ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ..

ಚಳಿಗಾಲ ಶುರುವಾಗಿದೆ. ಈ ಸಮಯದಲ್ಲಿ ತಲೆಕೂದಲು ಉದುರುವುದು, ತ್ವಚೆ ಒಣಗುವುದೆಲ್ಲ ಸಾಮಾನ್ಯ. ಹಾಗಾಗಿ ನಾವಿಂದು ಚಳಿಗಾಲದಲ್ಲಿ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1

ಮೊದಲನೇಯದಾಗಿ ಚಳಿಗಾಲವೆಂದು ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಹಲವರಿಗೆ ಚಳಿಗಾಲದಲ್ಲಿ  ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿದ್ರೆ, ನೆಮ್ಮದಿ ಎನ್ನಿಸುತ್ತದೆ. ಆದ್ರೆ ಇದೇ ಕಾರಣದಿಂದ ಅವರ ದೇಹ ಒಣಗಿದಂತಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಇದು ತ್ವಚೆಗೆ ಹಾನಿಯುಂಟು ಮಾಡುತ್ತದೆ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

ಎರಡನೇಯದಾಗಿ ಕೂದಲನ್ನೂ ಸಹ ನೀರು ಉಗುರು ಬೆಚ್ಚಗಿನ ನೀರಿನಿಂದಲೇ ತೊಳೆಯಿರಿ. ಯಾವುದೇ ಕಾರಣಕ್ಕೂ ಬಿಸಿ ನೀರಿನಿಂದ ತೊಳೆಯಬೇಡಿ. ಯಾಕಂದ್ರೆ ಇದರಿಂದ ಕೂದಲು ಒಣಗಿ ಉದುರಿ ಹೋಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೂದಲು ತುಂಬಾ ಉದುರುತ್ತದೆ. ಹಾಗಾಗಿ ಉತ್ತಮ ಶ್ಯಾಂಪು ಬಳಕೆ, ಕೂದಲಿಗೆ ಬೆಚ್ಚಗಿನ ಎಣ್ಣೆ ಮಸಾಜ್ ಖಂಡಿತ ಮಾಡಿ.

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2

ಮೂರನೇಯದಾಗಿ ನಿಮ್ಮ ತ್ವಚೆ ಒಣಗಿದ್ದರೆ, ಮಾಯಿಶ್ಚರೈಸಿಂಗ್ ಕ್ರೀಮ್ ಅಥವಾ ತೆಂಗಿನ ಎಣ್ಣೆ ಬಳಸಿ. ರಾತ್ರಿ ಮಲಗುವಾಗ ನಿಮ್ಮ ತ್ವಚೆಗೆ ಎಣ್ಣೆಯಿಂದ ಮಸಾಜ್ ಮಾಡಿ ಮಲಗಿ. ಆಫೀಸಿಗೆ ಹೋಗುವಾಗ ಮಾಯಿಶ್ಚರೈಸಿಂಗ್ ಕ್ರೀಮ್ ಬಳಸಿ. ನಿಮ್ಮ ತುಟಿಯ ರಕ್ಷಣೆ ಕೂಡ ನೀವು ಮಾಡಬೇಕಾಗುತ್ತದೆ. ಲಿಪ್ ಬಾಮ್, ವ್ಯಾಸಲಿನ್, ಕೆನೆ, ತುಪ್ಪ, ಬೆಣ್ಣೆ ಬಳಸಿ, ನಿಮ್ಮ ತುಟಿಯನ್ನ ಚಂದವಾಗಿರಿಸಿ.

ನಾಲ್ಕನೇಯದಾಗಿ ಬೆಚ್ಚಗಿರಿ. ಚಳಿಗಾಲದಲ್ಲಿ ಸ್ವೆಟರ್, ಶಾಲ್, ಕ್ಯಾಪ್ ಎಲ್ಲವನ್ನೂ ಧರಿಸಿ, ಬೆಚ್ಚಗಿದ್ದರೆ, ನಿಮ್ಮ ತ್ವಚೆ ಉತ್ತಮವಾಗಿರುವುದಲ್ಲದೇ, ನಿಮಗೆ ಜ್ವರ ಬರುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಆದಷ್ಟು ಬೆಚ್ಚಗಾಗಿರಿ.

About The Author