Friday, June 20, 2025

Latest Posts

ಹೆಣ್ಣು ಮಕ್ಕಳಿಗೆ ಇಂಥ ಪುರುಷರು ಇಷ್ಟವಾಗ್ತಾರಂತೆ..!

- Advertisement -

ಹೆಚ್ಚಿನ ಪುರುಷರಿಗೆ ತಮ್ಮನ್ನು ಇಷ್ಟಪಡುವ ಹೆಣ್ಣಿನ ಎದುರು ಹೇಗಿರಬೇಕು ಅನ್ನೋದೇ ಗೊತ್ತಿರೋದಿಲ್ಲಾ. ಆದ್ರೆ ಕೆಲವರು ತಮ್ಮ ನಾರ್ಮಲ್ ಸ್ವಭಾವದಿಂದಲೇ ಹೆಣ್ಣು ಮಕ್ಕಳ ಮನಸ್ಸನ್ನು ಗೆಲ್ತಾರೆ. ಹಾಗಾದ್ರೆ ಓರ್ವ ಹೆಣ್ಣು ಓರ್ವ ಪುರುಷನನ್ನು ಮೆಚ್ಚಬೇಕಾಗಿದ್ದಲ್ಲಿ, ಅವನಿಗಿರಬೇಕಾದ ಗುಣಗಳೇನು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಇದು ಹೆಣ್ಣು ಮಕ್ಕಳಿಗೂ ಕೂಡ ಅನ್ವಯಿಸುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಹೊಂಬಾಳೆ ಫಿಲಂಸ್ ನಿರ್ಮಾಣದ “ಧೂಮಂ” ಆರಂಭ.. ಪವನ್ ಕುಮಾರ್ ಡೈರೆಕ್ಷನ್..

ನಂಬಿಕೆ ಉಳಿಸಿಕೊಳ್ಳುವ ಗುಣ. ಕೆಲ ಹುಡುಗರು ಪ್ರೀತಿಗೆ ಒಪ್ಪಿಕೊಳ್ಳುವ ತನಕ ನಂಬಿಕಸ್ಥರಂತೆಯೇ ಇರುತ್ತಾರೆ. ಆದ್ರೆ ಪ್ರೀತಿ ಮಾಡಿದ ಕೆಲ ದಿನಗಳ ಬಳಿಕ, ಅವರ ನಿಜರೂಪ ಬಯಲಿಗೆ ಬರುತ್ತದೆ. ಹಾಗಾಗಿ ನೀವು ಹೇಗಿದ್ದೀರೋ ಹಾಗೇ ಎದುರಿನವರ ಬಳಿ ನಡೆದುಕೊಳ್ಳಬೇಕು ವಿನಃ, ಪ್ರೀತಿ ಒಲಿಯಲಿಿ ಎಂದು ನಂಬಿಕಸ್ಥರಂತೆ ನಾಟಕ ಮಾಡಬೇಡಿ. ನಂಬಿಕೆ ಉಳಿಸಿಕೊಳ್ಳುವ ಪುರುಷನನ್ನು ಹೆಣ್ಣು ಹೆಚ್ಚು ಇಷ್ಟ ಪಡುತ್ತಾಳೆ.

ಭಾವನೆಯನ್ನು ಗೌರವಿಸಿ. ಹೆಣ್ಣಿನ ಭಾವನೆಯನ್ನು ಯಾರು ಗೌರವಿಸುತ್ತಾರೋ, ಅವರನ್ನು ಹೆಣ್ಣು ಇಷ್ಟಪಡುತ್ತಾಳೆ. ಹೆಣ್ಣಿನ ದೇಹವನ್ನಷ್ಟೇ ಪ್ರೀತಿಸುವ, ಆಕೆಯ ಭಾವನೆಯನ್ನು ಕಡೆಗಣಿಸುವ ಪುರುಷನನ್ನು ಸ್ತ್ರೀ ಎಂದಿಗೂ ಇಷ್ಟಪಡುವುದಿಲ್ಲ ಎನ್ನುತ್ತಾರೆ ಚಾಣಕ್ಯರು.

‘ಕಾಂತಾರ’ ನೋಡಿ ಮಾತೇ ಹೊರಡುತ್ತಿಲ್ಲ ಎಂದು ಸುದೀಪ್..

ಸಭ್ಯರಾಗಿರಿ. ಸಭ್ಯಸ್ಥ ಹುಡುಗನನ್ನು ಹೆಣ್ಣು ಇಷ್ಟಪಡುತ್ತಾಳೆ. ಸಭ್ಯಸ್ಥನಾಗಿರುವುದು ಬೇರೆ ಸಭ್ಯನಂತೆ ನಟಿಸುವುದು ಬೇರೆ. ಹಾಗಾಗಿ ಸಭ್ಯತೆಯನ್ನು ರೂಢಿಸಿಕೊಂಡವರೊಂದಿಗೆ ಹೆಣ್ಣು ಸಂತೋಷವಾಗಿ ಸಂಸಾರ ಮಾಡುತ್ತಾಳೆ. ಎಲ್ಲರೆದರು ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದು, ಬೈದು ಅವಮಾನಿಸುವುದೆಲ್ಲ ಮಾಡುವ ಪುರುಷನನ್ನು ಹೆಣ್ಣು ಎಂದಿಗೂ ಇಷ್ಟಪಡುವುದಿಲ್ಲ.

- Advertisement -

Latest Posts

Don't Miss