Friday, September 20, 2024

Latest Posts

ರಾತ್ರಿ ಊಟ ಮಾಡಬಾರದು.. ಯಾಕೆ ಗೊತ್ತಾ..?

- Advertisement -

ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯರಂತೆ ಉಣ್ಣಬೇಕು, ರಾತ್ರಿ ಬಡವನಂತೆ ಊಟ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಯಾಕಂದ್ರೆ ಬೆಳಿಗ್ಗೆ ಚೆನ್ನಾಗಿ ತಿಂಡಿ ತಿನ್ನುವುದರಿಂದಲೇ ನಮಗೆ ಶಕ್ತಿ ಸಿಗೋದು. ಮಧ್ಯಾಹ್ನದ ಊಟವನ್ನು ಸಮವಾಗಿ ಉಂಡಾಗಲೇ, ನಾವು ಗಟ್ಟಿಯಾಗಿರೋದು. ಮತ್ತು ರಾತ್ರಿ ಬಡವನಂತೆ ಕೊಂಚವೇ ಉಂಡರೆ, ನಮ್ಮ ಆರೋಗ್ಯ ಸರಿಯಾಗಿ ಇರತ್ತೆ. ಯಾರು ರಾತ್ರಿ ಚೆನ್ನಾಗಿ ತಿಂದು ಮಲಗುತ್ತಾರೋ, ಅವರಿಗೆ ಸದಾ ಹೊಟ್ಟೆ ಸಮಸ್ಯೆ ಇರುತ್ತದೆ. ಹಾಗಾಗಿ ರಾತ್ರಿ ಊಟವನ್ನು ಮಿತವಾಗಿ ಮಾಡಬೇಕು. ಆದ್ರೆ ಆಯುರ್ವೇದದ ಪ್ರಕಾರ, ರಾತ್ರಿ ಉಪವಾಸವಿರಬೇಕಂತೆ. ಹಾಗಾದ್ರೆ ಯಾಕೆ ರಾತ್ರಿ ಊಟ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ವಾಗ್ಭಟರ ಪ್ರಕಾರ, ಸೂರ್ಯನ ಕಿರಣ ತಾಕದ ಮತ್ತು ವಾಯುವಿನ ಸ್ಪರ್ಶವಿಲ್ಲದ ಅಡುಗೆಯನ್ನ ಎಂದಿಗೂ ತಿನ್ನಬಾರದಂತೆ. ಇದು ನಿಮ್ಮ ನಾಲಿಗೆಗೆ ರುಚಿ ಕೊಡಬಹುದು. ಆದ್ರೆ ಆರೋಗ್ಯಕ್ಕೇನೂ ಲಾಭ ಕೊಡುವುದಿಲ್ಲ. ಹಾಗಾಗಿ ಇಂಥ ಆಹಾರ ಸೇವನೆ ಮಾಡಬಾರದು. ಹಾಗಾಗಿಯೇ ಅಡುಗೆಯನ್ನ ಸೂರ್ಯನ ಬೆಳಕಿರುವಾಗ ಮತ್ತು ಗಾಳಿ ಬೀಸುವ ಸಂದರ್ಭದಲ್ಲಿ ಮಾಡಬೇಕು. ಮತ್ತು ಸೂರ್ಯಾಸ್ತವಾಗುವುದರೊಳಗೆ ಆ ಅಡುಗೆಯನ್ನ ತಿಂದು ಮುಗಿಸಬೇಕು.

ಇದಾದ ಬಳಿಕ ಅವಶ್ಯಕತೆ ಇದ್ದರೆ, ನೀರು ಕುಡಿಯಬಹುದು. ಇಲ್ಲವಾದಲ್ಲಿ ಹಾಗೆ ಮಲಗಬೇಕು. ಮತ್ತೆ ಮರುದಿನ ಬೆಳಿಗ್ಗೆ ಹೊಟ್ಟೆತುಂಬ ತಿನ್ನಬೇಕು. ಈ ರೀತಿಯಾಗಿ ಪ್ರತಿದಿನ ರಾತ್ರಿ ಉಪವಾಸ ಮಾಡಬೇಕು. ಯಾಕೆ ಉಪವಾಸ ಮಾಡಬೇಕು ಅಂದ್ರೆ. ನಾವು ತಿಂದ ಆಹಾರ ಜೀರ್ಣವಾಗಲು 8 ಗಂಟೆ ಬೇಕಾಗುತ್ತದೆ. ಹಾಗಾಗಿ ಸಂಜೆ 6 ಗಂಟೆಗೆ ಚೆನ್ನಾಗಿ ತಿಂದುಬಿಡಿ. ಮತ್ತು ರಾತ್ರಿ 8 ಗಂಟೆಗೆ ನಿದ್ದೆ ಮಾಡಿ ಬಿಡಿ. ಇದರಿಂದ ಬೆಳಿಗ್ಗೆ ಬೇಗ ಏಳಲೂಬಹುದು. ಮತ್ತು ನೀವು ತಿಂದ ಆಹಾರ ಆರಾಮವಾಗಿ ಜೀರ್ಣವಾಗುತ್ತದೆ. ಮತ್ತು ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ.

ಮಂಡಿ, ಮೊಣಕೈ, ಕಂಕುಳ ಚರ್ಮದ ಬಣ್ಣವನ್ನ ಈ ರೀತಿ ತಿಳಿಯಾಗಿಸಿ..

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ಇದೊಂದೇ ವಸ್ತು ಸಾಕು..

- Advertisement -

Latest Posts

Don't Miss