ಖ್ಯಾತ ಜ್ಯೋತಿಷಿ ನಾರಾಯಣ ರೆಡ್ಡಿ, ರಾಜ್ಯ ಮತ್ತು ದೇಶದ ರಾಜಕೀಯ ಬೆಳವಣಿಗೆ ಬಗ್ಗೆ ಭವಿಷ್ಯ ನುಡಿದಿದ್ದು, ಮೋದಿ ಮತ್ತೆ ಪ್ರಧಾನಿಯಾಗ್ತಾರಾ..? ಆಗಲ್ವಾ ಅನ್ನೋ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.
ನರೇಂದ್ರ ಮೋದಿಯವರು ಪ್ರಯಾಣ ವಿಚಾರದಲ್ಲಿ ಸಾಕಷ್ಟು ಜಾಗರೂಕತೆಯಿಂದ ಇರಬೇಕು. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆ ಪ್ರಧಾನಿಯವರಿಗೆ ಮೊದಲಿನಷ್ಟು ಸುಲಭವಾಗಿಲ್ಲ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ, ಯೋಚನೆ ಮಾಡಿ ತೆಗೆದುಕೊಳ್ಳಬೇಕೆಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ಇಷ್ಟೇ ಅಲ್ಲದೇ, ಪ್ರಧಾನಿ ಮೋದಿಯವರಿಗೆ ಸ್ತ್ರೀ ವಿಷಯದಲ್ಲಿ, ಸ್ತ್ರೀ ಸಂಬಂಧಪಟ್ಟ ಪಕ್ಷದವರಿಂದ ಕಂಠಕವಾಗುವ ಸಾಧ್ಯತೆ ಇದೆ. ಪ್ರಧಾನಿ ಮೋದಿಗೆ ಮುಂದಿನ 3 ವರ್ಷಗಳು ಉತ್ತಮವಾದ ಯೋಗವಿದ್ದು, ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಗುವ ಸಾಧ್ಯತೆಯೂ ಇದೆ.
ಪ್ರಧಾನಿ ಮೋದಿಗೆ ಧ್ವಜಕೀರ್ತಿ ಯೋಗವಿದೆ. ಧ್ವಜ ಎಂದರೆ ಸರ್ಕಾರವಾಗಿದ್ದು, ಸರ್ಕಾರದಲ್ಲಿ ಕೀರ್ತಿ ಪಡೆಯುವ ಯೋಗ ಪ್ರಧಾನಿ ಮೋದಿಯವರಿಗಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.