದು ನನ್ನ ಸೌಭಾಗ್ಯವೆಂದು ಹೇಳುತ್ತಾರೆ.

ಬಳಿಕ ವಾಲ್ಮೀಕಿಯ ಎದುರು ಬ್ರಹ್ಮದೇವ ಪ್ರತ್ಯಕ್ಷವಾಗಿ, ನಿಮಗೆ ಸರಸ್ವತಿ ದೇವಿಯ ಕೃಪೆ ಇದ್ದು, ಇನ್ನು ಮುಂದೆ ರಾಮನ ರಹಸ್ಯ, ಈ ಹಿಂದೆ ರಾಮನ ಜೀವನದಲ್ಲಿ ನಡೆದ ಘಟನೆ, ಸೀತೆ, ಲಕ್ಷ್ಮಣ, ರಾಮ ಎದುರಿಸಿದ ರಾಕ್ಷಸರು ಎಲ್ಲರ ಜೀವನ ರಹಸ್ಯ ಮತ್ತು ಮುಂದೆ ರಾಮನ ಜೀವನದಲ್ಲಿ ನಡೆಯುವುದೆಲ್ಲ ನಿಮಗೆ ಗೊತ್ತಾಗುತ್ತದೆ. ಅದನ್ನರಿತು ನೀವು ರಾಮಾಯಣವನ್ನು ಬರೆಯಬೇಕೆಂದು ಬ್ರಹ್ಮ ಹೇಳುತ್ತಾನೆ. ಅದಕ್ಕೆ ವಾಲ್ಮೀಕಿ, ಆಗಲಿ ಎಂದು ಹೇಳುತ್ತಾರೆ.

ಅಲ್ಲದೇ, ಈ ಕೆಲಸಕ್ಕೆ ನನ್ನನ್ನೇ ಏಕೆ ಯೋಗ್ಯವೆಂದು ತಿಳಿದಿರಿ ಎಂದು ವಾಲ್ಮೀಕಿ ಬ್ರಹ್ಮನಲ್ಲಿ ಕೇಳುತ್ತಾರೆ. ಅದಕ್ಕೆ ಬ್ರಹ್ಮ, ಇದೆಲ್ಲ ಮೊದಲೇ ನಿರ್ಧರಿತವಾಗಿದೆ. ಮುಂದಿನ ದಿನಗಳಲ್ಲಿ ರಾಮನ ದರ್ಶನಭಾಗ್ಯ ಮತ್ತು ಸೀತೆಯ ಸೇವೆಯ ಭಾಗ್ಯವೂ ನಿಮಗೆ ದೊರಕಲಿದೆ ಎಂದು ಹೇಳುತ್ತಾರೆ.

ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..

ಉತ್ತಮ ಸಂತಾನಕ್ಕಾಗಿ ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು..

ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..

About The Author