Spiritula Story: ಮದುವೆಗೆ ರೇಷ್ಮೆ ಬಟ್ಟೆ ಧರಿಸಬೇಕು ಎಂಬ ನಿಯಮವಿದೆ. ಸಾಮಾನ್ಯ ದಿನಗಳಲ್ಲಿ, ಮಡಿ ಆಚರಿಸುವಾಗ ಕಾಟನ್ ಬಟ್ಟೆ ಧರಿಸಬೇಕು ಅಂತಾ ಹೇಳುತ್ತಾರೆ. ಇದನ್ನು ಸುಮ್ಮನೆ ಹೇಳುವುದಿಲ್ಲ. ಬದಲಾಗಿ ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ, ನೈಲಾನ್, ರೇಯಾನ್, ಪಾಲಿಸ್ಟರ್ ನಂಥ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಆರೋಗ್ಯಕ್ಕೆ, ಆಧ್ಯಾತ್ಮಕ್ಕೆ ಸರಿಹೊಂದುವಂಥ ಬಟ್ಟೆ ಅಂದ್ರೆ ರೇಷ್ಮೆ ಮತ್ತು ಕಾಟನ್ ಬಟ್ಟೆ. ಏಕೆಂದರೆ ರೇಷ್ಮೆ ಮತ್ತು ಹತ್ತಿ ಬಟ್ಟೆಯಲ್ಲಿ ದೈವಕತೆಯನ್ನು ಆಕರ್ಷಿಸುವ ಗುಣವಿದೆ. ರೇಷ್ಮೆ ಹತ್ತಿ ಬಟ್ಟೆ ಬಿಟ್ಟು, ಉಳಿದ ಬಟ್ಟೆಗಳಿಗೆ ದೈವಿಕತೆಯನ್ನು ಆಕರ್ಷಿಸುವ ಶಕ್ತಿ ಇಲ್ಲ. ಅಲ್ಲದೇ ಅವರು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ರೇಷ್ಮೆ ಮತ್ತು ಹತ್ತಿ ಬಟ್ಟೆಯೇ ಧರಿಸಲು ಉತ್ತಮವಾಗಿದೆ.
ಅಲ್ಲದೇ ರೇಷ್ಮೆ, ಹತ್ತಿ ಬಟ್ಟೆ ಆರೋಗ್ಯಕ್ಕೂ ಉತ್ತಮ. ಇನ್ನು ಹೊಲೆದ ಬಟ್ಟೆಗಿಂತ, ಹೆಚ್ಚು ಹೊಲಿಗೆ ಬೀಳದ ಬಟ್ಟೆ ಧರಿಸಬೇಕು. ಇದರಿಂದ ಬಟ್ಟೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದಲೇ ಭಾರತೀಯರು ಸೀರೆ, ಲಂಗ ರವಿಕೆ, ಪುರುಷರು ಶಲ್ಯ, ಪಂಚೆ ಧರಿಸುತ್ತಿದ್ದರು. ಇಂಥ ಬಟ್ಟೆ ಧರಿಸಿ, ಪೂಜೆ, ಮಂತ್ರೋಚ್ಛಾರಣೆಯಂಥ ಆಧ್ಯಾತ್ಮಿಕ ಕಾರ್ಯ ಮಾಡಿದಾಗ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ.
ಹಿಂದೂಗಳಲ್ಲಿ ಹಸುವಿನ ಜೊತೆ ಶ್ವಾನಕ್ಕೂ ಪ್ರಾಶಸ್ತ್ಯ ನೀಡಲಾಗಿದೆ.. ಯಾಕೆ ಗೊತ್ತಾ..?
ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?