ಚಳಿಗಾಲದಲ್ಲಿ ದೊಡ್ಡವರಿಗೂ ಶೀತ, ಕೆಮ್ಮು, ಜ್ವರ ಬರುವ ಸಂಭವವಿರುತ್ತದೆ. ಹಾಗಾಗಿ ನಮಗೆ ಬೇಕಾದ ಆರೋಗ್ಯಕರ ಆಹಾರ ಸೇವನೆಯನ್ನ ಮಾಡ್ತೇವೆ. ಸ್ವೇಟರ್ ಧರಿಸಿ, ಬೆಚ್ಚಗಿರ್ತೇವೆ. ಆದ್ರೆ ಮಕ್ಕಳಿಗೂ ಚಳಿಗಾಲದ ಎಫೆಕ್ಟ್ ಹೆಚ್ಚಾಗಿರತ್ತೆ. ಆದ್ರೆ ಅದನ್ನ ಹೇಳೋಕ್ಕೆ ಅವರಿಗೆ ಆಗಲ್ಲ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಬಗ್ಗೆಯೂ ಕೂಡ ನಾವು ಕೇರ್ ತೆಗೆದುಕೊಳ್ಳಬೇಕಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಟಿಪ್ಸ್ ಅಂದ್ರೆ ಮಗುವಿನ ತುಟಿಯನ್ನ ಸುರಕ್ಷಿತವಾಗಿ ಇಡೋದು. 6 ತಿಂಗಳು ಮೇಲ್ಪಟ್ಟ ಮಗುವಿನ ತುಟಿ, ಚಳಿಗಾಲದಲ್ಲಿ ಒಡೆಯುತ್ತಿದ್ದರೆ, ತುಟಿಗೆ ಕೊಂಚ ತುಪ್ಪದಿಂದ ಮಸಾಜ್ ಮಾಡಿ. ರಾತ್ರಿ ಮಗು ಮಲಗಿದಾಗ, ಮಗುವಿನ ತುಟಿಗೆ ಕೊಂಚ ತುಪ್ಪದ ಮಸಾಜ್ ಮಾಡಬಹುದು. ದಿನದಲ್ಲಿ ಮಾಡಿದ್ರೆ, ಮಗು ಅದಕ್ಕೆ ನಾಲಿಗೆ ಹಚ್ಚಿ, ತುಪ್ಪ ಒರೆಸಿ ಬಿಡುತ್ತದೆ. ಹಾಗಾಗಿ ತುಟಿಗೆ ರಾತ್ರಿ ಮಲಗುವಾಗ, ತುಪ್ಪದ ಮಸಾಜ್ ಮಾಡಿ.
ಚಳಿಗಾಲದಲ್ಲಿ ಖಂಡಿತ ಕುಡಿಯಿರಿ ಈ ಹೆಲ್ದಿ ಡ್ರಿಂಕ್..
ಎರಡನೇಯ ಟಿಪ್ಸ್. ರಾತ್ರಿ ಮಲಗುವಾಗ ಕೊಂಚ ಸಾಸಿವೆ ಎಣ್ಣೆ ತೆಗೆದುಕೊಂಡು, ಮಗುವಿನ ಪಾದಕ್ಕೆ ಮಸಾಜ್ ಮಾಡಿ, ಸಾಕ್ಸ್ ಹಾಕಿ ಮಲಗಿಸಿ. ಇದರಿಂದ ದೇಹದಲ್ಲಿ ಉಷ್ಣತೆ ಮತ್ತು ತಂಪಿನ ಪ್ರಮಾಣ ಸರಿಯಾಗಿರುತ್ತದೆ.
ಮೂರನೇಯ ಟಿಪ್ಸ್. ರಾತ್ರಿ ಮಲಗುವಾಗ, ನಿಮ್ಮ ಮಗುವಿಗೆ ಬೆಚ್ಚಗಿನ ಬಟ್ಟೆ, ಸ್ವೆಟರ್, ಸಾಕ್ಸ್, ಟೊಪ್ಪಿಗೆ ಹಾಕುವುದನ್ನು ಮರಿಯಬೇಡಿ. ಚಳಿಗಾಲದಲ್ಲಿ ಮಗು ಬೆಚ್ಚಗಿದ್ದಷ್ಟು ಶೀತ, ಜ್ವರವೆಲ್ಲ ಬರುವುದು ತಪ್ಪುತ್ತದೆ.
ನಾಲ್ಕನೇಯ ಟಿಪ್ಸ್. ಚಳಿಗಾಲದಲ್ಲಿ ವಾರದಲ್ಲಿ ಮೂರು ಬಾರಿಯಾದ್ರೂ ಮಗುವಿಗೆ ರಾತ್ರಿ ಮಲಗುವಾಗ ಅರಿಶಿನ ಮತ್ತು ಕಲ್ಲುಸಕ್ಕರೆ ಹಾಕಿದ ಹಾಲು ಕೊಡಿ. ಆದ್ರೆ ಹಾಲು ತಯಾರಿಸುವಾಗ ಕೊಂಚವೇ ಅರಿಶಿನ ಹಾಕಿ. ಹೆಚ್ಚು ಅರಿಶಿನ ಬಳಸಿದ್ರೆ, ಮಗುವಿಗೆ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೊಂಚ ಅರಿಶಿನ, ಮತ್ತು ಕಲ್ಲುಸಕ್ಕರೆ ಹಾಕಿ, ಹಾಲನ್ನ ಚೆನ್ನಾಗಿ ಕುದಿಸಿ, ಆರಿಸಿ, ಮಗುವಿಗೆ ಕುಡಿಯಲು ಕೊಡಿ.
ಚಳಿಗಾಲದಲ್ಲಿ ಈ ನೆಲ್ಲಿಕಾಯಿ ಪದಾರ್ಥ ತಿಂದ್ರೆ, ನೀವು ಹೆಲ್ದಿಯಾಗಿರ್ತೀರಿ..
ಐದನೇಯ ಟಿಪ್ಸ್. ಮಗುವಿಗೆ ಪ್ರತಿದಿನ ಸ್ನಾನವಾದ ಬಳಿಕ, ಲೈಟ್ ಆಗಿ ದೇಹಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಕೊಂಚವೇ ಎಣ್ಣೆ ತೆಗೆದುಕೊಂಡು, ಇಡೀ ದೇಹಕ್ಕೆ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಮಗುವಿನ ಚರ್ಮ ನಯವಾಗಿರುತ್ತದೆ. ಇಲ್ಲವಾದಲ್ಲಿ, ಚರ್ಮ ರಫ್ ಆಗಿರುತ್ತದೆ.
ಆರನೇಯ ಟಿಪ್ಸ್. 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನುಣ್ಣಗೆ ಪುಡಿ ಮಾಡಿ, ಚಿಕ್ಕ ಚಿಕ್ಕದಾಗಿ ತಯಾರಿಸಿದ ಡ್ರೈ ಫ್ರೂಟ್ಸ್ ಲಡ್ಡು ಕೊಡಿ. ಇದರಿಂದ ದೇಹದಲ್ಲಿ ಉಷ್ಣತೆ ಸಮ ಪ್ರಮಾಣದಲ್ಲಿರುತ್ತದೆ. ಅಲ್ಲದೇ, ಮಗು ಗಟ್ಟಿಮುಟ್ಟಾಗಿರಲು ಇದು ಸಹಾಯ ಮಾಡುತ್ತದೆ. ಚಿಕ್ಕಂದಿನಲ್ಲೇ ಮಗುವಿನ ಮುಖದಲ್ಲಿ ಗ್ಲೋ ಬರುತ್ತದೆ.
ಏಳನೇಯ ಟಿಪ್ಸ್. ಮಗುವಿಗೆ ಯಾವುದೇ ಕಾರಣಕ್ಕೂ ತಣ್ಣಗಿನ ಆಹಾರ, ಫ್ರಿಜ್‌ನಲ್ಲಿರಿಸದ ಆಹಾರವನ್ನು ಕೊಡಲೇಬೇಡಿ. ಯಾವಾಗಲೂ ಉಗುರು ಬೆಚ್ಚಗಿನ ನೀರು, ಬಿಸಿ ಮಾಡಿದ ಆಹಾರವನ್ನೇ ಕೊಡಿ. ಇದರಿಂದ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.