Health Tips: ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ, ಮೂಳೆ ಟೊಳ್ಳಾಗಲು ಶುರುವಾಗುತ್ತದೆ. ಏಕೆಂದರೆ ಅವರು ಮನೆಗೆಲಸ, ಕೆಲವು ಆಫೀಸು ಕೆಲಸ, ಪತಿ ಮಕ್ಕಳ ಆರೈಕೆಯಲ್ಲಿ ಮುಳುಗಿ ಹೋಗಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದನ್ನೇ ಮರೆತು ಹೋಗುತ್ತಾರೆ. ಹಾಗಾದ್ರೆ ಮೂಳೆ ಗಟ್ಟಿಯಾಗಿರಿಸಲು ಮಹಿಳೆಯರು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ ಬನ್ನಿ..
ನಮ್ಮ ದೇಹಕ್ಕೆ ಕ್ಯಾಲ್ಶಿಯಂ ಅಂಶ ಬೇಕು ಅಂದ್ರೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆ ಮಾಡಬೇಕು. ಹಾಲು, ಮೊಸರು, ಮಜ್ಜಿಗೆ, ತುಪ್ಪ, ಚೀಸ್, ಪನೀರ್ ಇಂಥ ಆಹಾರಗಳನ್ನು ಸೇವಿಸಬೇಕು. ಆದರೆ ಇದು ಅಗತ್ಯಕ್ಕಿಂತ ಹೆಚ್ಚಾಗದಿರಲಿ. ಚೀಸ್ ಸೇವನೆ ವಾರಕ್ಕೊಮೆ ಮಾಡಿದರೆ ಸಾಕು. ಹಾಲು, ತುಪ್ಪ, ಮೊಸರು, ಮಜ್ಜಿಗೆಯನ್ನು ಪ್ರತಿದಿನ ಸೇವಿಸಿ.
ನೆನೆಸಿಟ್ಟ ಬಾದಾಮ್, ವಾಲ್ನಟ್, ಅಂಜೂರವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಪಾಲಕ್, ಆಲೂಗಡ್ಡೆ, ಖರ್ಜೂರ ಇವುಗಳನ್ನು ಸೇವಿಸಿದ್ದಲ್ಲಿ, ಕ್ಯಾಲ್ಶಿಯಂ ಅಂಶ ದೇಹ ಸೇರುತ್ತದೆ. ಪ್ರತಿದಿನ ಸಾರು, ಸಾಂಬಾರ್ ಮಾಡುವಾಗ ತೊಗರಿ ಬೇಳೆ ಬಳಸಿದರೆ ಉತ್ತಮ. ವಾರದಲ್ಲಿ ಎರಡರಿಂದ ಮೂರು ದಿನವಾದರೂ ಎಳ್ಳಿನ ಉಂಡೆ, ಶೇಂಗಾ ಉಂಡೆ ಸೇವಿಸಿ. ಈ ಉಂಡೆ ಮಾಡಲು ಬೆಲ್ಲ ಬಳಸಿ.
ಎಲ್ಲಕ್ಕಿಂತ ಮುಖ್ಯವೆಂದರೆ ನೀವು ದೇಹವನ್ನು ಹೆಚ್ಚು ಉಷ್ಣವಾಗಲು ಬಿಡಬಾರದು. ಹಾಗೆ ಹೆಚ್ಚು ತಂಪಾಗಲು ಬಿಡಬಾರದು. ಉಷ್ಣ ತಂಪು ಎರಡು ಸಮವಾಗಿ ಇರುವಂತೆ ಆಹಾರ ಸೇವನೆ ಮಾಡಬೇಕು. ಸರಿಯಾಗಿ ನೀರು ಕುಡಿಯಬೇಕು. ಹೊತ್ತಿಗೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಪ್ರತಿದಿನ ಒಂದೇ ಸಮಯಕ್ಕೆ ತಿಂಡಿ, ಊಟದ ಸೇವನೆ ಮಾಡಬೇಕು. ಹಣ್ಣು, ತರಕಾರಿ ಸೇವನೆ ಮಧ್ಯಾಹ್ನ ಮಾಡಿ. ಬಿಸಿ ಹಾಲು, ಊಟದೊಂದಿಗೆ ತುಪ್ಪದ ಸೇವನೆ ರಾತ್ರಿ ಮಾಡಿ. ಬೆಳಿಗ್ಗೆ, ಸಂಜೆ ವಾಕಿಂಗ್, ಯೋಗಾ ಮಾಡುವುದನ್ನು ಮರಿಯಬೇಡಿ.