Friday, November 22, 2024

Latest Posts

ಮಹಿಳೆಯರು ಕುಂಬಳಕಾಯಿ ಕತ್ತರಿಸಬಾರದಂತೆ.. ಯಾಕೆ ಗೊತ್ತಾ..?

- Advertisement -

Spiritual: ಕುಂಬಳಕಾಯಿ ಎಂದರೆ, ರುಚಿಕರವಾದ, ಆರೋಗ್ಯಕರವಾದ ತರಕಾರಿ. ಆದರೆ ಈ ತರಕಾರಿಯನ್ನು ಮಹಿಳೆಯರು ಕತ್ತರಿಸಬಾರದು ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿರುವ ಈ ನಂಬಿಕೆ ಬಗ್ಗೆ ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಈ ನಂಬಿಕೆಯ ಪ್ರಕಾರ, ಹೆಣ್ಣು ಮಕ್ಕಳು ಕುಂಬಳಕಾಯಿ ಕತ್ತರಿಸುವುದು ಎಂದರೆ, ಪುರುಷರನ್ನು ಕೊಲ್ಲುವುದು ಎಂಬ ಅರ್ಥ ಬರುತ್ತದೆಯಂತೆ. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ..

ಕೆಲವು ಪದ್ಧತಿಗಳ ಪ್ರಕಾರ, ಕುಂಬಳಕಾಯಿ ಮತ್ತು ಬೂದುಗುಂಬಳಕಾಯಿಯನ್ನು ಅಪ್ಪ ಅಮ್ಮ ಇದ್ದವರು ಕತ್ತರಿಸಬಾರದು ಎಂದು ಹೇಳಲಾಗುತ್ತದೆ. ಅಲ್ಲದೇ, ಬೂದುಗುಂಬಳಕಾಯಿಯನ್ನು ಕತ್ತರಿಸಿಯೇ ಮನೆಯ ಒಳಗೆ ತೆಗೆದುಕೊಂಡು ಹೋಗಬೇಕು ಅನ್ನುವ ಪದ್ಧತಿ ಇದೆ. ಏಕೆಂದರೆ, ಪೂರ್ತಿ ಬೂದುಗುಂಬಳಕಾಯಿ ತೆಗೆದುಕೊಂಡು ಮನೆಯೊಳಗೆ ಹೋದರೆ, ಅಪಶಕುನವಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಇನ್ನು ಅಪ್ಪ ಅಮ್ಮ ಇರುವವರು ಬೂದುಗುಂಬಳಕಾಯಿ ಕತ್ತರಿಸಿದರೆ, ಅಪ್ಪ ಅಮ್ಮನ ಸಾವಾದಾಗ, ಅವರ ಮೃತದೇಹ ಕಾಣಲು ಸಿಗುವುದಿಲ್ಲ ಅಂತಾ ಹೇಳಲಾಗುತ್ತದೆ.

ಇನ್ನು ಕೆಲವು ಕಡೆ ಕುಂಬಳಕಾಯಿಯನ್ನು ಪುರುಷನೆಂದು, ಮನೆಯ ಹಿರಿಯ ಮಗನೆಂದು ನಂಬಲಾಗುತ್ತದೆ. ಹಾಗಾಗಿ ಪುರುಷರು ಮೊದಲು ಕುಂಬಳಕಾಯಿಯನ್ನು ಕತ್ತರಿಸಿ, ಬಳಿಕ ಸ್ತ್ರೀಯರಿಗೆ ಕೊಡಬೇಕು. ನಂತರ ಸ್ತ್ರೀಯರು, ಅದನ್ನು ಪೂರ್ತಿಯಾಗಿ ಕತ್ತರಿಸಿ, ಪದಾರ್ಥ ತಯಾರಿಸಬೇಕು. ಮಹಿಳೆಯರೇ ಕುಂಬಳಕಾಯಿ ಕತ್ತರಿಸಿದರೆ, ಮಹಿಳೆ ಪುರುಷನನ್ನು ಬಲಿ ಕೊಟ್ಟಳೆಂದು ನಂಬಲಾಗುತ್ತದೆ.

ಮನೆಯ ಉದ್ಧಾರದ ವಿಷಯದಲ್ಲಿ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನೀವು ಆರ್ಥಿಕವಾಗಿ ಸಬಲರಾಗಿರಬೇಕು ಅಂದ್ರೆ ವಿದುರನ ಈ ಮಾತುಗಳನ್ನು ಕೇಳಿ..

ಬ್ರಾಹ್ಮಿ ಮುಹೂರ್ತದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಗೊತ್ತಾ..?

- Advertisement -

Latest Posts

Don't Miss