ಈಗಿನ ಕಾಲದಲ್ಲೂ ಕೂಡ ಹಿಂದೂ ಧರ್ಮದಲ್ಲಿ ಕೆಲವರು, ನವರಾತ್ರಿ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ. ಯಾಕಂದ್ರೆ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆ ಮಾಡಲಾಗತ್ತೆ. ಹಾಗಾಗಿ ಈ ಸಮಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನೋದು ನಿಷೇಧವಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…!
ದೇವತೆಗಳು ಮತ್ತು ದಾನವರು ಸೇರಿ ಸಮುದ್ರ ಮಂಥನ ಮಾಡಿದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ವೇಳೆ ಬಂದ ಅಮೃತವನ್ನು ಕುಡಿದು ಚಿರಂಜೀವಿಯಾಗಲು, ದೇವತೆಗಳು ಮತ್ತು ದಾನವರು ಕಾತುರರಾಗಿದ್ದರು. ಇದೇ ವೇಳೆ ಮೋಹಿನಿ ರೂಪ ತಾಳಿ ಬಂದ ಶ್ರೀವಿಷ್ಣು, ದೇವತೆಗಳಿಗಷ್ಟೇ ಅಮೃತ ಕೊಡುತ್ತಿದ್ದ. ಹೀಗೆ ಮೋಹಿನಿ ಬರೀ ದೇವತೆಗಳಿಗೆ ಅಮೃತ ಕೊಟ್ಟರೆ, ನಮಗೆ ಸಿಗುವುದು ಕಷ್ಟವೆಂದು, ರಾಹು ಕೇತು ಎಂಬ ದಾನವರು ದೇವತೆಗಳ ವೇಷ ಧರಿಸಿ, ದೇವತೆಗಳ ಬಳಿ ಕುಳಿತುಕೊಂಡರು.
ಆಗ ಮೋಹಿನಿ ದೇವತೆಗಳೊಂದಿಗೆ, ರಾಹು ಕೇತುವಿಗೂ ಕೂಡ ಅಮೃತ ನೀಡಿದರು. ಆಗ ಇಂದ್ರ ದೇವ, ಇದೇನು ಮಾಡಿದೆ ಮೋಹಿನಿ, ಅವರು ರಾಹು ಕೇತು, ದೇವತೆಗಳ ವೇಷ ಧರಿಸಿ ಬಂದಿದ್ದಾರೆ ಎಂದ. ಆಗ ಮೋಹಿನಿ ವೇಷದಲ್ಲಿದ್ದ ವಿಷ್ಣು, ತನ್ನ ನಿಜರೂಪಕ್ಕೆ ಬಂದು, ಸುದರ್ಶನ ಚಕ್ರ ಬಳಸಿ ರಾಹು ಕೇತುವಿನ ಕುತ್ತಿಗೆ ಕತ್ತರಿಸುತ್ತಾನೆ.
ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಪ್ರಯೋಜನಗಳೇನು…?
ಈ ವೇಳೆ ರಾಹು ಮತ್ತು ಕೇತುವಿನ ದೇಹದಿಂದ ಸುರಿದ ರಕ್ತ, ಭೂಮಿಗೆ ಮುಟ್ಟುತ್ತದೆ. ಹೀಗೆ ರಾಹು ಕೇತುವಿನ ರಕ್ತದಿಂದ ಉದ್ಭವವಾದ ತರಕಾರಿಯೇ ಈರುಳ್ಳಿ ಮತ್ತು ಬೆಳ್ಳುಳ್ಳಿ ಅಂತಾ ಹೇಳಲಾಗುತ್ತದೆ. ಆದ್ದರಿಂದ ಇದನ್ನು ತಾಮಸಿಕ ಗುಣವುಳ್ಳ ತರಕಾರಿ ಅಂತಾ ಕರಿಯಲಾಗುತ್ತದೆ. ಈ ತರಕಾರಿಯನ್ನು ಹೆಚ್ಚಾಗಿ ತಿಂದರೆ, ಸಿಟ್ಟು, ತಾಮಸಿಕ ಗುಣ ಬರುತ್ತದೆ ಅಂತಾ ಹೇಳ್ತಾರೆ. ಈ ಕಾರಣಕ್ಕೆ ದೇವಿಯ ಪೂಜೆ ಮಾಡುವ ಸಂದರ್ಭದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನ ಸೇವಿಸಬಾರದು ಅಂತಾ ಹೇಳಲಾಗುತ್ತದೆ.